ಬಣ್ಣ ಬಣ್ಣದ ಆಹಾರ, ತರುವುದು ಆರೋಗ್ಯಕ್ಕೆ ಸಂಚಕಾರ: 'ರೊಡಮೈನ್ ಬಿ' ಬಗ್ಗೆ ಎಷ್ಟು ಗೊತ್ತು?

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುವ ಕೃತಕ ಬಣ್ಣಗಳಲ್ಲಿ ರೋಡಮೈನ್ ಬಿ ಎಂಬ ಅಂಶವು ಪತ್ತೆಯಾಗಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.
ಬಣ್ಣ ಬಣ್ಣದ ಕ್ಯಾಂಡಿಗಳು
ಬಣ್ಣ ಬಣ್ಣದ ಕ್ಯಾಂಡಿಗಳು

ಎಲ್ಲರೂ ಇಷ್ಟಪಡುವಂತಹ ಅದರಲ್ಲೂ ಮಕ್ಕಳಿಗೆ ಅಚ್ಚುಮೆಚ್ಚಾಗಿರುವ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಅತಿಯಾಗಿ ಕೃತಕ ಬಣ್ಣದ ಬಳಕೆ ಮಾಡಲಾಗುತ್ತಿದೆ ಎಂದು ಇವುಗಳ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿದೆ. ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಬಳಸಲಾಗುವ ಕೃತಕ ಬಣ್ಣಗಳಲ್ಲಿ ರೋಡಮೈನ್ ಬಿ ಎಂಬ ಅಂಶವು ಪತ್ತೆಯಾಗಿದ್ದು, ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ.

ದೀರ್ಘಕಾಲ ತನಕ ಕೃತಕ ಬಣ್ಣ ಬಳಸುವುದರಿಂದ ಮಕ್ಕಳಲ್ಲಿ ಕ್ಯಾನ್ಸರ್ ಕೂಡ ಕಂಡುಬರುವುದು ಎಂದು ತಜ್ಞರು ತಿಳಿಸಿದ್ದಾರೆ.

ಬಣ್ಣ ಬಣ್ಣದ ಕ್ಯಾಂಡಿಗಳು
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ

ರೊಡಮೈನ್ ಬಿ ಎಂದರೇನು?

ರೊಡಮೈನ್ ಬಿ ಒಂದು ರಾಸಾಯನಿಕ ಸಂಯುಕ್ತವಾಗಿದ್ದು, ಇದನ್ನು ರೇಷ್ಮೆ, ಸೆಣಬು, ಚರ್ಮ, ಹತ್ತಿ ಮತ್ತು ಉಣ್ಣೆಯನ್ನು ಬಣ್ಣ ಮಾಡಲು ಸಿಂಥೆಟಿಕ್ ಬಣ್ಣಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ, ಹಾಗೆಯೇ ಸೌಂದರ್ಯವರ್ಧಕಗಳು ಮತ್ತು ಪ್ಲಾಸ್ಟಿಕ್ ಉದ್ಯಮಗಳಲ್ಲಿ ಇದನ್ನು ಬಳಸಲಾಗುತ್ತದೆ. ಇದರ ಬೆಲೆ ಕಡಿಮೆ. ಇದನ್ನು ಆಹಾರಕ್ಕೆ ಬಣ್ಣ ನೀಡಲು ಹೆಚ್ಚು ಬಳಸಲಾಗುತ್ತಿದೆ. ಅದರಲ್ಲೂ ಬೀದಿ ಬದಿಯ ತಿಂಡಿಗಳಲ್ಲಿ ಹೆಚ್ಚು ಬಳಸಲಾಗುತ್ತಿದೆ. ಮೆಣಸಿನ ಪುಡಿ ಮತ್ತು ಮೆಣಸಿನ ಎಣ್ಣೆಯಂತಹ ವಸ್ತುಗಳಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತಿದೆ. ಇದರಿಂದ ಹಲವಾರು ಬಗೆಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಅಧ್ಯಯನಗಳು ಹೇಳಿವೆ. ಇದು ಚರ್ಮ ಮತ್ತು ಕಣ್ಣಿನ ಕಿರಿಕಿರಿ ಉಂಟು ಮಾಡುವ ಜತೆಗೆ ಶ್ವಾಸಕೋಶದ ಸಮಸ್ಯೆಗೆ ಕಾರಣವಾಗಬಲ್ಲದು.

ರೋಡಮೈನ್ ಬಿ ಅಷ್ಟೇ ಅಲ್ಲದೆ, ಇತ್ತೀಚೆಗೆ ಆಹಾರದಲ್ಲಿ ಹೆಚ್ಚು ಸನ್‌ಸೆಟ್ ಯೆಲ್ಲೋ, ಕಾರ್ಮೋಸಿನ್ ಮತ್ತು ಟಾರ್ಟ್ರಾಜಿನ್ ಎಂಬ ರಾಸಾಯನಿಕಗಳನ್ನೂ ಕೂಡ ಬಳಕೆ ಮಾಡಲಾಗುತ್ತಿರುವುದು ಕಂಡು ಬರುತ್ತಿದೆ. ಸಂಸ್ಕರಿಸಿದ ಆಹಾರಗಳಲ್ಲಿ ಇವುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ.

ಬಣ್ಣ ಬಣ್ಣದ ಕ್ಯಾಂಡಿಗಳು
ಕಲರ್ ಕಾಟನ್‌ ಕ್ಯಾಂಡಿ ಬ್ಯಾನ್; ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಸುವಂತಿಲ್ಲ; ಉಲ್ಲಂಘಿಸಿದರೆ 10 ಲಕ್ಷ ರು. ದಂಡ, 7 ವರ್ಷ ಶಿಕ್ಷೆ!

ಸಂಸ್ಕರಿಸಿದ ಆಹಾರವನ್ನು ಗುರುತಿಸುವುದು ಹೇಗೆ?

ನೋವಾ ಎಂದು ಕರೆಯಲ್ಪಡುವ ಮೊಂಟೆರೊ ವ್ಯವಸ್ಥೆಯು ಆಹಾರಗಳನ್ನು ನಾಲ್ಕು ವರ್ಗಗಳಾಗಿ ವಿಂಗಡಿಸುತ್ತದೆ. ಸಂಸ್ಕರಿಸದ, ಕನಿಷ್ಠವಾಗಿ ಸಂಸ್ಕರಿಸಿದ ಆಹಾರಗಳು, ಸಂಸ್ಕರಿಸಿದ ಆಹಾರಗಳು, ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು.

ವರ್ಗ 1: ಸಂಸ್ಕರಿಸದ ಆಹಾರಗಳು: ಧಾನ್ಯಗಳು, ದ್ವಿದಳ ಧಾನ್ಯಗಳು, ತರಕಾರಿಗಳು, ಹಣ್ಣುಗಳು, ಕಾಳುಗಳು, ಹಾಲು ಮತ್ತು ಮಾಂಸ ಈ ವರ್ಗದ ಅಡಿಯಲ್ಲಿ ಬರುತ್ತವೆ. ಇವುಗಳಲ್ಲಿ ಯಾವುದೇ ಪದಾರ್ಥಗಳ ಸೇರ್ಪಡೆಗಳಿಂದ ಅವು ಬದಲಾಗುವುದಿಲ್ಲ. ಒಂದು ವೇಳೆ ಮಿಶ್ರಣವಾಗಿದ್ದರೂ ಅವುಗಳನ್ನು ತೆಗೆಯಬಹುದು.

ವರ್ಗ 2: ಕನಿಷ್ಟ ಸಂಸ್ಕರಿಸಿದ ಆಹಾರ ಪದಾರ್ಥಗಳು: ಈ ವರ್ಗದಲ್ಲಿ ಸಕ್ಕರೆ, ಉಪ್ಪು, ಎಣ್ಣೆ ಬರುತ್ತವೆ. ಇವುಗಳನ್ನು ಶುದ್ಧೀಕರಣದಂತಹ ಕೈಗಾರಿಕಾ ಪ್ರಕ್ರಿಯೆಗಳ ಮೂಲಕ ಉತ್ಪಾದಿಸಲಾಗುತ್ತದೆ.

ವರ್ಗ 3: ಸಂಸ್ಕರಿಸಿದ ಆಹಾರಗಳು; ಈ ವರ್ಗದಲ್ಲಿ ಬ್ರೆಡ್ ಮತ್ತು ಚೀಸ್ ಗಳು ಬರುತ್ತವೆ. ಇಲ್ಲಿ ಆಹಾರಗಳ ಬಾಳಕೆಯನ್ನು ಹೆಚ್ಚಿಸಲು ಹಾಗೂ ರುಚಿಕರ ಹಾಗೂ ಕಣ್ಣಿಗೆ ಆನಂದವನ್ನು ತರುವ ರೀತಿಯಲ್ಲಿ ಸಿದ್ಧಪಡಿಸಲಾಗುತ್ತದೆ.

ವರ್ಗ 4: ಅಲ್ಟ್ರಾ-ಸಂಸ್ಕರಿಸಿದ ಆಹಾರಗಳು; ಈ ಆಹಾರಗಳ ಪದಾರ್ಥಗಳು ಹೆಚ್ಚು ರುಚಿಕರ ಹಾಗೂ ಆಗಾಗ್ಗೆ ತಿನ್ನಬೇಕೆಂಬ ಭಾವನೆ ಹುಟ್ಟುವಂತೆ ಮಾಡಲಾಗುತ್ತದೆ. ಇಲ್ಲಿ ಬಣ್ಣ ಹಾಗೂ ಸುವಾಸನೆಗಳ ಬರಲು ರಾಸಾಯನಿಕಗಳನ್ನು ಬಳಕೆ ಮಾಡಲಾಗುತ್ತದೆ.

ಬಣ್ಣ ಬಣ್ಣದ ಕ್ಯಾಂಡಿಗಳು
ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ!

ಹೆಚ್ಚು ಕ್ಯಾಲೋರಿ ಹಾಗೂ ಕಡಿಮೆ ಪೋಷಕಾಂಶವುಳ್ಳ ಆಹಾರ ಪದಾರ್ಥಗಳ ಪಟ್ಟಿ ಇಂತಿದೆ...

  • ತಂಪು ಪಾನೀಯಗಳು

  • ಸಿಹಿತಿಂಡಿಗಳು ಮತ್ತು ಖಾರದ ಪ್ಯಾಕೆಟ್ ಗಳು.

  • ಚಾಕೊಲೇಟ್, ಮಿಠಾಯಿ ಮತ್ತು ಐಸ್ ಕ್ರೀಮ್ಗಳು

  • ಪ್ಯಾಕೇಜ್ ಮಾಡಿದ ಬ್ರೆಡ್‌, ಬನ್‌ ಮತ್ತು ಬೇಕರಿ ಪದಾರ್ಥಗಳು

  • ಕುಕೀಸ್, ಪೇಸ್ಟ್ರಿ ಕೇಕ್

  • ಪಾಸ್ಟಾ ಮತ್ತು ಪಿಜ್ಜಾ

  • ಫಾಸ್ಟ್ ಫುಡ್ ಪ್ಯಾಕೆಟ್.

  • ಬರ್ಗರ್‌, ಹಾಟ್ ಡಾಗ್‌, ಸಾಸ್ ಹಾಗೂ ರೆಡಿ ಮಾಂಸ ಉತ್ಪನ್ನಗಳು

  • ಪುಡಿಮಾಡಿದ ಮತ್ತು ಪ್ಯಾಕ್ ಮಾಡಿದ ತ್ವರಿತ ಸೂಪ್‌ಗಳು, ನೂಡಲ್ಸ್ ಮತ್ತು ಸಿಹಿತಿಂಡಿಗಳು

ಈ ಆಹಾರ ಪದಾರ್ಥಗಳಲ್ಲಿ ರೋಡಮೈನ್ ಬಿ ಅನ್ನು ಬಳಕೆ ಮಾಡಲಾಗಿರುತ್ತದೆ. ಇದರಿಂದಾಗಿಯೇ ಇವುಗಳ ರುಚಿ ಹೆಚ್ಚಾಗಿರುತ್ತದೆ. ಆದರೆ, ಆರೋಗ್ಯದ ಮೇಲೆ ಇವುಗಳ ಪರಿಣಾಮ ಮಾತ್ರ ಭಯಾನಕವಾಗಿರುತ್ತದೆ. ಹೀಗಾಗಿ ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಕೆಗೆ ಸರ್ಕಾರ ಬ್ರೇಕ್ ಹಾಕಿರುವುದು ಉತ್ತಮ ನಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com