ದೇಶದಲ್ಲಿ ಕನ್ನಡ ಅತಿ ಹೆಚ್ಚು ಜನರು ಮಾತನಾಡುವ 8ನೇ ಭಾಷೆ: ಸಮೀಕ್ಷೆ

ಭಾರತದಲ್ಲಿ ನಿಗದಿತ ಮತ್ತು ಅನಿಗದಿತ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಎಷ್ಟಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಭಾರತದಲ್ಲಿ ನಿಗದಿತ ಮತ್ತು ಅನಿಗದಿತ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ಎಷ್ಟಿದೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ದೇಶದಲ್ಲಿ ಕನ್ನಡ 8ನೇ ಸ್ಥಾನದಲ್ಲಿದೆ.

2001ರಿಂದ 2011ರವರೆಗೆ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆಯಲ್ಲಿ ಶೇಕಡಾವಾರು ಪ್ರಮಾಣ ಕಡಿಮೆಯಿದ್ದರೂ ಸಹ ಮಾತನಾಡುವವರ ಸಂಖ್ಯೆಯೇನೂ ಕೊರತೆಯಾಗಿಲ್ಲ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ ಇಳಿಮುಖವಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.

ಭಾಷೆ ಮಾತನಾಡುವವರ ಸಂಖ್ಯೆ ಇಳಿಮುಖವಾದದ್ದು ಆ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ, ಇದರಿಂದ ಭಾಷೆ ಮುಂದಿನ ದಿನಗಳಲ್ಲಿ ಅಳಿವಿನಂಚಿನತ್ತ ಸಾಗುವ ಲಕ್ಷಣವಿದೆ ಎಂದು ತಜ್ಞರು ಹೇಳುತ್ತಾರೆ.

ಗಣತಿ ಪ್ರಕಾರ ಭಾರತ ದೇಶದಲ್ಲಿ ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದೆ. ಶೇಕಡಾ 43.63 ಮಂದಿ ಹಿಂದಿ ಭಾಷೆ ಮಾತನಾಡುವವರಿದ್ದು ಹಿಂದಿ ಭಾಷಿಕರ ಸಂಖ್ಯೆ ಶೇಕಡಾ 3.6ರಷ್ಟು ಹೆಚ್ಚಾಗಿದೆ. 2001ರಲ್ಲಿ ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಶೇಕಡಾ 41.03ರಷ್ಟಿದ್ದರೆ 2011ಕ್ಕೆ ಶೇಕಡಾ 43.63ಕ್ಕೆ ಏರಿಕೆಯಾಗಿದೆ.

1971ರ ಸಮೀಕ್ಷೆ ಪ್ರಕಾರ, ಹಿಂದಿ ಭಾಷೆ ಮಾತನಾಡುವವರ ಸಂಖ್ಯೆ ಭಾರತದಲ್ಲಿ ಶೇಕಡಾ 36.99ರಷ್ಟಿತ್ತು. ಬೆಂಗಾಳಿ, ಮರಾಠಿ, ತೆಲುಗು, ತಮಿಳು, ಗುಜರಾತಿ ಮತ್ತು ಉರ್ದು ಮಾತನಾಡುವವರ ಸಂಖ್ಯೆ ಕನ್ನಡಕ್ಕಿಂತ ಹೆಚ್ಚಾಗಿತ್ತು. ಒಟ್ಟು ಜನಸಂಖ್ಯೆಯ ಶೇಕಡಾ 3.73ರಷ್ಟು ಜನರು ಮಾತನಾಡುತ್ತಿದ್ದರು. ಕೊಂಕಣಿ ಕರ್ನಾಟಕದ ಮತ್ತೊಂದು ಭಾಷೆಯಾಗಿದ್ದು ಅದನ್ನು ಮಾತನಾಡುವವರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ.

ಭಾರತ ದೇಶದಲ್ಲಿ ಶೇಕಡಾ 98.5ರಷ್ಟು ಮಂದಿ ನಿಗದಿತ ಭಾಷೆಗಳನ್ನು ಮಾತನಾಡುತ್ತಿದ್ದರೆ ಉಳಿದ ಗುಂಪು ಅನಿಗದಿತ ಭಾಷೆಗಳನ್ನು ಮಾತನಾಡುತ್ತಾರೆ. ಸಮೀಕ್ಷೆಯಲ್ಲಿ ತುಳು ಮತ್ತು ಕೊಡವ ಭಾಷೆ ಪ್ರಮುಖ ಅನಿಗದಿತ ಭಾಷೆಗಳಾಗಿವೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ನಿವೃತ್ತ ಭಾಷಾತಜ್ಞ ಎಂ ಬಾಲಕುಮಾರ್, ತಮ್ಮ ಸಂವಹನಕ್ಕೆ ಜನರು ಬೇರೆ ಭಾಷೆಗಳನ್ನು ಬಳಸುವುದರಿಂದ ತಮ್ಮ ಸಮುದಾಯದ ಭಾಷೆಗಳು ಕ್ಷೀಣಿಸುತ್ತಿವೆ ಎಂಬುದನ್ನು ಈ ಸಮೀಕ್ಷೆ ತೋರಿಸುತ್ತದೆ.

ಆದರೆ ಮತ್ತೊಬ್ಬ ಹೆಸರು ಹೇಳಲಿಚ್ಛಿಸದ ಭಾರತೀಯ ಭಾಷಾ ಗಣತಿಯ ಸಹಾಯಕ ರಿಜಿಸ್ಟ್ರಾರ್, ಭಾಷಾ ಬಳಕೆ ಸಂಖ್ಯೆ ಇಳಿಮುಖವಾಗುತ್ತಿದೆಯೆಂದರೆ ಅದು ಕಣ್ಮರೆಯಂಚಿನತ್ತ ಸಾಗುತ್ತಿದೆ ಎಂದರ್ಥವಲ್ಲ ಎನ್ನುತ್ತಾರೆ. ಕೊಡವರ ಸಂಖ್ಯೆ ಕಳೆದ ದಶಕದಲ್ಲಿ ಶೇಕಡಾ 71ರಷ್ಟು ಹೆಚ್ಚಳವಾಗಿದೆ ಎನ್ನುತ್ತಾರೆ ಅವರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com