ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023: ಮ್ಯಾಜಿಕ್ ನಂಬರ್ ಗೂ ಅಧಿಕ ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ!

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023 ನಿರ್ಣಾಯಕ ಹಂತದಲ್ಲಿದ್ದು, ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ 113ನ್ನೂ ಮೀರಿ 117 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್
ಕಾಂಗ್ರೆಸ್
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2023 ನಿರ್ಣಾಯಕ ಹಂತದಲ್ಲಿದ್ದು, ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರ್ 113ನ್ನೂ ಮೀರಿ 117 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಇತ್ತೀಚಿನ ವರದಿಗಳು ಬಂದಾಗ 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 117ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 73 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಿಂಗ್ ಮೇಕರ್ ಕನಸು ಕಾಣುತ್ತಿರುವ ಜೆಡಿಎಸ್ 30 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 6 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷ ಚಾಮರಾಜನಗರ, ಕೊಳ್ಳೆಗಾಲ, ಧಾರವಾಡ (ವಿನಯ್ ಕುಲಕರ್ಣಿ), ಸರ್ವಜ್ಞನಗರ (ಕೆಜೆ ಜಾರ್ಜ್), ಯಮಕನಮರಡಿ (ಸತೀಶ್ ಜಾರಕಿಹೊಳಿ), ಬ್ಯಾಟರಾಯನಪುರ (ಕೃಷ್ಣ ಬೈರೇಗೌಡ), ಸೊರಬ (ಮಧು ಬಂಗಾರಪ್ಪ), ಚಿತ್ತಾಪುರ (ಪ್ರಿಯಾಂಕ್ ಖರ್ಗೆ) ಚಾಮರಾಜಪೇಟೆ (ಜಮೀರ್ ಅಹ್ಮದ್ ಖಾನ್), ದಾವಣಗೆರೆ (ಎಸ್ ಎಸ್ ಮಲ್ಲಿಕಾರ್ಜುನ್), ಅಥಣಿ (ಲಕ್ಷ್ಮಣ ಸವದಿ), ಕನಕಪುರ (ಡಿಕೆ ಶಿವಕುಮಾರ್), ಬೆಳಗಾವಿ ಗ್ರಾಮಾಂತರ (ಲಕ್ಷ್ಮೀ ಹೆಬ್ಬಾಳ್ಕರ್), ಹೊಳಲ್ಕೆರೆ (ಹೆಚ್ ಆಂಜನೇಯ), ನಾಗಮಂಗಲ (ಹೆಚ್ ಚೆಲುವರಾಯಸ್ವಾಮಿ), ಚಿಕ್ಕಬಳ್ಳಾಪುರ (ಪ್ರದೀಪ್ ಈಶ್ವರ್), ಸಾಗರ (ಬೇಳೂರು ಗೋಪಾಲಕೃಷ್ಣ) ಮತ್ತು ಸಿರಾ (ಟಿಬಿ ಜಯಚಂದ್ರ) ಸೇರಿದಂತೆ ಒಟ್ಟು 117 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಆ ಮೂಲಕ ಮ್ಯಾಜಿಕ್ ನಂಬರ್ ಗಿಂತ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ತನ್ನ ನಾಗಾಲೋಟ ಮುಂದುವರೆಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com