ತಡರಾತ್ರಿ ಆಹಾರ ಸೇವನೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ..?

ತಡರಾತ್ರಿಯೋ ಅಥವಾ ಹಸಿವಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ?
File photo
ಸಂಗ್ರಹ ಚಿತ್ರ

ಉತ್ತಮವಾದ, ನಿಯಮಬದ್ಧವಾದ ಆಹಾರ ಪದ್ಧತಿಯಿಂದ ಆರೋಗ್ಯವನ್ನು ಖಂಡಿತ ಉತ್ತಮವಾಗಿ ಇಟ್ಟುಕೊಳ್ಳಬಹುದು. ಇತ್ತೀಚೆಗೆ ಹೆಚ್ಚಾಗುತ್ತಿರುವ ಅದೆಷ್ಟೋ ಕಾಯಿಲೆಗಳಿಗೆ ಅಸಂಬದ್ಧ ಆಹಾರ ಪದ್ಧತಿಯೇ ಕಾರಣ ಎಂಬುದನ್ನು ಹಲವು ತಜ್ಞರು ಹೇಳಿದ್ದಾರೆ. ನಾವು ತಿನ್ನುವ ಆಹಾರ ಪೋಷಕಾಂಶಗಳಿಂದ ಕೂಡಿದ್ದರೆ, ಸಾಲದು ಅದನ್ನು ತಿನ್ನುವ ಸಮಯವೂ ಸರಿಯಾಗಿರಬೇಕು. ತಿನ್ನಬೇಕು.. ಹೊಟ್ಟೆ ತುಂಬಿಸಿಕೊಳ್ಳಬೇಕು ಎಂದು ಹೊತ್ತಲ್ಲದ ಹೊತ್ತಿನಲ್ಲಿ ತಿಂದರೆ ಆರೋಗ್ಯಕ್ಕೆ ತೊಂದರೆಯೇ ಹೊರತು, ಉಪಯೋಗವೇನೂ ಇಲ್ಲ.

ತಡರಾತ್ರಿಯೋ ಅಥವಾ ಹಸಿವಾದಾಗಲೋ ಊಟ ಮಾಡುವುದು ಇಂದಿನ ಯುವ ಜನರ ಹವ್ಯಾಸವಾಗಿಬಿಟ್ಟಿದೆ. ಆದರೆ ಇದು ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು, ಇದರಿಂದ ಏನೆಲ್ಲಾ ಸಮಸ್ಯೆಗಾಳಗಬಹುದು ಎನ್ನುವುದು ತಿಳಿದಿದೆಯಾ?

ತಡರಾತ್ರಿ ಊಟ ಮಾಡಿದರೆ ಏನಾಗುತ್ತದೆ? 

ರಾತ್ರಿ ಊಟ ದೇಹಕ್ಕೆ ಅತ್ಯಗತ್ಯವಾಗಿರುತ್ತದೆ. ಆದರೆ ಲಘು ಆಹಾರ ಮಾತ್ರ ಸೇವನೆ ಮಾಡಬೇಕು. ರಾತ್ರಿ ದೇಹ ವಿಶ್ರಾಂತಿಯ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ಹೊಟ್ಟೆ ಬಿರಿಯುವಂತೆ ಊಟ ಮಾಡುವುದು ಒಳ್ಳೆಯದಲ್ಲ. ಅಲ್ಲದೆ ತಡರಾತ್ರಿಯ ಊಟವೂ ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯೇ ಹೊರತು ಒಳ್ಳೆಯದಲ್ಲ.

ರಾತ್ರಿಯ ವೇಳೆಯಲ್ಲಿ ವಾಸ್ತವವಾಗಿ ನಮ್ಮ ದೇಹವನ್ನು ನಿರ್ವಿಷಗೊಳಿಸಲು ಮತ್ತು ಮುಂದಿನ ದಿನಕ್ಕೆ ತಯಾರಾಗಲು ಇರುವ ಸಮಯವಾಗಿದೆ. ಆದರೆ, ನಾವು ಆ ಸಮಯದಲ್ಲಿ ನಿದ್ದೆ ಮಾಡದೆ, ತಿನ್ನುವುದರಿಂದ ದೇಹದ ಸಾಮಾನ್ಯ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ. ದೇಹವು ಎರಡೂ ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ ಮತ್ತು ಪ್ರತಿಯಾಗಿ ದೇಹದ ಜೈವಿಕ ಚಟುವಟಿಕೆ ಏರುಪೇರಾಗುತ್ತದೆ.

ತಡರಾತ್ರಿಯಲ್ಲಿ ತಿಂದರೆ ತೂಕ ಹೆಚ್ಚಾಗಬಹುದು. ಆಹಾರ ಸರಿಯಾಗಿ ಜೀರ್ಣವಾಗದೆ ದೇಹದಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು. ಆಸಿಡ್ ರಿಫ್ಲಕ್ಸ್ ಸಮಸ್ಯೆ ಕಾಡುತ್ತದೆ. ಹೊಟ್ಟೆಯಲ್ಲಿ ಆಸಿಡ್‌ ಉತ್ಪತ್ತಿಯಾಗುವ ಕಾರಣ ಆಸಿಡಿಟಿ, ಪದೇ ಪದೇ ತೇಗು ಬರುವುದು, ಎದೆ ಉರಿ ಸಮಸ್ಯೆ ಹೆಚ್ಚಾಗಿ ಕಾಡಬಹುದು.

ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತದೆ. ದೇಹದ ಚಟುವಟಿಕೆ ಹದಗೆಟ್ಟು ಅಜೀರ್ಣ, ಹೊಟ್ಟೆಯ ಸಮಸ್ಯೆಗಳು ಕಾಡಬಹುದು. ಇದು ಹೃದಯದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ತಡರಾತ್ರಿ ಊಟ ಕೊಲೆಸ್ಟ್ರಾಲ್‌ ಹೆಚ್ಚು ಮಾಡಲು ಕಾರಣವಾಗಬಹುದು. ಇದರಿಂದ ಹೃದಯಕ್ಕೆ ಹಾನಿಯಾಗುವ ಸಾಧ್ಯತೆ ಇರುತ್ತದೆ.

ತಡರಾತ್ರಿ ಊಟದಿಂದ ತೂಕ ಹೆಚ್ಚಾಗುತ್ತದೆಯೇ?

ತೂಕ ಹೆಚ್ಚಳವು ದಿನದ ಯಾವ ಸಮಯದಲ್ಲೇ ಆಗಲಿ, ನೀವು ಖರ್ಚು ಮಾಡುವ ಶಕ್ತಿಗಿಂತ ಹೆಚ್ಚು ಕ್ಯಾಲೊರಿ ಸೇವಿಸಿದಾಗ ಆಗುತ್ತದೆ. ಆದರೆ, ತಡರಾತ್ರಿ ಊಟ ಸೇವನೆ ಹೆಚ್ಚಿನ ಪರಿಣಾಮ ಬೀರುತ್ತದೆ. ಟಿವಿ ಅಥವಾ ಮೊಬೈಲ್ ನೋಡುತ್ತಾ ಮನಸ್ಸಿಲ್ಲದೆ, ಗಮನವಿಲ್ಲದೆ ಆಹಾರ ಸೇವನೆ ಮಾಡುವುದು ಪರಿಣಾಮ ಬೀರುತ್ತದೆ. ರಾತ್ರಿ ಸಮಯದಲ್ಲಿ ಶಾರೀರಿಕ ಚಟುವಟಿಕೆ ಕಡಿಮೆ ಇರುವುದರಿಂದ ಕ್ಯಾಲೊರಿ ಖರ್ಚು ಕಡಿಮೆಯಾಗುವುದು.

ತಡರಾತ್ರಿ ಊಟ ಸೇವನೆ ನಿದ್ರೆ ಮೇಲೆ ಪರಿಣಾಮ ಬೀರುತ್ತದೆಯೇ?

ನಿದ್ರೆಗೆ ಹತ್ತಿರವಾಗಿರುವ ಸಮಯದಲ್ಲಿ ಭಾರವಾದ, ಮಸಾಲೆಯುಕ್ತ ಅಥವಾ ಹೆಚ್ಚು ಸಕ್ಕರೆಯುಕ್ತ ಆಹಾರ ಸೇವಿಸುವುದು ಆಸಿಡ್ ರಿಫ್ಲಕ್ಸ್ ಅಥವಾ ರಕ್ತದಲ್ಲಿನ ಸಕ್ಕರೆಯ ಏರುಪೇರುಗಳಿಂದ ನಿದ್ರೆಯನ್ನು ಹಾನಿಗೊಳಿಸುತ್ತದೆ.

ಹಾಗಾದರೆ ತಡರಾತ್ರಿ ಹಸಿವಾದಾಗ ಏನು ಮಾಡಬೇಕು?

  • ತಡರಾತ್ರಿ ಹಸಿವಾದರೆ ಹಗುರವಾದ ಮತ್ತು ಪೋಷಕಾಂಶಗಳಿರುವ ಆಹಾರವನ್ನು ಆಯ್ಕೆ ಮಾಡಿ. ನಾರು ಪದಾರ್ಥಗಳಿರುವ ಹಣ್ಣುಗಳನ್ನು ಸೇವನೆ ಮಾಡಿ.

  • ಮಖಾನದಲ್ಲಿ ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಈ ಬೀಜಗಳನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ತಿನ್ನಬಹುದು.

  • ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಓಟ್ಸ್ ಬೆರೆಸಿ ಬಾಳೆಹಣ್ಣು, ಸೇಬು ಮತ್ತು ಬೀಜಗಳಂತಹ ತಾಜಾ ಹಣ್ಣುಗಳನ್ನು ಸೇರಿಸಿ ಸೇವಿಸಿ.

  • ಸೇಬು, ಬಾಳೆಹಣ್ಣು, ದ್ರಾಕ್ಷಿ, ಪಪ್ಪಾಯಿ ಮುಂತಾದ ಹಣ್ಣುಗಳ ಸಲಾಡ್ ಮಾಡಿ ಮತ್ತು ಅದಕ್ಕೆ ಕೆಲವು ಬೀಜಗಳನ್ನು ಸೇರಿಸಿ. ಇದು ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

  • ಹಗಲು ಅಥವಾ ರಾತ್ರಿಯ ಯಾವುದೇ ಸಮಯದಲ್ಲಿ ನಿಮಗೆ ಹಸಿವಾಗುತ್ತಿದ್ದರೆ, ಡ್ಕೈಫ್ರೂಟ್ಸ್ ತಿನ್ನಬಹುದು. ಹೀಗೆ ಮಾಡುವುದರಿಂದ, ಅತಿಯಾಗಿ ತಿನ್ನುವ ಹಂಬಲ ಕಡಿಮೆಯಾಗುತ್ತದೆ.

  • ಪ್ರತಿದಿನ ಖರ್ಜೂರ ಮತ್ತು ಕೆಲವು ಬಾದಾಮಿ ತಿನ್ನುವುದರಿಂದ ನಿಮ್ಮ ಹಸಿವು ನೀಗುತ್ತದೆ. ಖರ್ಜೂರವು ನೈಸರ್ಗಿಕ ಸಕ್ಕರೆಯಿಂದ ಸಮೃದ್ಧವಾಗಿದೆ ಮತ್ತು ಬಾದಾಮಿಯು ನಿಮಗೆ ಶಕ್ತಿಯನ್ನು ಒದಗಿಸುವ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತದೆ.

  • ನೀವು ಮಾಂಸಾಹಾರಿ ಆಹಾರ ಪ್ರಿಯರಾಗಿದ್ದರೆ, ಬೇಯಿಸಿದ ಮೊಟ್ಟೆ ಕೂಡ ಉತ್ತಮ ಆಯ್ಕೆಯಾಗಿದೆ. ಬೇಯಿಸಿದ ಮೊಟ್ಟೆ ತಿನ್ನುವುದರಿಂದ ಹಸಿವು ನೀಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com