ಮೆದುಳು ತಿನ್ನುವ ಅಮೀಬಾ ಸೋಂಕು: ಕೆರೆ-ಕಟ್ಟೆ, ಈಜುಕೊಳಗಳಿಗೆ ಇಳಿಯುವ ಮುನ್ನ ಇರಲಿ ಎಚ್ಚರ..!

ಈಗಾಗಲೇ ಇಂತಹ ಮಿದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪ ಹಾಗೂ ಮಾರಣಾಂತಿಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ.
ಮೆದುಳು ತಿನ್ನುವ ಅಮೀಬಾ ಸೋಂಕು: ಕೆರೆ-ಕಟ್ಟೆ, ಈಜುಕೊಳಗಳಿಗೆ ಇಳಿಯುವ ಮುನ್ನ ಇರಲಿ ಎಚ್ಚರ..!
Updated on

ಬೆಂಗಳೂರು: ದಕ್ಷಿಣ ರಾಜ್ಯಗಳಲ್ಲಿ ಮಳೆ ಹಿನ್ನೆಲೆ ಕೆರೆ ಕಟ್ಟೆ, ಕೊಳಗಳು ತುಂಬಿದ್ದು, ಈಜಾಡುವುದನ್ನು ತಪ್ಪಿಸುವುದು ಸೂಕ್ತ. ನಿಂತ ನೀರಿನಲ್ಲಿ ಮಿದುಳು ತಿನ್ನುವ ಅಮೀಬಾಗಳಿರುತ್ತವೆ. ಅವು ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿವೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಇಂತಹ ಮಿದುಳು ತಿನ್ನುವ ಅಮೀಬಾಕ್ಕೆ ಕೇರಳದಲ್ಲಿ ಈಗಾಗಲೇ ಇಬ್ಬರು ಬಲಿಯಾಗಿದ್ದಾರೆ. ಅಮೀಬಿಕ್ ಎನ್ಸೆಫಾಲಿಟಿಸ್ ಅಪರೂಪ ಹಾಗೂ ಮಾರಣಾಂತಿಕವಾಗಿದ್ದು, ಕೇಂದ್ರ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಇದು ಮುಕ್ತ ಜೀವಂತ ಅಮೀಬಾ ಆಗಿರುವ ನೈಗ್ಲೇರಿಯಾ ಫೌಲೇರಿ ಯಿಂದ ಉಂಟಾಗುತ್ತದೆ. ಇದು ತಾಜಾ ನೀರಿನ ಸೆಲೆಗಳಾದ, ಕೆರೆ, ನದಿಗಳಲ್ಲೂ ಕಾಣಬಹುದಾಗಿದೆ.

ಈ ಸೋಂಕಿನ ಲಕ್ಷಣಗಳು ಎಂದರೆ ತಲೆನೋವು, ಜ್ವರ, ತಲೆಸುತ್ತು, ವಾಂತಿ, ಗೊಂದಲ, ಸೀನು, ಭ್ರಮೆ, ಬೆಳಕಿನ ಸೂಕ್ಷ್ಮತೆ ಮತ್ತು ಕೋಮಾ ಆಗಿದೆ. ಅಮೀಬಿಕ್​ ಎನ್ಸಿಫಾಲಿಟಿಸ್​​ನಲ್ಲಿ ಎರಡು ವಿಧಗಳಿವೆ. ಪ್ರಾಥಮಿಕ ಮೆನಿಂಗೊಎನ್ಸೆಫಾಲಿಟಿಸ್ (ಪಿಎಎಂ) ಮತ್ತು ಗ್ರ್ಯಾನುಲೋಮಾಟಸ್ ಅಮೀಬಿಕ್ ಎನ್ಸೆಫಾಲಿಟಿಸ್ (ಜಿಎಇ). ಪಿಎಂನ ಆರಂಭಿಕ ಲಕ್ಷಣಗಳನ್ನು ಮೆನಿಂಜೈಟಿಸ್‌ನಿ ರೀತಿಯಲ್ಲಿದೆ. ಜಿಎಇ ಲಕ್ಷಣಗಳು ಮೆದುಳಿನ ಬಾವು, ಎನ್ಸೆಫಾಲಿಟಿಸ್ ಅಥವಾ ಮೆನಿಂಜೈಟಿಸ್ ಹೊಂದಿದೆ. ಇದರ ಸಾವಿನ ದರ 90ರಷ್ಟಿದೆ.

ಮೆದುಳು ತಿನ್ನುವ ಅಮೀಬಾ ಸೋಂಕು: ಕೆರೆ-ಕಟ್ಟೆ, ಈಜುಕೊಳಗಳಿಗೆ ಇಳಿಯುವ ಮುನ್ನ ಇರಲಿ ಎಚ್ಚರ..!
ಮೆದುಳು ತಿನ್ನುವ ಅಮೀಬಾ: ಅಪರೂಪದ ಸೋಂಕಿನಿಂದ ಮಗು ಸಾವು!

ಈ ಹಿನ್ನೆಲೆಯಲ್ಲಿ ಪೋಷಕರು ನೀರಿನ ಮೂಲಗಳಲ್ಲಿ ಮಕ್ಕಳು ಆಡುವ ಮುನ್ನ ಎಚ್ಚರಿಕೆವಹಿಸಬೇಕು ಎಂದು ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಸಲಹೆಗಾರ ಡಾ.ವಿಕಾಸ್ ನಾಯಕ್ ಹೇಳಿದ್ದಾರೆ.

ಪಿಎಎಂ ಕೇಂದ್ರ ನರ ವ್ಯವಸ್ಥೆ ಮೇಲೆ ತ್ವರಿತ ಪರಿಣಾಮ ಬೀರುತ್ತದೆ. ಇದರ ಸಾವಿನ ದರ 90ರಷ್ಟಿದೆ. ಅಮೀಬಾ ನೈಗ್ಲೇರಿಯಾ ಫೌಲೆರಿ ಇರುವಂತಹ ನೀರಿನ ಸೆಲೆಗಳಲ್ಲಿ ಆರೋಗ್ಯಯುತ ಮಕ್ಕಳು ಮತ್ತು ಯುವ ವಯಸ್ಕರರಲ್ಲೂ ಈ ಸೋಂಕು ತಗಲುತ್ತದೆ. ಈ ಅಮೀಬಾವು ತಾಜಾ ಮತ್ತು ಬೆಚ್ಚಗಿನ ನೀರು ಮತ್ತು ಮಣ್ಣಿನಲ್ಲಿ ಅಡಗಿರುತ್ತದೆ ತಿಳಿಸಿದ್ದಾರೆ.

ಈ ಸೋಂಕು ತಗುಲಿದ ವಾರದೊಳಗೆ ಇದರ ಲಕ್ಷಣಗಳಾದ ಕುತ್ತಿಗೆ ನೋವು, ಸೀನುವಿಕೆ, ಗೊಂದಲ, ಭ್ರಮೆ ಮತ್ತು ವ್ಯಕ್ತಿತ್ವ ಬದಲಾವಣೆ, ಫೋಟೋಫೋಬಿಯಾ, ಸಮತೋಲನ ನಷ್ಟಗಳು ಕಾಣುತ್ತದೆ. ಇವುಗಳನ್ನು ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ, ಕೋಮಾ, ಮಿದುಳಿನ ಊತ ಮತ್ತು ಸಾವಿಗೆ ಕಾರಣವಾಗುತ್ತದೆ,

ಈ ಸೋಂಕಿಗೆ ಒಳಗಾಗುವುದನ್ನು ತಡೆಯಲು ಇರುವ ಪ್ರಮುಖ ಮುನ್ನೆಚ್ಚರಿಕೆ ಎಂದರೆ, ನಿಂತ ನೀರಿನಲ್ಲಿ ಈಜುವುದು, ಡೈವಿಂಗ್​​ ಮಾಡುವುದನ್ನು ತಪ್ಪಿಸುವುದಾಗಿದೆ. ಒಂದು ವೇಳೆ ಈಜು ಅನಿವಾರ್ಯವಾದರೆ, ಮೂಗಿಗೆ ಕ್ಲಿಪ್​ನಂತಹ ಸುರಕ್ಷತಾ ಕ್ರಮ ತೆಗೆದುಕೊಳ್ಳುವುದು ಅವಶ್ಯವಾಗಿದೆ. ಸೋಂಕು ಪತ್ತೆ ಮಾಡಲು ಹಾಗೂ ಚಿಕಿತ್ಸೆ ನಿರ್ಧರಿಸಲು ಮೆದುಳಿನ ಬಯಾಪ್ಸಿಗೆ ಶಿಫಾರಸು ಮಾಡಲಾಗುತ್ತದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಸಾಂಕ್ರಾಮಿಕ ರೋಗ ಮತ್ತು ಪ್ರವಾಸ ಮೆಡಿಸಿನ್ ಕನ್ಸಲ್ಟೆಂಟ್ ಡಾ ಸ್ವಾತಿ ರಾಜಗೋಪಾಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com