ಮಧುಮೇಹವನ್ನು ತ್ವರಿತವಾಗಿ ಗುಣಪಡಿಸಬಹುದು...ಹೇಗೆ? ಇಲ್ಲಿದೆ ಮಾಹಿತಿ...

ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮನುಷ್ಯನನ್ನು ಹೆಚ್ಚು ಬಾಧಿಸುವ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು. ಮಧುಮೇಹವನ್ನು ಸಕ್ಕರೆ ಕಾಯಿಲೆ ಎಂದು ಕರೆಯಲಾಗುತ್ತದೆ. ಒಮ್ಮೆ ಈ ಕಾಯಿಲೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕೆಂದು ಹೇಳಲಾಗುತ್ತದೆ. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ.

ಇದರ ನಡುವೆ ಜಗತ್ತಿನ ಹಲವೆಡೆ ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬ ಪ್ರಚಾರ ಆರಂಭವಾಗಿದೆ. ಇದನ್ನು 'ಮಧುಮೇಹ ಹಿಂದಿರುಗಿಸುವ ಚಿಕಿತ್ಸೆ ಎಂದು ಕರೆಯಲಾಗುತ್ತದೆ.

ಸರಿಯಾದ ಆಹಾರಕ್ರಮ, ದೈನಂದಿನ ವ್ಯಾಯಾಮ, ಕಡಿಮೆ ಒತ್ತಡ ಮತ್ತು ಉತ್ತಮ ನಿದ್ರೆಯಿಂದ ಅವರ ಸ್ಥಿತಿಯನ್ನು ಮೊದಲಿನಂತೆ ತರಬಹುದು ಎಂದು ನಾರಾಯಣ ನೇತ್ರಾಲಯದ ರಿವರ್ಸಲ್ ಡಯಾಬಿಟಿಸ್ ಕ್ಲಿನಿಕ್ (ಆರ್‌ಡಿಸಿ) ವೈದ್ಯರು ಹೇಳಿದ್ದಾರೆ.

ರಿವರ್ಸಲ್ ಡಯಾಬಿಟಿಸ್ ಚಿಕಿತ್ಸೆಗೆ ಈ ವರೆಗು 4,000 ರೋಗಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 500 ಜನರು ತಮ್ಮ ಪೂರ್ವ ಮಧುಮೇಹ ದಿನಗಳಿಗೆ ಮರಳಿದ್ದಾರೆಂದು ತಿಳಿಸಿದ್ದಾರೆ.

ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಭುಜಂಗ ಶೆಟ್ಟಿ ಮಾತನಾಡಿ, ಈ ಸ್ಥಿತಿಯು ಆರಂಭಿಕ ಹಂತದಲ್ಲಿದ್ದರೆ ಮತ್ತು ಎರಡು-ಮೂರು ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರೆ, ಕೆಲವೇ ವಾರಗಳಲ್ಲಿ ಮೊದಲಿನಂತೆ ಪರಿವರ್ತನೆಗೊಳ್ಳಬಹುದು. ಆದರೆ ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಮಧುಮೇಹದಿಂದ ಬಳಲುತ್ತಿದ್ದರೆ, 10, 15 ಅಥವಾ 20 ವರ್ಷಗಳಿಂದ ಬಳಲುತ್ತಿದ್ದರೆ, ಮೊದಲಿನ ದಿನಗಳಿಗೆ ಆರೋಗ್ಯ ಮರಳಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ರೋಗಿಗಳು ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಆರೋಗ್ಯಕರ ಕೊಬ್ಬಿನ ಆಹಾರವನ್ನು ಒಳಗೊಂಡಿರುವ ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸಬೇಕು. ಸಕ್ಕರೆ, ಸಿಹಿತಿಂಡಿಗಳು ಮತ್ತು ಧಾನ್ಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತದೆ. "ರೋಗಿಗಳನ್ನು ಹೆಚ್ಚು ಪಿಷ್ಟರಹಿತ ತರಕಾರಿಗಳನ್ನು ತಿನ್ನಲು ಪ್ರೋತ್ಸಾಹಿಸಲಾಗುತ್ತದೆ, ಇದನ್ನು ಪ್ರತಿ ಊಟಕ್ಕೂ ಮೊದಲು ತೆಗೆದುಕೊಳ್ಳಬೇಕಾಗುತ್ತದೆ. ಬೆಣ್ಣೆ, ತುಪ್ಪ, ತೆಂಗಿನೆಣ್ಣೆ ಮತ್ತು ಕಡಲೆಕಾಯಿ ಎಣ್ಣೆಯಂತಹ ಆರೋಗ್ಯಕರ ಕೊಬ್ಬುಗಳಿರುವುದನ್ನು ಯಾವುದೇ ರೂಪದಲ್ಲಿ ಸಾಕಷ್ಟು ತರಕಾರಿಗಳೊಂದಿಗೆ ತೆಗೆದುಕೊಳ್ಳಬಹುದು. ಸಂಸ್ಕರಿಸದ ಆಹಾರ ಸೇವಿಸುವಂತಿಲ್ಲ. ಸಾಮಾನ್ಯವಾಗಿ ಅವರ ಡಯೆಟ್ ನಲ್ಲಿಯೇ ಶೇಕಡಾ 20-25 ರಷ್ಟು ಪ್ರೋಟೀನ್ ಗಳು ಇರುತ್ತವೆ. ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುವುದರಿಂದ ಅವುಗಳನ್ನು ತ್ಯಜಿಸಬೇಕು’ ಎಂದು ತಿಳಿಸಿದ್ದಾರೆ.

ಮಧುಮೇಹದ ಮೆಟ್ರಿಕ್ ಹೆಚ್'ಬಿಎ1ಸಿ ಆಗಿದೆ. 6.6ಕ್ಕಿಂತ ಹೆಚ್ಚು ಎಣಿಕೆ ಹೊಂದಿರುವ ಯಾವುದೇ ವ್ಯಕ್ತಿಯನ್ನು ಮಧುಮೇಹಿ ಎಂದು ಪರಿಗಣಿಸಲಾಗುತ್ತದೆ. "ಸರಿಯಾದ ಆಹಾರದೊಂದಿಗೆ, ಉಪಶಮನವನ್ನು ಸಾಧಿಸಬಹುದು ಮತ್ತು ಹೆಚ್'ಬಿಎ1ಸಿ ಮಟ್ಟವನ್ನು 5.7 ರಿಂದ 6.4 ರ ಮಧುಮೇಹ ಪೂರ್ವ ಮಟ್ಟಕ್ಕೆ ತರಬಹುದು ಅಥವಾ 5.6 ಅಥವಾ ಅದಕ್ಕಿಂತ ಕಡಿಮೆ ಸಾಮಾನ್ಯ ಮಟ್ಟಕ್ಕೆ ತರಬಹುದು. ಆದರೆ, ರೋಗಿಗಳು ಆಹಾರ ಮತ್ತು ದೈಹಿಕ ಚಟುವಟಿಕೆಯೊಂದಿಗೆ ಮುಂದುವರಿಯಬೇಕು. ಇಲ್ಲದಿದ್ದರೆ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಬೆಂಗಳೂರು ಎಂಡೋಕ್ರೈನೋಲಜಿ ಆ್ಯಂಡ್ ಡಯಾಬಿಟಿಸ್ ರಿಸರ್ಚ್ ಸೆಂಟರ್'ನ ಡಾ.ಮಾಲಾ ಧರ್ಮಲಿಂಗಂ ಅವರು ಹೇಳಿದ್ದಾರೆ.

ಚಿಕಿತ್ಸೆ ಹೇಗಿರುತ್ತದೆ?
ಮಧುಮೇಹ ರಿವರ್ಸಲ್ ಕಾರ್ಯಕ್ರಮದ ಅಡಿಯಲ್ಲಿ, ಶೇ.60ರಷ್ಟು ಚಿಕಿತ್ಸೆಯು ಕಟ್ಟುನಿಟ್ಟಾದ ಆಹಾರಕ್ರಮದ ಮೇಲೆ ಇರುತ್ತದೆ. ಶೇ.10 ದೈಹಿಕ ಚಟುವಟಿಕೆ, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಎಂಟು ಗಂಟೆಗಳ ಸರಿಯಾದ ನಿದ್ರೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ರೋಗಿಗಳು ಕಡಿಮೆ ಕಾರ್ಬೋಹೈಡ್ರೇಟ್ಸ್ ಇರುವ ಮತ್ತು ಆರೋಗ್ಯಕರವಾಗಿರುವ ಕೊಬ್ಬಿನ ಆಹಾರವನ್ನು ಸೇವಿಸಬೇಕು. ಈ ಸಮಯದಲ್ಲಿ ಯಾವುದೇ ಮಾತ್ರೆ ಅಥವಾ ಇನ್ಸುಲಿನ್ ತೆಗೆದುಕೊಳ್ಳುವ ಅಗತ್ಯವಿರುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com