Health Tips: ಫ್ಯಾಟಿ ಲಿವರ್, ಚರ್ಮದ ಕ್ಯಾನ್ಸರ್, ಹೃದಯದ ಆರೋಗ್ಯ: ಸೀಮೆ ಬದನೆಕಾಯಿ ಉಪಯೋಗಗಳು!

ಸೋರೆಕಾಯಿ ಜಾತಿಗೆ ಸೇರಿದ ಸೀಮೆ ಬದನೆಕಾಯಿಯಲ್ಲಿ ಸಾಕಷ್ಟು ಆರೋಗ್ಯಕಾರಿ ಅಂಶಗಳಿದ್ದು, ಮಾರಣಾಂತಕ ಚರ್ಮದ ಕ್ಯಾನ್ಸರ್, ಬೊಜ್ಜಿಗೆ ಕಾರಣವಾಗುವ ಫ್ಯಾಟಿ ಲಿವರ್ ಮತ್ತು ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಪ್ರಭಾವಕಾರಿಯಾಗಬಲ್ಲದು.
Health Benefits of Chayote
ಸೀಮೆ ಬದನೆಕಾಯಿ
Updated on

ಸೋರೆಕಾಯಿ ಜಾತಿಗೆ ಸೇರಿದ ಸೀಮೆ ಬದನೆಕಾಯಿಯಲ್ಲಿ ಸಾಕಷ್ಟು ಆರೋಗ್ಯಕಾರಿ ಅಂಶಗಳಿದ್ದು, ಮಾರಣಾಂತಕ ಚರ್ಮದ ಕ್ಯಾನ್ಸರ್, ಬೊಜ್ಜಿಗೆ ಕಾರಣವಾಗುವ ಫ್ಯಾಟಿ ಲಿವರ್ ಮತ್ತು ಹೃದಯ ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಪ್ರಭಾವಕಾರಿಯಾಗಬಲ್ಲದು.

ಸೀಮೆ ಬದನೆಕಾಯಿ ಆರೋಗ್ಯಕಾರಿ ಉಪಯೋಗಗಳು!

ಚರ್ಮದ ಕ್ಯಾನ್ಸರ್

ವೈದ್ಯರ ಪ್ರಕಾರ ಸೀಮೆಬದನೆಕಾಯಿ ತನ್ನಲ್ಲಿ ಎರಡು ಪ್ರಭೇದದ ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದ್ದು, ಸಪೋನಿನ್ ಮತ್ತು ಫ್ಲೇವನಾಯ್ಡ್ ಗಳನ್ನು ಹೊಂದಿದೆ. ಇವುಗಳು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣೆ ನೀಡುತ್ತವೆ. ಸೀಮೆ ಬದನೆಕಾಯಿಯ ಒಳ ಭಾಗದಲ್ಲಿ ಹಾಗೂ ಮೇಲ್ಭಾಗದ ಸಿಪ್ಪೆಯಲ್ಲಿ ಮಾರಕ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ಹೋರಾಡುವ ಆಂಟಿಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ ಇದು ಚರ್ಮದ ಕ್ಯಾನ್ಸರ್ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕ ಹಾಗೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ.

ಗರ್ಭಿಣಿಯರಿಗೆ

ಗರ್ಭಿಣಿಯಾಗಿರುವ ಅಥವಾ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಫೋಲೇಟ್ ಅತ್ಯಗತ್ಯ ಪೋಷಕಾಂಶವಾಗಿದೆ. ವಿಟಮಿನ್ B9 ಎಂದೂ ಕರೆಯಲ್ಪಡುವ ಫೋಲೇಟ್ ಭ್ರೂಣದ ಮೆದುಳು ಮತ್ತು ಬೆನ್ನುಹುರಿಯ ಬೆಳವಣಿಗೆಯಲ್ಲಿ ಪ್ರಮುಖವಾಗಿದೆ. ಫೋಲೇಟ್ ಮಗುವಿನ ಅಕಾಲಿಕ ಜನನವನ್ನು ತಡೆಯಲು ಸಹಾಯ ಮಾಡುತ್ತದೆ.

Health Benefits of Chayote
ಮಧುಮೇಹ, ಬೊಜ್ಜು, ಕೂದಲಿನ ಸಮಸ್ಯೆ: ಆಲ್ ರೌಂಡರ್ 'ಬಿಲ್ವಪತ್ರೆ'ಯ ಆರೋಗ್ಯಕಾರಿ ಗುಣಗಳು

ಯಕೃತ್ತಿನ ಆರೋಗ್ಯ (ಲಿವರ್)

ಚಯೋಟ್ ಅಥವಾ ಸೀಮೆಬದನೆಕಾಯಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯ ವಿರುದ್ಧ ರಕ್ಷಿಸುವ ಸಂಯುಕ್ತಗಳನ್ನು ಹೊಂದಿದೆ. ಸೀಮೆ ಬದನೆಕಾಯಿ ಪಲ್ಯ ಪಿತ್ತಜನಕಾಂಗದಲ್ಲಿ ಕೊಬ್ಬಿನಾಮ್ಲಗಳನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಹಾರವು ದೇಹದ ಚಯಾಪಚಯ ಮತ್ತು ಕೊಬ್ಬನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ಸೀಮೆ ಬದನೆಕಾಯಿಯಲ್ಲಿರುವ ಫೈಟೊಕೆಮಿಕಲ್‌ಗಳು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ. ಸೀಮೆಬದನೆಕಾಯಿಯಲ್ಲಿ ಮೈರಿಸೆಟಿನ್ ಸೇರಿದಂತೆ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ಕೆಲವು ಕಾಯಿಲೆಗಳ ಅಭಿವೃದ್ಧಿ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದಲ್ಲಿನ ಸಕ್ಕರೆ ನಿಯಂತ್ರಣ

ಸೀಮೆಬದನೆಕಾಯಿ ಕಾರ್ಬೋಹೈಡ್ರೇಟ್‌ಗಳಲ್ಲಿ ತುಲನಾತ್ಮಕವಾಗಿ ಕಡಿಮೆ ಮತ್ತು ಯಥೇಚ್ಛ ಫೈಬರ್‌ ಅಧಿಕವಾಗಿ ಹೊಂದಿದೆ. ಇದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪೌಷ್ಟಿಕಾಂಶದ ಸಂಯೋಜನೆಯಾಗಿದೆ. ಇದರಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್‌ನ ಅಂಶವು ಕಡಿಮೆ ತಿಂದರೂ ನೀವು ಹೊಟ್ಟೆ ತುಂಬ ತಿಂದ ಅನುಭವ ನೀಡುತ್ತದೆ. ಇದರಲ್ಲಿನ ಫೈಬರ್ ನಿಮ್ಮ ದೇಹದ ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ.

Health Benefits of Chayote
ಮೆಂತ್ಯ ಬೀಜದಲ್ಲಿ ಅಡಗಿದೆ ಹಲವು ಆರೋಗ್ಯಕಾರಿ ಪ್ರಯೋಜನ; ಅವುಗಳನ್ನು ತಿಳಿದು ಇಂದೇ ಸೇವಿಸಲು ಪ್ರಾರಂಭಿಸೋಣ!

ಇನ್ಸುಲಿನ್ ನಿಯಂತ್ರಣ

ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೀಮೆ ಬದನೆಕಾಯಿಯಲ್ಲಿನ ರಾಸಾಯನಿಕ ಸಂಯುಕ್ತಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಟೈಪ್ 2 ಡಯಾಬಿಟಿಸ್ ಇರುವವರಿಗೆ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ವಯಸ್ಸಾಗುವಿಕೆ ನಿಧಾನಗೊಳಿಸುತ್ತದೆ

ಸೀಮೆಬದನೆಕಾಯಿ ತಿನ್ನುವುದರಿಂದ ಉರಿಯೂತ ಮತ್ತು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಸೀಮೆಬದನೆಕಾಯಿ ಮೆಟಬಾಲಿಕ್ (ಚಾಯಾಪಚಯಕ್ರಿಯೆ) ಸಿಂಡ್ರೋಮ್‌ನ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಯಂತಹ ಸೀಮೆ ಬದನೆಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ನಿಮ್ಮ ದೇಹವನ್ನು ಜೀವಕೋಶದ ಹಾನಿಯಿಂದ ರಕ್ಷಿಸಲು ಮತ್ತು ದೇಹದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com