ಯಾರಾದರೂ ನಿಮ್ಮ ಮುಂದೆ ಕುಸಿದು ಬಿದ್ರೆ; ಮೊದಲ 5 ನಿಮಿಷದಲ್ಲಿ ಮಾಡಬೇಕಾದ ಕೆಲಸಗಳೇನು ಗೊತ್ತಾ?

Health Tips: ರಸ್ತೆ, ಆಫೀಸ್‌ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಕುಸಿದು ಬಿದ್ದರೆ ನಾವು ಗಾಬರಿಯಾಗುವುದು ಸಹಜ. ಆದರೆ ಆ ಮೊದಲ 5 ನಿಮಿಷಗಳು ಜೀವ ಉಳಿಸುವಲ್ಲಿ ತುಂಬಾ ಮುಖ್ಯ. ಹಾಗಾಗಿ, ಪ್ಯಾನಿಕ್ ಆಗದೆ ಸರಿಯಾದ ಕ್ರಮ ತೆಗೆದುಕೊಂಡರೆ ಪ್ರಾಣವನ್ನ ಉಳಿಸಬಹುದು.
Health Tips
Online Desk
Updated on

Health Tips: ಸಾಮಾನ್ಯವಾಗಿ ನಡೆದುಕೊಂಡು ಹೋಗುವಾಗ ಯಾರೋ ಒಬ್ಬರು ರಸ್ತೆಯಲ್ಲಿ ಧಿಡೀರ್ ಬಿದ್ರೆ ಏನ್ ಮಾಡ್ತಿರಾ? ಕೆಲವರು ಸಹವಾಸವೇ ಬೇಡ ಎಂದು ಓಡುತ್ತಾರೆ. ಆದ್ರೆ, ಇನ್ನೂಕೆಲವರು ಮನುಷತ್ವ ತೋರಿಸಿ ಸಹಾಯಕ್ಕೆ ಮುಂದಾಗುತ್ತಾರೆ. ಆದ್ರೆ, ಈ ಸಹಾಯಕ್ಕೆ ಮುಂದಾದಾಗ ಕೆಲವೊಮ್ಮೆ ಏನು ಮಾಡಬೇಕೆಂದು ದೋಚದೆ ತಲೆ ಕೆಡಿಸಿಕೊಳ್ಳುತ್ತಾರೆ! ಅವರಿಗಾಗಿ ಉತ್ತರ ಇಲ್ಲಿದೆ:

ಹೌದು, ನಮ್ಮ ದಿನನಿತ್ಯದ ಜೀವನದಲ್ಲಿ ರಸ್ತೆಯಲ್ಲಿ, ಕಚೇರಿಯಲ್ಲಿ ಅಥವಾ ಮನೆಯಲ್ಲಿ ಯಾರಾದರೂ ಇದ್ದಕ್ಕಿದ್ದಂತೆ ಮೂರ್ಛೆ ಹೋಗಿ ಬೀಳುವುದನ್ನು ನಾವು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಭಯಪಡದೆ, ತಕ್ಷಣ ಸರಿಯಾದ ಪ್ರಥಮ ಚಿಕಿತ್ಸೆ ನೀಡುವುದು ಅತ್ಯಂತ ಮುಖ್ಯ. ಯಾಕಂದ್ರೆ, ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳು ರೋಗಿಯ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಬಹುದು. ಆದ್ದರಿಂದ ತುರ್ತು ಸಂದರ್ಭಗಳಲ್ಲಿ ಹೇಗೆ ಸ್ಪಂದಿಸಬೇಕು ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು.

Health Tips
ಹೊಟ್ಟೆ ಉಬ್ಬರ, ಗ್ಯಾಸ್, ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತಿದೆಯೇ?; ಬಿರುಬಿಸಿಲಿನ ವೇಳೆ ಈ ಆಹಾರಗಳ ತಪ್ಪಿಸುವುದೇ ಉತ್ತಮ..!

ಕುಸಿದು ಬಿದ್ದರೆ ತಕ್ಷಣ ಏನು ಮಾಡಬೇಕು?

ಯಾರಾದರೂ ಕುಸಿದು ಬಿದ್ದರೆ, ಮೊದಲಿಗೆ ಅವರನ್ನು ಸುರಕ್ಷಿತವಾಗಿ ನೆಲದ ಮೇಲೆ ಮಲಗಿಸಿ. ಈ ವೇಳೆ ಅವರ ಕಾಲುಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿಯುವುದರಿಂದ ಮೆದುಳಿಗೆ ರಕ್ತ ಸಂಚಾರ ವೇಗವಾಗಲು ಸಹಾಯವಾಗುತ್ತದೆ. ಇನ್ನೂ, ರೋಗಿಯ ಸುತ್ತ ಜನದಟ್ಟಣೆ ಉಂಟಾಗದಂತೆ ತಡೆದು, ಫ್ರೆಶ್ ಗಾಳಿ ಸಿಗುವಂತೆ ಮಾಡಿ. ಕುತ್ತಿಗೆಯ ಸುತ್ತಲಿರುವ ಬಿಗಿಯಾದ ಶರ್ಟ್ ಬಟನ್ ಅನ್ನು ರಿಮೋವ್ ಮಾಡಿ.

ಏತನ್ಮಧ್ಯೆ, ಇಂತಹ ಸಮಯದಲ್ಲಿ ಪ್ರಜ್ಞಾಹೀನ ವ್ಯಕ್ತಿಗೆ ನೀರು, ಜ್ಯೂಸ್ ಅಥವಾ ಆಹಾರ ಪದಾರ್ಥಗಳನ್ನು ನೀಡಲು ಪ್ರಯತ್ನಿಸಬೇಡಿ. ಯಾಕಂದ್ರೆ, ಕುಡಿಯಲು ಕೊಟ್ಟ ನೀರು ಶ್ವಾಸಕೋಶಕ್ಕೆ ಹೋಗಿ ಉಸಿರುಗಟ್ಟುವ ಅಪಾಯವಿರುತ್ತದೆ. ಅದರಂತೆ, ಬಿದ್ದ ವ್ಯಕ್ತಿಯು ಉಸಿರಾಡುತ್ತಿಲ್ಲ ಎಂದಾದರೆ, ತಕ್ಷಣವೇ ಸಿಪಿಆರ್ ಮಾಡಿ ಮತ್ತು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿ ವೈದ್ಯಕೀಯ ನೆರವು ಪಡೆಯಿರಿ.

Health Tips
ಮಳೆಗಾಲದಲ್ಲಿ ಚಿಕನ್ vs ಮಟನ್: ಯಾವ ಮಾಂಸ ಆರೋಗ್ಯಕ್ಕೆ ಬೆಸ್ಟ್?

ಸಿಪಿಆರ್ ಮಾಡೋದು ಹೇಗೆ?

ವ್ಯಕ್ತಿಗೆ ಪ್ರಜ್ಞೆ ಇಲ್ಲದಿದ್ದರೆ ಮತ್ತು ಅವರು ಸರಿಯಾಗಿ ಉಸಿರಾಡದಿದ್ದರೆ ತಕ್ಷಣ ಸಿಪಿಆರ್ ಆರಂಭಿಸಿ:

  • ಕೈಗಳ ಜೋಡಣೆ: ವ್ಯಕ್ತಿಯನ್ನು ಗಟ್ಟಿಯಾದ, ಸಮತಟ್ಟಾದ ನೆಲದ ಮೇಲೆ ಮಲಗಿಸಿ. ನಿಮ್ಮ ಒಂದು ಹಸ್ತವನ್ನು ಅವರ ಎದೆಯ ಮಧ್ಯಭಾಗದಲ್ಲಿ (ಸ್ತನತೊಟ್ಟುಗಳ ಮಧ್ಯೆ) ಇಡಿ. ಇನ್ನೊಂದು ಹಸ್ತವನ್ನು ಅದರ ಮೇಲಿಟ್ಟು ಬೆರಳುಗಳನ್ನು ಲಾಕ್ ಮಾಡಿ.

  • ಎದೆಯನ್ನು ಒತ್ತಿ: ನಿಮ್ಮ ಮೊಣಕೈಗಳನ್ನು ನೇರವಾಗಿಟ್ಟುಕೊಂಡು, ವ್ಯಕ್ತಿಯ ಎದೆಯನ್ನು 2 ಇಂಚುಗಳಷ್ಟು (5 ಸೆಂ.ಮೀ) ಆಳಕ್ಕೆ ವೇಗವಾಗಿ ಒತ್ತಿ.

  • ವೇಗ: ಪ್ರತಿ ನಿಮಿಷಕ್ಕೆ 100 ರಿಂದ 120 ಬಾರಿ ಎದೆಯನ್ನು ಒತ್ತಬೇಕು.

  • ಉಸಿರಾಟ ನೀಡುವುದು: ನಿಮಗೆ ತರಬೇತಿ ಇದ್ದರೆ, ಪ್ರತಿ 30 ಬಾರಿ ಎದೆ ಒತ್ತಿದ ನಂತರ 2 ಬಾರಿ ಅವರ ಬಾಯಿಗೆ ಕೃತಕ ಉಸಿರಾಟ ನೀಡಿ. ತರಬೇತಿ ಇಲ್ಲದಿದ್ದರೆ, ಆಂಬ್ಯುಲೆನ್ಸ್ ಬರುವವರೆಗೆ ಕೇವಲ ಎದೆಯನ್ನು ಒತ್ತುವುದನ್ನು (Hands-only CPR) ಮುಂದುವರಿಸಿ.

Hands-only CPR
ಸಿಪಿಆರ್ ವಿಧಾನOnline Desk

ವ್ಯಕ್ತಿಗೆ ಪ್ರಜ್ಞೆ ಇದ್ದರೆ...

ಅವರನ್ನು ಒಂದು ಕಡೆಗೆ ತಿರುಗಿಸಿ ಮಲಗಿಸಿ. ಇದನ್ನು ರಿಕವರಿ ಪೊಸಿಷನ್ ಎನ್ನುತ್ತಾರೆ. ಅಕಸ್ಮಾತ್, ವಾಂತಿ ಆದರೆ ಉಸಿರುಗಟ್ಟುವುದಿಲ್ಲ. ಹಾಗಾಗಿ, ಆಂಬ್ಯುಲೆನ್ಸ್ ಬರುವವರೆಗೆ ಕಾಯಿರಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com