ವಸಡು ಮತ್ತು ಹಲ್ಲುಗಳ ಆರೈಕೆ ಹೇಗೆ? ಇಲ್ಲಿವೆ ಕೆಲವು ಟಿಪ್ಸ್...

ಆರೋಗ್ಯ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆರೋಗ್ಯ ಉತ್ತಮವಾಗಿರಬೇಕೆಂದರೆ ಬಾಯಿಯ ಆರೋಗ್ಯ ಅತ್ಯಂತ ಮುಖ್ಯವಾಗುತ್ತದೆ. ಆದರೆ, ಸಾಕಷ್ಟು ಜನರು ಬಾಯಿಯ ಆರೋಗ್ಯವನ್ನು ಲಘುವಾಗಿ ಪರಿಗಣಿಸುವುದುಂಟು. ಆದರೆ, ಬಾಯಿಯ, ಹಲ್ಲಿನ ಸಮಸ್ಯೆಗಳನ್ನು ತಡೆಗಟ್ಟಲು ನಮ್ಮ ಬಾಯಿ, ಹಲ್ಲು ಮತ್ತು ವಸಡುಗಳನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ.

ಇದು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಏಕೆಂದರೆ ದೀರ್ಘಕಾಲದವರೆಗೆ ಹಲ್ಲಿನ ನೈರ್ಮಲ್ಯವನ್ನು ನಿರ್ಲಕ್ಷಿಸುವುದು ಅಂತಿಮವಾಗಿ ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳಪೆ ಬಾಯಿಯ ನೈರ್ಮಲ್ಯವು ಹಲ್ಲು ಹುಳುಕಾಗುವುದು, ಹಲ್ಲಿನ ಸವೆತ ಮತ್ತು ವಸಡುಗಳ ಉರಿಯೂತಕ್ಕೆ ಕಾರಣವಾಗುತ್ತದೆ.

ಹಲ್ಲಿನ ಆರೋಗ್ಯವು ಕಾಳಜಿಯ ವಿಷಯವಾಗಿರುವುದರಿಂದ, ಆರೋಗ್ಯಕರ ಹಲ್ಲುಗಳು ಮತ್ತು ವಸಡುಗಳನ್ನು ಹೊಂದುವುದು ಹೇಗೆ ಎಂಬುದಕ್ಕೆ ಕೆಲವು ಟಿಪ್ಸ್ ಗಳು ಇಲ್ಲಿವೆ...

ಬಾಯಿಯ ಕುಹರದ ಬದಲಾವಣೆಗಳನ್ನು ಆಗಾಗ್ಗೆ ಪರಿಶೀಲಿಸಿ:
ಬಾಯಿಯ ಒಳಗಿನ ಬಣ್ಣ, ಹುಣ್ಣುಗಳ ಕುರಿತು ಗಮನಹರಿಸಿ. ಪ್ರತಿದಿನ ಹಲ್ಲುಜ್ಜುವಾಗ ಪರೀಕ್ಷಿಸಿಕೊಳ್ಳಿ.

ಸ್ವಚಿಕಿತ್ಸೆ ನಿಯಂತ್ರಿಸಿ...
ದೇಹದಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬಂದ ಕೂಡಲೇ ವೈದ್ಯರನ್ನು ಕಾಣುವ ಬಹುತೇಕ ಮಂದಿ ಬಾಯಿಯಲ್ಲಿ ಯಾವುದೇ ಸಮಸ್ಯೆ ಕಂಡುಬಂದರೂ ಸ್ವಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಆದರೆ, ಇದನ್ನು ಎಲ್ಲಾ ಸಮಯದಲ್ಲೂ ಸರಿ ಎಂದು ಹೇಳಲು ಸಾಧ್ಯವಿಲ್ಲ. ಸಮಸ್ಯೆಗಳು ಕಂಡು ಬಂದರೆ ಮೊದಲು ದಂತ ವೈದ್ಯರನ್ನು ಕಾಣಬೇಕು. ಅವರ ಮಾರ್ಗದರ್ಶನವಿಲ್ಲದೆ ಸ್ವಚಿಕಿತ್ಸೆ ಮಾಡಿಕೊಳ್ಳುವುದು ಒಳ್ಳೆಯಲ್ಲ. ಜಾಹೀರಾತುಗಳನ್ನು ನೋಡಿ ಪ್ರಯೋಗ ಮಾಡುವುದನ್ನೂ ನಿಯಂತ್ರಿಸಿ.

ಮೌತ್‌ವಾಶ್‌ಗಳ ಆಯ್ಕೆಯಲ್ಲಿ ಎಚ್ಚರವಹಿಸಿ...
ಯಾವಾಗಲೂ ಸಕ್ಕರೆ ರಹಿತ ಮತ್ತು ಆಲ್ಕೋಹಾಲ್ ರಹಿತ ಮೌತ್‌ವಾಶ್‌ಗಳನ್ನು ಬಳಸಿ. ಬ್ರಷ್ ಮಾಡಿದ ಬಳಿಕ ಕನಿಷ್ಠ 30 ನಿಮಿಷಗಳ ಬಳಿಕ ಇದನ್ನು ಬಳಿಸಿ.

ಲಕ್ಷಣಗಳ ಬಗ್ಗೆ ಎಚ್ಚರಿಕೆಯಿರಲಿ...
ದೇಹದಲ್ಲಿ ಕಂಡು ಬರುವ ಬದಲಾವಣೆಗಳು, ಲಕ್ಷಣಗಳ ಮೇಲೆ ಎಚ್ಚರಿಕೆ ವಹಿಸಿ. ದೀರ್ಘಕಾಲದ ತಲೆನೋವು, ಕುತ್ತಿಗೆ ಮತ್ತು ಭುಜದ ನೋವು, ಪರಿಹರಿಸಲಾಗದ ಬೆನ್ನು ನೋವು ಬಾಯಿಯ ಕ್ಯಾನ್ಸರ್'ಗೆ ಕಾರಣವಾಗಿರಬಹುದು.

ವಿಟಮಿನ್ ಡಿ ಮಟ್ಟವನ್ನು ಗಮನಿಸಿ...
ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ಎಸಿ ಕೆಳಗೆ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಿರುವ ಜನತೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದನ್ನೇ ಮರೆತುಬಿಡುತ್ತಿದ್ದಾರೆ. ಇಂತಹವರು ದೇಹದಲ್ಲಿ ವಿಟಮಿನ್ ಡಿ ಮಟ್ಟವನ್ನು ಪರಿಶೀಲಿಸಿಕೊಳ್ಳುವುದು ಮುಖ್ಯವಾಗುತ್ತದೆ. ಇಂತಹವರು ಹೆಚ್ಚೆಚ್ಚು ವ್ಯಾಯಾಮ ಮಾಡಿ, ವಿಟಿಮಿನ್ ಡಿ ಭರಿತ ಆಹಾರ ಸೇವನೆ ಮಾಡಬೇಕು.

ಟೂತ್‌ಪಿಕ್ ಬಳಕೆ ತಪ್ಪಿಸಿ...
ಆಹಾರ ಸೇವನೆ ವೇಳೆ ಆಹಾರ ಹಲ್ಲುಗಳ ನಡುವೆ ಸಿಲುಕಿಕೊಳ್ಳುವುದು ಸಾಮಾನ್ಯ. ಆದರೆ, ಬಹುತೇಕ ಮಂದಿ ಇದನ್ನು ತೆಗೆಯಲು ಟೂತ್ ಪಿಕ್, ಸೇಫ್ಟಿ ಪಿನ್ ಗಳನ್ನು ಬಳಕೆ ಮಾಡುತ್ತಾರೆ. ಆದರೆ, ಹಲ್ಲುಗಳ ಆರೋಗ್ಯಕ್ಕೆ ಇದು ಉತ್ತಮವಲ್ಲ. ಇವುಗಳನ್ನು ತಪ್ಪಿಸಿ ಫ್ಲೋಸ್'ಗಳು, ಇಂಟರ್ ಡೆಂಟಲ್ ಬ್ರಷ್ ಗಳನ್ನು ಬಳಕೆ ಮಾಡಿ.

ಉಗುರು ಕಚ್ಚುವುದನ್ನು ನಿಲ್ಲಿಸಿ...
ಉಗುರು ಕಚ್ಚುವುದು, ಬಾಯಿಯಿಂದ ಉಸಿರಾಡುವುದನ್ನು ತಪ್ಪಿಸಿ. ಸಾಮಾನ್ಯವಾಗಿ ಇಂತಹ ಅಭ್ಯಾಸಗಳು ಮಕ್ಕಳಲ್ಲಿ ಕಂಡು ಬರುವುದು ಹೆಚ್ಚು. ಇಂತಹ ಅಭ್ಯಾಸಗಳು ಮುಖದ ರೂಪ, ಹಲ್ಲುಗಳ ಜೋಡನೆಯ ಮೇಲೆ ಪರಿಣಾಮ ಬೀರುತ್ತವೆ. ಅಂತಹ ಅಭ್ಯಾಸಗಳನ್ನು ನೀವು ನೋಡಿದ ಕೂಡಲೇ ಮಕ್ಕಳ ದಂತವೈದ್ಯರನ್ನು ಸಂಪರ್ಕಿಸಿ.

ಬೇಯಿಸಿದಷ್ಟೂ ಅಡುಗೆ ಹಾಳು...
ಹೌದು ಹೆಚ್ಚು ಬೇಯಿಸಿದಷ್ಟು ಅಡುಗೆ ಹಾಳಾಗುತ್ತದೆ. ಈ ಮಾತು ನಿಜ. ಅದೇ ರೀತಿ ಹಲ್ಲುಗಳನ್ನು ಹೆಚ್ಚು ಉಜ್ಜಿದಷ್ಟು ಹಾಳಾಗುವುದೂ ಹೆಚ್ಚು. ಹೀಗಾಗಿ ಹಲ್ಲುಜ್ಜಲು 3-3-3-3 ನಿಯಮವನ್ನು ಅವುಸರಿಸಿ. ಹಲ್ಲುಗಳನ್ನು ಉಜ್ವಲು ಮೃದುವಾದ ಬ್ರಷ್ ಗಳನ್ನು ಬಳಸಿ. ಮೂರು ಸೆಕೆಂಡುಗಳ ಕಾಲ ಮೂರು ಹಲ್ಲುಗಳನ್ನು ಉಜ್ಜಿ. ಎಲ್ಲಾ ಹಲ್ಲುಗಳ ಉಜ್ಜುವ ಅವಧಿ ಮೂರು ನಿಮಿಷಗಳಾಗಿರಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಗಳನ್ನು ಬದಲಿಸಿ.

ಊಟ ಮಾಡುವ ಮಧ್ಯೆ ಸ್ನ್ಯಾಕ್ಸ್ ಸೇವನೆ ನಿಯಂತ್ರಿಸಿ..
ಊಟ ಮಾಡುವಾಗ ಚಿಪ್ಸ್, ಚಕ್ಕುಲಿ, ಕೋಡುಬಳೆ ಹೀಗೆ ಸೈಡ್ ಎಂದು ಸೇವನೆ ಮಾಡುವುದು ಸಾಮಾನ್ಯ ಆದರೆ, ಇದು ಹಲ್ಲುಗಳ ಆರೋಗ್ಯಕ್ಕೆ ಉತ್ತಮವಲ್ಲ. ವಿಶೇಷವಾಗಿ ಮಕ್ಕಳಲ್ಲಿ.

ಮಕ್ಕಳು ಊಟ ಮಾಡುವಾಗ ದೊಡ್ಡ ರಂಧ್ರವಿರುವ ಬಾಟಲ್ ಗಳನ್ನು ನೀಡಿ. ಇದರಿಂದ ಹಲ್ಲುಗಳ ಮಧ್ಯೆ ಉಳಿದುಕೊಳ್ಳುವ ಆಹಾರ ಸ್ವಚ್ಛಗೊಳ್ಳಲು ಸಹಾಯ ಮಾಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com