ದ್ರಾಕ್ಷಿ ಹಣ್ಣು
ದ್ರಾಕ್ಷಿ ಹಣ್ಣು

Grapes Cleaning: ಅತಿಹೆಚ್ಚು ಕೀಟನಾಶಕ ಸಿಂಪಡಿಸುವ ದ್ರಾಕ್ಷಿ ಹಣ್ಣಿನ ಸ್ವಚ್ಛತೆಗೆ ಮನೆಯಲ್ಲೇ ಇದೆ ಉಪಾಯ!

ಬೇಸಿಗೆ ಇನ್ನೂ ಸಂಪೂರ್ಣವಾಗಿ ಆರಂಭವಾಗಿಯೇ ಇಲ್ಲ.. ಆಗಲೇ ಬೇಸಿಗೆ ಧಗೆ ತಾರಕಕ್ಕೇರಿದ್ದು, ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಣ್ಣಿನ ಜ್ಯೂಸ್ ಗಳು ಎಲ್ಲ ಕಾಲದ ಆರೋಗ್ಯ ಪ್ರಿಯರ ಫೇವರಿಟ್ ಆಗಿದ್ದು, ಆದರೆ ಕೀಟನಾಶಕಗಳದ್ದೇ ಚಿಂತೆಯಾಗಿದೆ.
Published on

ಬೇಸಿಗೆ ಇನ್ನೂ ಸಂಪೂರ್ಣವಾಗಿ ಆರಂಭವಾಗಿಯೇ ಇಲ್ಲ.. ಆಗಲೇ ಬೇಸಿಗೆ ಧಗೆ ತಾರಕಕ್ಕೇರಿದ್ದು, ಜನರು ತಂಪು ಪಾನೀಯಗಳತ್ತ ಮುಖ ಮಾಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಹಣ್ಣಿನ ಜ್ಯೂಸ್ ಗಳು ಎಲ್ಲ ಕಾಲದ ಆರೋಗ್ಯ ಪ್ರಿಯರ ಫೇವರಿಟ್ ಆಗಿದ್ದು, ಆದರೆ ಕೀಟನಾಶಕಗಳದ್ದೇ ಚಿಂತೆಯಾಗಿದೆ. ಹಣ್ಣುಗಳಲ್ಲಿ ಎಲ್ಲರೂ ಹೆಚ್ಚಾಗಿ ಇಷ್ಟಪಡುವ ದ್ರಾಕ್ಷಿ ಹಣ್ಣು ಹೆಚ್ಚಾಗಿ ಕೀಟಬಾಧೆಗೆ ಒಳಗಾಗುವುದರಿಂದ ಅದಕ್ಕೇ ಕೀಟನಾಶಕ ಸಿಂಪಡಣೆ ಹೆಚ್ಚು..

ದ್ರಾಕ್ಷಿ ತೊಳೆಯುವುದು ಏಕೆ ಮುಖ್ಯ?

Environmental Working Groupನ ಮಾಹಿತಿ ಪ್ರಕಾರ ಜಗತ್ತಿನ ಅತ್ಯಧಿಕ ಮಟ್ಟದ ಕೀಟನಾಶಕಗಳನ್ನು ಹೊಂದಿರುವ ಉತ್ಪನ್ನಗಳಲ್ಲಿ ದ್ರಾಕ್ಷಿಗೆ ಪ್ರಮುಖ ಸ್ಥಾನ. ಸಾಮಾನ್ಯವಾಗಿ ದ್ರಾಕ್ಷಿ ಹಣ್ಣಿಗೆ ಕೀಟಬಾಧೆ ಹೆಚ್ಚು.. ಕಣ್ಣಿಗೆ ಕಾಣುವ ಕೀಟಗಳು ಮಾತ್ರವಲ್ಲ.. ಕಣ್ಣಿಗೆ ಕಾಣದ ವೈರಸ್‌ಗಳು, ಬ್ಯಾಕ್ಟೀರಿಯಾಗಳು ಅದರ ಮೇಲ್ಮೈ ಮೇಲೆ ಇರುತ್ತವೆ. ಇಂತಹ ದ್ರಾಕ್ಷಿಯನ್ನು ಸ್ವಚ್ಛ ಮಾಡದೇ ಸೇವಿಸಿದರೆ ಆ ಸೂಕ್ಷ್ಮಜೀವಿಗಳು ನಿಮ್ಮ ದೇಹ ಸೇರಿ ಆಹಾರದಿಂದ ಹರಡುವ ಅನಾರೋಗ್ಯವನ್ನು ಉಂಟುಮಾಡಬಹುದು. ಹೀಗಾಗಿ ದ್ರಾಕ್ಷಿಯನ್ನು ತಿನ್ನುವ ಮೊದಲು ಉತ್ತಮವಾಗಿ ತೊಳೆಯುವುದು ಅತ್ಯಂತ ಮುಖ್ಯ..

ದ್ರಾಕ್ಷಿ ಹಣ್ಣು
ಪ್ಯಾಶನ್ ಫ್ರೂಟ್: ಏನಿದು ಹೊಸ ಬಗೆಯ ಹಣ್ಣು? ಇದರಲ್ಲಿರುವ ಆರೋಗ್ಯಕರ ಪ್ರಯೋಜನಗಳೇನು?

ದ್ರಾಕ್ಷಿಯನ್ನು ಯಾವಾಗ ತೊಳೆಯಬೇಕು?

ಸಾಮಾನ್ಯವಾಗಿ ಎಲ್ಲರೂ ದ್ರಾಕ್ಷಿಯನ್ನ ಮನೆಗೆ ತಂದೊಡನೆಯೇ ಎಲ್ಲವನ್ನೂ ನೀರು ಹಾಕಿ ಸ್ವಚ್ಛಗೊಳಿಸುತ್ತಾರೆ. ಆದರೆ ಹಾಗೆ ಮಾಡಬಾರದು.. ಕಾರಣ ನೀವು ಎಲ್ಲ ದ್ರಾಕ್ಷಿ ಹಣ್ಣುಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸಿದರೆ, ಆ ಸಮಯದಲ್ಲಿ ನೀವು ತಿನ್ನದೇ ಬಿಟ್ಟ ಹಣ್ಣಿಗೂ ಹೆಚ್ಚುವರಿ ತೇವಾಂಶ ಸೇರಿ ಅದು ಬೇಗ ಕೊಳೆಯುತ್ತದೆ. ಹೀಗಾಗಿ ನೀವು ತಿನ್ನಲು ಇಚ್ಚಿಸಿದ ಪ್ರಮಾಣದಷ್ಟು ದ್ರಾಕ್ಷಿ ಹಣ್ಣನ್ನು ಮಾತ್ರ ತೊಳೆಯಬೇಕು.

ದ್ರಾಕ್ಷಿ ತೊಳೆಯುವುದು ಹೇಗೆ?

ದ್ರಾಕ್ಷಿ ತೊಳೆಯುವುದು ಕಷ್ಟದ ಕೆಲಸವೇನಲ್ಲ.. ಆದರೆ ಹಣ್ಣು ಸಾಧ್ಯವಾದಷ್ಟು ಕೀಟನಾಶಕ ರಹಿತ ಮತ್ತು ಸ್ವಚ್ಛತೆ ಖಚಿತಪಡಿಸಿಕೊಳ್ಳಲು ನೀವು ಕೆಲವು ಹಂತಗಗಳನ್ನು ಅನುಸರಿಸಬೇಕು. ಮೊದಲಿಗೆ ಒಂದು ಬಟ್ಟಲಿನಲ್ಲಿ ದ್ರಾಕ್ಷಿ ಹಣ್ಣುಗಳನ್ನು ಹಾಕಿ ನಲ್ಲಿಯಿಂದ ನೀರು ಬಿಡಿ.. ನಿಧಾನವಾಗಿ ಕೈಗಳಿಂದ ದ್ರಾಕ್ಷಿ ಹಣ್ಣನ್ನು ಸ್ವಚ್ಛಗೊಳಿಸಿ. ಬಳಿಕ ಈ ನೀರಿನಲ್ಲಿ ಸುಮಾರು 5 ರಿಂದ 10 ನಿಮಿಷಗಳ ಕಾಲ ದ್ರಾಕ್ಷಿಯನ್ನು ನೆನೆಸಿಡಿ. ಬಳಿಕ ಅದೇ ಪಾತ್ರೆಗೆ ಅಡುಗೆ ಉಪ್ಪು.. ಸೋಡಾ ಅಥವಾ ವಿನೆಗರ್ ಹಾಕಿ.. ಮತ್ತೆ ಸ್ವಚ್ಛಗೊಳಿಸಿ.

ಇದರಿಂದ ಹಣ್ಣಿನ ಮೇಲಿರುವ ಸುಮಾರು ಶೇ.75ರಿಂದ 80ರಷ್ಟು ಕಿಟನಾಶಕ ಸ್ವಚ್ಛವಾಗುತ್ತದೆ. ಬಳಿಕ ದ್ರಾಕ್ಷಿ ಹಣ್ಣನ್ನು ತೆಗೆದು ಮತ್ತೊಮ್ಮೆ ಸ್ವಚ್ಛವಾದ ನೀರಿನಲ್ಲಿ ಹಾಕಿ ಮತ್ತೊಮ್ಮೆ ಸ್ವಚ್ಛಗೊಳಿಸಿ. ಬಳಿಕ ಸ್ವಚ್ಛವಾದ ಟವಲ್ ನಲ್ಲಿ ದ್ರಾಕ್ಷಿ ಹಣ್ಣನ್ನು ಹಾಕಿ ಅದರ ಮೇಲಿರುವ ನೀರನ್ನು ಒರೆಸಿ. ಸಣ್ಣ ಸಣ್ಣ ರಂದ್ರಗಳಿರುವ ಪಾತ್ರೆಗೆ ಹಾಕಿ ಅದನ್ನು ಶೇಖರಿಸಿಟ್ಟು ಕೆಲ ಸಮಯದ ನಂತರ ಸೇವಿಸಿ.

ದ್ರಾಕ್ಷಿ ಹಣ್ಣು
ಒಡಿಶಾ: ವಿಷಕಾರಿ ಹಣ್ಣು ತಿಂದು 11 ಮಕ್ಕಳು ಅಸ್ವಸ್ಥ

ವಿಶೇಷ ಸೂಚನೆ:

ಸಾಮಾನ್ಯವಾಗಿ ದ್ರಾಕ್ಷಿ ಹಣ್ಣನ್ನು ತೊಳೆಯುವುದು ಕೊಳಕು ಮತ್ತು ಕೀಟನಾಶಕಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ಎಲ್ಲಾ ಕೀಟನಾಶಕಗಳನ್ನು ತೆಗೆದುಹಾಕುವುದನ್ನು ಖಾತರಿಪಡಿಸುವುದಿಲ್ಲ. ಬಹುಪಾಲು ಕೀಟನಾಶಕಗಳ ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ಹಣ್ಣಿನ ಸಿಪ್ಪೆ ತೆಗೆಯುವುದು. ಕೀಟನಾಶಕಗಳ ಸೇವನೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com