ಮಿದುಳಿನ ಆರೋಗ್ಯಕ್ಕೆ ಪೂರಕ ಆಹಾರಗಳು; ಅಲ್ಝೈಮರ್ ತಡೆಗೆ ಇಲ್ಲಿವೆ ಸಿಂಪಲ್ ಟಿಪ್ಸ್‌..

ಸೆಪ್ಟೆಂಬರ್ 21ರಂದು ವಿಶ್ವ ಅಲ್ಝೈಮರ್ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ನರವಿಜ್ಞಾನಿ ಡಾ. ವೆಂಕಟ್ರಾಮನ್ ಕಾರ್ತಿಕೇಯನ್ ಸಲಹೆಗಳನ್ನು ನೀಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಕೆಲಸದ ಒತ್ತಡದಿಂದಾಗಿ ಊಟ ಬಿಡುವುದು, ಅನಗತ್ಯ ವಿಚಾರಗಳಿಗೆ ಒತ್ತಡಕ್ಕೆ ಒಳಗಾಗುವುದು ಮತ್ತು ಲಕ್ಷಾಂತರ ಯೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡು ನಿದ್ದೆ ಬಿಡುವುದು ಇತ್ತೀಚೆಗೆ ಸಾಮಾನ್ಯ ವಿಚಾರವಾಗಿಬಿಟ್ಟಿದೆ. ಹೀಗಾಗಿ ನಮ್ಮ ದೈನಂದಿನ ಜೀವನದಲ್ಲಿ ಸಣ್ಣ ಮತ್ತು ಪ್ರಮುಖ ವಿಚಾರಗಳನ್ನೇ ಮರೆತುಬಿಡುತ್ತೇವೆ.

ನಾವು ಮರೆಯುವ ಸಣ್ಣ ಸಣ್ಣ ವಿಚಾರಗಳು ಕಾಲಾನಂತರದಲ್ಲಿ, ನಮ್ಮ ಮಿದುಳು ಉದ್ದೇಶಪೂರ್ವಕವಾಗಿ ಪ್ರಮುಖ ವಿಚಾರಗಳನ್ನೂ ಮರೆತು ಬಿಡುವಂತೆ ಮಾಡುತ್ತದೆ. ಇದು ಅಲ್ಝೈಮರ್ಸ್‌ಗೆ ಕಾರಣವಾಗಬಹುದು. ಇದು ಮಿದುಳಿನ ನಿರ್ದಿಷ್ಟ ಭಾಗದಲ್ಲಿನ ಕೆಲವು ಜೀವಕೋಶಗಳು ಸ್ವಯಂಚಾಲಿತವಾಗಿ ನಾಶವಾಗುವಂತೆ ಮಾಡುತ್ತದೆ. ಮಿದುಳಿನಲ್ಲಿ ತ್ಯಾಜ್ಯ ಉತ್ಪನ್ನದ ಶೇಖರಣೆಯಿಂದಾಗಿ ಇದು ಮುಖ್ಯವಾಗಿ ಸಂಭವಿಸುತ್ತದೆ.

ಸೆಪ್ಟೆಂಬರ್ 21ರಂದು ವಿಶ್ವ ಅಲ್ಝೈಮರ್ ದಿನವನ್ನಾಗಿ ಆಚರಿಸಲಾಗುತ್ತದೆ. ಹೀಗಾಗಿ ಮಿದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಡಾ. ವೆಂಕಟ್ಸ್ ನ್ಯೂರೋ ಸೆಂಟರ್‌ನ ಸಲಹೆಗಾರ ನರವಿಜ್ಞಾನಿ ಡಾ. ವೆಂಕಟ್ರಾಮನ್ ಕಾರ್ತಿಕೇಯನ್ ಸಲಹೆಗಳನ್ನು ನೀಡಿದ್ದಾರೆ. ಆಲ್ಝೈಮರ್ ಅನ್ನು ತಡೆಗಟ್ಟುವ ಪ್ರಮುಖ ಆಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ತರಕಾರಿಗಳು: ಬ್ರೋಕೋಲಿ, ಸೌತೆಕಾಯಿ, ಎಲೆಕೋಸು, ಕ್ಯಾರೆಟ್, ಬದನೆ, ಪಾಲಕ್, ಈರುಳ್ಳಿ ಮತ್ತು ಬೆಳ್ಳುಳ್ಳಿ

ತಜ್ಞರ ಅಭಿಪ್ರಾಯ: 'ಕಚ್ಛಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಸಾವಯವವಾಗಿ ಬೆಳೆದ ತೋಟದಿಂದ ನೇರವಾಗಿ ಬರುವ ತರಕಾರಿಗಳಿಗೆ ಆದ್ಯತೆ ನೀಡಲಾಗುತ್ತದೆ. ಯಾವುದೇ ಸಂರಕ್ಷಕಗಳನ್ನು ಹೊಂದಿರುವ ಆಹಾರವನ್ನು ಬೇಯಿಸುವುದನ್ನು ತಪ್ಪಿಸಿ.

ಧಾನ್ಯಗಳು: ಓಟ್ಸ್, ಬಾರ್ಲಿ, ನವಣೆ, ಬ್ರೌನ್ ರೈಸ್

ತಜ್ಞರ ಅಭಿಪ್ರಾಯ: 'ಧಾನ್ಯಗಳು ಬಹಳಷ್ಟು ವಿಟಮಿನ್ ಇ ಅನ್ನು ಒದಗಿಸುತ್ತವೆ. ಸುಲಭವಾಗಿ ಜೀರ್ಣವಾಗುವ ಧಾನ್ಯಗಳನ್ನು ತಿನ್ನುವುದು ಉತ್ತಮ'

ತಪ್ಪಿಸಬೇಕಾದ ಆಹಾರಗಳು: ಕಾರ್ಬೊನೇಟೆಡ್ ಪಾನೀಯಗಳು, ಹೆಚ್ಚಿನ ಕ್ಯಾಲೋರಿಯ ಸಂಸ್ಕರಿಸಿದ ಆಹಾರಗಳು, ಇನ್‌ಸ್ಟೆಂಟ್ (ತ್ವರಿತ) ಆಹಾರಗಳು ಮತ್ತು ಮೈದಾ

ತಜ್ಞರ ಅಭಿಪ್ರಾಯ: 'ಹೆಚ್ಚಿನ ಕ್ಯಾಲೋರಿಯ ಸಿಹಿ ಪಾನೀಯಗಳು ಅಥವಾ ಕಾರ್ಬೊನೇಟೆಡ್ ಪಾನೀಯಗಳು ಹಾಗೂ ಮದ್ಯವನ್ನು ಸೇವಿಸುವುದನ್ನು ತಪ್ಪಿಸಬೇಕು. ನಮ್ಮ ಕಳಪೆ ಆಹಾರದ ಆಯ್ಕೆಗಳಿಂದ ಅಲ್ಝೈಮರ್ ಸಂಭವಿಸಬಹುದು.

ಹಣ್ಣುಗಳು: ಮಾವು, ಪರಂಗಿಹಣ್ಣು, ಮೋಸಂಬಿ, ಕಿತ್ತಳೆ, ಪೀಚ್ ಹಣ್ಣು, ದಾಳಿಂಬೆ ಮತ್ತು ಡ್ರೈ ಫ್ರೂಟ್ಸ್

ತಜ್ಞರ ಅಭಿಪ್ರಾಯ: ಸ್ಥಳೀಯವಾಗಿ ಬೆಳೆದ, ವಿಟಮಿನ್ ಸಿ ಮತ್ತು ವಿಟಮಿನ್ ಡಿ ಸಮೃದ್ಧವಾಗಿರುವ ಯಾವುದಾದರೂ ಹಣ್ಣಿಗೆ ಆದ್ಯತೆ ನೀಡಿ.

ಹಾಲಿನ ಉತ್ಪನ್ನಗಳು: ಹಾಲು, ಮೊಸರು ಮತ್ತು ಕಡಿಮೆ ಕೊಬ್ಬಿನ ಚೀಸ್

ತಜ್ಞರ ಅಭಿಪ್ರಾಯ: 'ಸಂಸ್ಕರಿಸಿದ ಪದಾರ್ಥಗಳಿಗಿಂತ ಸಾವಯವ ಹಾಲಿನ ಉತ್ಪನ್ನಗಳನ್ನು ಸೇವಿಸಲು ಪ್ರಯತ್ನಿಸಿ. ಈ ಉತ್ಪನ್ನಗಳು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದ್ದು, ಹಲವಾರು ನರವೈಜ್ಞಾನಿಕ ಕಾರ್ಯಗಳನ್ನು ನಿಯಂತ್ರಿಸುತ್ತವೆ.

ಸೀ ಫುಡ್ (ಸಮುದ್ರದ ಆಹಾರ): ಸಾಲ್ಮನ್, ಟ್ಯೂನ, ಸಾರ್ಡೀನ್ಗಳು, ಸೀಗಡಿ, ನಳ್ಳಿ

ತಜ್ಞರ ಅಭಿಪ್ರಾಯ: 'ಮೀನು ವಿಟಮಿನ್ ಡಿ ಮತ್ತು ಒಮೆಗಾ ಕೊಬ್ಬಿನಾಮ್ಲಗಳ ಸಮೃದ್ಧ ಮೂಲವಾಗಿದೆ. ಇದರಲ್ಲಿ ಆ್ಯಂಟಿಆ್ಯಕ್ಸಿಡೆಂಟ್ ಕೂಡ ಇದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಯಾವುದೇ ಆಹಾರವು ಹೆಚ್ಚುವರಿ ತ್ಯಾಜ್ಯ ಉತ್ಪನ್ನಗಳು ಮಿದುಳಿನಲ್ಲಿ ಶೇಖರಣೆಯಾಗುವ ಪ್ರಕ್ರಿಯೆಯನ್ನು ತಡೆಯಲು ಸಹಾಯ ಮಾಡುತ್ತದೆ.

ಮೆದುಳಿನ ಆರೋಗ್ಯಕ್ಕೆ ಸಲಹೆಗಳು

* ಬೆಳಗಿನ ಉಪಾಹಾರವನ್ನು ಬಿಡಬೇಡಿ. ಆತುರದಲ್ಲಿದ್ದರೆ, ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕಿಚಡಿಯಂತಹ ಸರಳವಾದ ಊಟವನ್ನು ಮಾಡಿ.

* ರೆಡ್ ವೈನ್ ಮತ್ತು ಡಾರ್ಕ್ ಚಾಕೊಲೇಟ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಬಹುದು. ಏಕೆಂದರೆ, ಅವು ಮಿದುಳಿನ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳನ್ನು ಹೊಂದಿವೆ.

* ಪ್ರತಿದಿನ ಕನಿಷ್ಠ ಏಳು ಗಂಟೆಗಳ ಕಾಲ ನಿದ್ರೆ ಮಾಡಿ. ಇದರಿಂದ ಮೆದುಳಿಗೆ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಮಯ ಸಿಗುತ್ತದೆ ಮತ್ತು ಅದು ಸಂಗ್ರಹವಾಗುವುದನ್ನು ತಡೆಯುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com