ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023: ಕೊರಟಗೆರೆಯಲ್ಲಿ ಜಿ. ಪರಮೇಶ್ವರ್ ಗೆ 3 ಸಾವಿರ ಮತಗಳ ಮುನ್ನಡೆ

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪರಮೇಶ್ವರ್ ಅವರು 3 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಜಿ ಪರಮೇಶ್ವರ
ಜಿ ಪರಮೇಶ್ವರ

ತುಮಕೂರು: ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪರಮೇಶ್ವರ್ ಅವರು 3 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಚುನಾವಣಾ ಆಯೋಗ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ 16 ಸುತ್ತಿನ ಮತಎಣಿಕೆ ಪೈಕಿ ಈಗ 4 ಸುತ್ತಿನ ಮತಎಣಿಕೆ ಕಾರ್ಯ ಮುಕ್ತಾಯದ ವೇಳೆಗೆ ಪರಮೇಶ್ವರ್ ಅವರು, 13152 ಮತಗಳನ್ನು ಪಡೆದಿದ್ದು, ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ನ ಪಿಆರ್ ಸುಧಾಕರ್ ಲಾಲ್ ಅವರಿಗಂತ 3537 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆರ್ ಸುಧಾಕರ್ ಲಾಲ್ ಒಟ್ಟು 9615 ಮತಗಳನ್ನು ಪಡೆದಿದ್ದಾರೆ.

ಉಳಿದಂತೆ ಈ ಕ್ಷೇತ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷ 3ನೇ ಸ್ಥಾನಕ್ಕೆ ಕುಸಿದಿದ್ದು, ಬಿಜೆಪಿ ಅಭ್ಯರ್ಥಿ ಬಿಹೆಚ್ ಅನಿಲ್ ಕುಮಾರ್ 4511 ಮತಗಳನ್ನು ಪಡೆದಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಹನುಮಂತರಾಯಪ್ಪ 224 ಮತಗಳನ್ನು ಪಡೆದಿದ್ದಾರೆ. ಬಿಎಸ್ ಪಿ ಅಭ್ಯರ್ಥಿ ಎಸ್ ಜಿ ಮಂಜುನಾಥ್ 209 ಮತ ಮತ್ತು ಸ್ವತಂತ್ರ ಅಭ್ಯರ್ಥಿ ಮುನಿಯಪ್ಪ ಕೆಎಂ 146ಮತಗನ್ನು ಪಡೆದಿದ್ದಾರೆ. ಇಲ್ಲಿ ನೋಟಾಗೆ 142 ಮತಗಳು ಬಂದಿದ್ದು, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಗೇಂದ್ರ ಟಿಎನ್ 121 ಮತಗಳನ್ನು ಪಡೆದಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com