ಕಣ್ಣಿನ ಆರೋಗ್ಯ ಮತ್ತು ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವುದು ಹೇಗೆ? 20-20-20 ನಿಯಮ ಅನುಸರಿಸಿ...

ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಅಂಗಳಲ್ಲಿ ಪ್ರಮುಖವಾದದ್ದು ನಮ್ಮ ಕಣ್ಣು ಕೂಡ. ಮುಂಜಾನೆ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ನಿರಂತರವಾಗಿ ಕಣ್ಣುಗಳು ಕೆಲಸ ಮಾಡುತ್ತಲೇ ಇರುತ್ತವೆ. ಹೀಗಾಗಿ, ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ತೋರುವುದು ಮುಖ್ಯವಾಗುತ್ತದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಹೈದರಾಬಾದ್: ನಮ್ಮ ದೇಹದಲ್ಲಿ ಹೆಚ್ಚು ಕೆಲಸ ಮಾಡುವ ಅಂಗಳಲ್ಲಿ ಪ್ರಮುಖವಾದದ್ದು ನಮ್ಮ ಕಣ್ಣು ಕೂಡ. ಮುಂಜಾನೆ ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ನಿರಂತರವಾಗಿ ಕಣ್ಣುಗಳು ಕೆಲಸ ಮಾಡುತ್ತಲೇ ಇರುತ್ತವೆ. ವಿಳಂಬವಿಲ್ಲದೆ ನಮ್ಮ ಮಿದುಳಿಗೆ ಪ್ರಮುಖ ಮಾಹಿತಿಯನ್ನು ರವಾನಿಸುತ್ತಿರುತ್ತವೆ. ಹೀಗಾಗಿ, ನಮ್ಮ ಕಣ್ಣುಗಳ ಬಗ್ಗೆ ಕಾಳಜಿ ತೋರುವುದು ಮುಖ್ಯವಾಗುತ್ತದೆ. ಮ್ಯಾಕ್ಸಿ ವಿಶನ್ ಕಣ್ಣಿನ ಆಸ್ಪತ್ರೆಯ ವೈದ್ಯ ಡಾ. ಸತ್ಯಪ್ರಸಾದ್ ಬಾಲ್ಕಿ ಕೆಲವು ಪ್ರಮುಖ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಕಣ್ಣಿನ ನಿಯಮಿತ ತಪಾಸಣೆ

ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು. ಏನಾದರೂ ತೊಂದರೆಯಿದ್ದರೆ ನಿಮ್ಮ ಕಣ್ಣಿನ ವೈದ್ಯರು ಸೂಕ್ತವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ.

ಮಧುಮೇಹ ಅಥವಾ ಅಧಿಕ ರಕ್ತದೊತ್ತಡ

ಕಾರ್ಬೋಹೈಡ್ರೇಟ್ ಸಮೃದ್ಧ ಆಹಾರ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಭಾರತ ವಿಶ್ವದ ಮಧುಮೇಹದ ರಾಜಧಾನಿಯಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಇದನ್ನು ನಿಯಂತ್ರಣದಲ್ಲಿರಿಸದಿದ್ದರೆ ಶಾಶ್ವತ ದೃಷ್ಟಿ ನಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ, ರಕ್ತದೊತ್ತಡದ ಬಗ್ಗೆ ಜಾಗರೂಕರಾಗಿರಿ. ನಿಯಮಿತವಾಗಿ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯದಿರಿ.

ಧೂಮಪಾನ ತ್ಯಜಿಸಿ

ನಮ್ಮ ದೇಹದಲ್ಲಿ ಸಂಭವಿಸುವ ಹಲವಾರು ರೋಗಗಳಿಗೆ ಅತ್ಯುತ್ತಮ ಪರಿಹಾರವೇ ಧೂಮಪಾನವನ್ನು ತ್ಯಜಿಸುವುದಾಗಿದೆ. ಯಾವುದೇ ರೂಪದಲ್ಲಾದರೂ ನಮ್ಮ ದೇಹವನ್ನು ಸೇರುವ ತಂಬಾಕು ಆಪ್ಟಿಕ್ ನರ ಹಾನಿ, ಕ್ಯಾನ್ಸರ್ ಮತ್ತು ಗ್ಲುಕೋಮಾ ಸೇರಿದಂತೆ ಹಲವಾರು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ನೀವು ಧೂಮಪಾನ ನಿಲ್ಲಿಸಲು ಇದು ಉತ್ತಮ ಸಮಯ.

ಸ್ಕ್ರೀನ್ ಸಮಯದ ಬಗ್ಗೆ ಗಮನವಿರಲಿ

ಮೊಬೈಲ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಿಂದ ನಿಖರವಾಗಿ ಹೊರಹೊಮ್ಮುವ ಪ್ರಖರವಾದ ಅಸ್ವಾಭಾವಿಕ ಬೆಳಕು ಕಣ್ಣಿಗೆ ಹಾನಿಕಾರಕ ಮತ್ತು ದೀರ್ಘ ಗಂಟೆಗಳವರೆಗೆ ನಮ್ಮ ಕಣ್ಣುಗಳನ್ನು ದಿಟ್ಟಿಸಿರುವುದು ಒಳ್ಳೆಯದಲ್ಲ. ಇದು ನಿರಂತರ ಒತ್ತಡಕ್ಕೆ ಕಾರಣ ಮತ್ತು ಕಣ್ಣುಗಳು ಮಿಟುಕಿಸುವ ದರವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ತಲೆನೋವು, ಕಿರಿಕಿರಿ ಮತ್ತು ದೃಷ್ಟಿ ಮಸುಕಾಗುವಿಕೆ ಉಂಟಾಗುತ್ತದೆ. ಪರದೆಯಿಂದ ಆಗಾಗ್ಗೆ ವಿರಾಮ ತೆಗೆದುಕೊಳ್ಳಿ, 20-20-20 ನಿಯಮವನ್ನು ಅನುಸರಿಸಿ. ಅಂದರೆ, 20 ನಿಮಿಷಗಳ ಸ್ಕ್ರೀನ್ ಸಮಯದ ನಂತರ 20 ಸೆಕೆಂಡುಗಳ ಕಾಲ 20 ಅಡಿ ದೂರಕ್ಕೆ ನೋಡಿ ಅಥವಾ 20 ಸೆಕೆಂಡುಗಳ ಕಾಲ ಕಣ್ಣುಗಳನ್ನು ಮುಚ್ಚಿ.

ಮಕ್ಕಳ ಕಣ್ಣುಗಳ ಬಗ್ಗೆ ನಿಗಾ ವಹಿಸಿ

ಬೋರ್ಡ್ ನೋಡುವಾಗ ಮಗುವು ಆಯಾಸಗೊಳ್ಳುತ್ತಿದ್ದರೆ ಅಥವಾ ನೋವಿನಿಂದ ಹಿಂಜರಿಯುತ್ತಿದ್ದರೆ, ತಪ್ಪಾಗಿ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಉಳಿದ ಮಕ್ಕಳಿಗಿಂತ ಹಿಂದುಳಿದಿದ್ದರೆ, ಅದನ್ನು ಸೂಕ್ಷ್ಮವಾಗಿ ಗಮನಿಸುವುದು ಪೋಷಕರು ಮತ್ತು ಶಿಕ್ಷಕರ ಜವಾಬ್ದಾರಿ. ಮಗುವಿನ ನೇತ್ರ ತಪಾಸಣೆ ಮತ್ತು ವೈದ್ಯರು ಸೂಚಿಸುವ ಕನ್ನಡಕಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಶಾಲೆಗಳು ಆಗಾಗ್ಗೆ ನೇತ್ರ ಶಿಬಿರಗಳನ್ನು ನಡೆಸುವುದು ಸೂಕ್ತ.

ಶುದ್ಧ ದೇಹ, ಶುದ್ಧ ಮನಸ್ಸು

ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಅಗತ್ಯವನ್ನು ಸಾಮಾನ್ಯವಾಗಿ ಮುಖ್ಯವೆಂದೇ ಹೇಳಲಾಗುತ್ತದೆ. ಆದರೆ, ವಿರಳಾತಿತೀತ ಜನರು ಮಾತ್ರ ಇದನ್ನು ಪಾಲಿಸುತ್ತಾರೆ. ಸಮತೋಲಿತ ಆಹಾರ ಸೇವಿಸಿ. ಕಣ್ಣಿನ ಆರೋಗ್ಯಕ್ಕಾಗಿ, ಎಸಿಇ ನಿಯಮವನ್ನು ನೆನಪಿಡಿ. ವಿಟಮಿನ್ ಎ, ಸಿ ಮತ್ತು ಇ ಮತ್ತು ಉತ್ಕರ್ಷಣ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಆಹಾರದಲ್ಲಿ ಸೇರಿಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com