
ಕ್ಷಯರೋಗ, ಟಿಬಿ ಇತ್ತೀಚೆಗೆ ವಿಶ್ವಾದ್ಯಂತ ಹೆಚ್ಚುತ್ತಿರುವ ರೋಗವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO), ತನ್ನ ಇತ್ತೀಚಿನ ವರದಿಯಲ್ಲಿ ಆತಂಕಕಾರಿ ಅಂಶವನ್ನು ಬಹಿರಂಗಪಡಿಸಿದೆ. ಕಳೆದ ವರ್ಷ 2023 ರಲ್ಲಿ ಸರಿಸುಮಾರು 8.2 ಮಿಲಿಯನ್ ಮಂದಿಗೆ ಹೊಸದಾಗಿ ಕ್ಷಯರೋಗ ಕಾಣಿಸಿಕೊಂಡಿದ್ದು, 1995ರಿಂದ ಜಾಗತಿಕವಾಗಿ ಈ ರೋಗವನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಆರಂಭವಾದಾಗಿನಿಂದ ಕಳೆದ ವರ್ಷದ್ದು ಅತ್ಯಧಿಕ ಸಂಖ್ಯೆಯಾಗಿದೆ.
2022 ರಲ್ಲಿ ಜಾಗತಿಕವಾಗಿ 7.5 ಮಿಲಿಯನ್ ಟಿಬಿ ಪ್ರಕರಣ ದಾಖಲಾಗುತ್ತಿದೆ, ಕ್ಷಯರೋಗ ವಿಶ್ವದಾದ್ಯಂತ ಪ್ರಮುಖ ಸಾಂಕ್ರಾಮಿಕ ರೋಗವಾಗಿ ಇತ್ತೀಚಿಗೆ ಹರಡುತ್ತಿದ್ದು, ಕೋವಿಡ್-19 ಸಾಂಕ್ರಾಮಿಕವನ್ನು ಮೀರಿಸುತ್ತಿದೆ.
WHO ನ ಜಾಗತಿಕ ಕ್ಷಯರೋಗ ವರದಿ 2024 ರ ಪ್ರಕಾರ, 2023 ರಲ್ಲಿ ಭಾರತದಲ್ಲಿ ಶೇಕಡಾ 26ರಷ್ಟು ಟಿಬಿ ಪ್ರಕರಣಗಳು ದಾಖಲಾಗಿವೆ. ನಂತರ ಇಂಡೋನೇಷ್ಯಾ (10%), ಚೀನಾ (6.8%), ಫಿಲಿಪೈನ್ಸ್ (6.8%) ಮತ್ತು ಪಾಕಿಸ್ತಾನ (6.3%) ಗಳಿವೆ.
ಹೊಸ ಪ್ರಕರಣಗಳಲ್ಲಿ ಶೇಕಡಾ 55ರಷ್ಟು ಪುರುಷರು, ಶೇಕಡಾ 33ರಷ್ಟು ಮಹಿಳೆಯರು ಮತ್ತು ಶೇಕಡಾ 12ರಷ್ಟು ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬಂದಿದೆ. ಸಾಂಕ್ರಾಮಿಕ ರೋಗ-ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣವಾದ ಕ್ಷಯರೋಗಕ್ಕೆ ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
WHO ನ ಜಾಗತಿಕ ಕ್ಷಯರೋಗ ವರದಿ 2024 ರ ಪ್ರಕಾರ, 2023 ರಲ್ಲಿ ಭಾರತದಲ್ಲಿ ಶೇಕಡಾ 26ರಷ್ಟು ಟಿಬಿ ಪ್ರಕರಣಗಳು ದಾಖಲಾಗಿವೆ. ನಂತರ ಇಂಡೋನೇಷ್ಯಾ (10%), ಚೀನಾ (6.8%), ಫಿಲಿಪೈನ್ಸ್ (6.8%) ಮತ್ತು ಪಾಕಿಸ್ತಾನ (6.3%) ಗಳಿವೆ.
ಹೊಸ ಪ್ರಕರಣಗಳಲ್ಲಿ ಶೇಕಡಾ 55ರಷ್ಟು ಪುರುಷರು, ಶೇಕಡಾ 33ರಷ್ಟು ಮಹಿಳೆಯರು ಮತ್ತು ಶೇಕಡಾ 12ರಷ್ಟು ಮಕ್ಕಳು ಮತ್ತು ಹದಿಹರೆಯದವರಲ್ಲಿ ಕಂಡುಬಂದಿದೆ. ಸಾಂಕ್ರಾಮಿಕ ರೋಗ-ಸಂಬಂಧಿತ ಸಾವುಗಳಿಗೆ ಪ್ರಮುಖ ಕಾರಣವಾದ ಕ್ಷಯರೋಗಕ್ಕೆ ತುರ್ತು ಆರೋಗ್ಯ ಚಿಕಿತ್ಸೆ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅಂಗೋಲಾ, ಬಾಂಗ್ಲಾದೇಶ, ಬ್ರೆಜಿಲ್, ಕಾಂಬೋಡಿಯಾ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಚೀನಾ, ಕಾಂಗೋ, ಉತ್ತರ ಕೊರಿಯಾ, DR ಕಾಂಗೋ, ಇಥಿಯೋಪಿಯಾ, ಭಾರತ, ಇಂಡೋನೇಷ್ಯಾ, ಕೀನ್ಯಾ, ಲೆಸೋಥೋ, ಲೈಬೀರಿಯಾ, ಮೊಜಾಂಬಿಕ್, ಮ್ಯಾನ್ಮಾರ್, ನಮೀಬಿಯಾ, ನೈಜೀರಿಯಾ, ಪಾಕಿಸ್ತಾನ, ಪಪುವಾ ನ್ಯೂ ಗಿನಿಯಾ, ಫಿಲಿಪೈನ್ಸ್, ರಷ್ಯಾ, ಸಿಯೆರಾ ಲಿಯೋನ್, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್, ತಾಂಜಾನಿಯಾ, ವಿಯೆಟ್ನಾಂ, ಜಾಂಬಿಯಾ ಮತ್ತು ಜಿಂಬಾಬ್ವೆ ದೇಶಗಳ ಮೇಲೆ ಕ್ಷಯರೋಗ ಅವ್ಯಾಹತವಾಗಿ ಪರಿಣಾಮ ಬೀರಿದೆ.
ಟಿಬಿ-ಸಂಬಂಧಿತ ಸಾವುಗಳು 2022 ರಲ್ಲಿ 1.32 ಮಿಲಿಯನ್‌ನಿಂದ 2023 ರಲ್ಲಿ 1.25 ಮಿಲಿಯನ್‌ಗೆ ಸ್ವಲ್ಪ ಕಡಿಮೆಯಾಗಿದೆ, ಟಿಬಿಯಿಂದ ಅನಾರೋಗ್ಯಕ್ಕೆ ಒಳಗಾಗುವ ವ್ಯಕ್ತಿಗಳ ಅಂದಾಜು ಸಂಖ್ಯೆ 10.8 ಮಿಲಿಯನ್‌ಗೆ ಏರಿಕೆಯಾಗಿದೆ.
WHO ಡೈರೆಕ್ಟರ್-ಜನರಲ್ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಟಿಬಿ ಹಲವರನ್ನು ಬಲಿ ತೆಗೆದುಕೊಳ್ಳುತ್ತಿದೆ. ಅದನ್ನು ತಡೆಯಲು, ಪತ್ತೆಹಚ್ಚಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಲಭ್ಯವಿರುವ ಉಪಕರಣಗಳ ಬಳಕೆಯನ್ನು ವಿಸ್ತರಿಸಲು ತಮ್ಮ ಬದ್ಧತೆಗಳನ್ನು ಪೂರೈಸಲು ಅವರು ದೇಶಗಳಿಗೆ ಕರೆ ನೀಡಿದರು.
ಬಹು ಔಷಧಿ-ನಿರೋಧಕ ಕ್ಷಯರೋಗ
ಕ್ಷಯರೋಗದಲ್ಲಿ ಬಹು-ಔಷಧ-ನಿರೋಧಕ ಕ್ಷಯರೋಗದ (MDR-TB) ರೂಪಾಂತರವು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. 2023 ರಲ್ಲಿ, ಔಷಧಿ-ನಿರೋಧಕ ಟಿಬಿ ಹೊಂದಿರುವ ಸುಮಾರು ಶೇಕಡಾ 40ರಷ್ಟು ಮಾತ್ರ ಚಿಕಿತ್ಸೆಯನ್ನು ಪ್ರವೇಶಿಸಿದರು, ಇದು ಆರೈಕೆ ಮತ್ತು ರೋಗ ನಿರ್ಣಯಿಸಿ ಚಿಕಿತ್ಸೆ ಪಡೆಯುವವರ ನಡುವಿನ ಸಾಕಷ್ಟು ಅಂತರ ತೋರಿಸುತ್ತದೆ.
ಐಸೋನಿಯಾಜಿಡ್ ಮತ್ತು ರಿಫಾಂಪಿಸಿನ್‌ನಂತಹ ಚಿಕಿತ್ಸೆಯಲ್ಲಿ ಬಳಸುವ ಪ್ರಾಥಮಿಕ ಪ್ರತಿಜೀವಕಗಳಿಗೆ ಪ್ರತಿರೋಧವನ್ನು ಅಭಿವೃದ್ಧಿಪಡಿಸಿದಾಗ MDR-TB ಕಾಣಿಸುತ್ತದೆ. ಈ ಪ್ರತಿರೋಧವು ಸಾಮಾನ್ಯವಾಗಿ ಅಸಮರ್ಪಕ ಚಿಕಿತ್ಸಾ ಕ್ರಮಗಳು, ಕಳಪೆ-ಗುಣಮಟ್ಟದ ಔಷಧಗಳು ಅಥವಾ ಚಿಕಿತ್ಸೆಯನ್ನು ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸುವುದರಿಂದ ಉಂಟಾಗುತ್ತದೆ. ಔಷಧ-ನಿರೋಧಕ ಚಿಕಿತ್ಸಾ ಕ್ರಮಗಳನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಟಿಬಿಯನ್ನು ನಿಯಂತ್ರಿಸುವ ಜಾಗತಿಕ ಪ್ರಯತ್ನಗಳನ್ನು ತಡೆಯುತ್ತದೆ ಎಂದು WHO ಹೇಳುತ್ತದೆ.
MDR-TB ಯ ಪರಿಣಾಮ ಅಪಾಯದ್ದಾಗಿರುತ್ತದೆ. ಇದು ದೀರ್ಘಾವಧಿಯ ದುಬಾರಿ ಚಿಕಿತ್ಸಾ ವಿಧಾನವಾಗಿರುತ್ತದೆ. ಬಡವರಲ್ಲಿ ಅನೇಕರಿಗೆ ಲಭ್ಯವಾಗುವುದಿಲ್ಲ.
ಜಾಗತಿಕ ಅಸಮಾನತೆಗಳು ಮತ್ತು ಹಣಕಾಸಿನ ಸವಾಲುಗಳು
ಟಿಬಿಯ ಚಿಕಿತ್ಸಾ ವಿಧಾನ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಸಮರ್ಪಕವಾಗಿಲ್ಲ. 2023 ರಲ್ಲಿ, ಭಾರತವು ಸುಮಾರು 2.55 ಮಿಲಿಯನ್ ಹೊಸ ಟಿಬಿ ಪ್ರಕರಣಗಳನ್ನು ವರದಿ ಮಾಡಿದೆ, ಇದು 1960 ರ ದಶಕದಲ್ಲಿ ಅದರ ಟಿಬಿ ನಿಯಂತ್ರಣ ಕಾರ್ಯಕ್ರಮ ಪ್ರಾರಂಭವಾದಾಗಿನಿಂದ ಅತಿ ಹೆಚ್ಚಾಗಿದೆ. ಈ ಗಮನಾರ್ಹ ಏರಿಕೆಯು ಪೀಡಿತ ವ್ಯಕ್ತಿಗಳನ್ನು ಗುರುತಿಸಲು ಮತ್ತು ಚಿಕಿತ್ಸೆ ನೀಡಲು ಸರ್ಕಾರದ ಪ್ರಯತ್ನ ತೋರಿಸುತ್ತದೆ.
ಪ್ರಗತಿಗಳ ಹೊರತಾಗಿಯೂ, ಟಿಬಿ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ಧನಸಹಾಯವು ಸರ್ಕಾರದಿಂದ ತೀವ್ರವಾಗಿ ಕಡಿಮೆಯಾಗಿದೆ. TB ಕುರಿತು 2023 UN ಉನ್ನತ ಮಟ್ಟದ ಸಭೆಯಲ್ಲಿ 2027 ಕ್ಕೆ ಜಾಗತಿಕ TB ಗುರಿಗಳನ್ನು ಪೂರೈಸಲು ವಾರ್ಷಿಕವಾಗಿ ಅಂದಾಜು $22 ಶತಕೋಟಿ ಅಗತ್ಯವಿದೆ ಎಂದು WHO ಅಂದಾಜಿಸಿದೆ.
Advertisement