ಬಿಜೆಪಿಯ 'ಕೆಟ್ಟ' ಆಡಳಿತದ ವಿರುದ್ಧ ಜನರು 'ಕೋಪದಿಂದ' ನಮಗೆ ಮತ ಹಾಕಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉತ್ತಮ ಪ್ರದರ್ಶನವನ್ನು 'ಜನತಾ ಜನಾರ್ಧನ'ನ ಗೆಲುವು ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಬಿಜೆಪಿಯ 'ಕೆಟ್ಟ ಆಡಳಿತ'ದ ವಿರುದ್ಧ ಜನರು 'ಉಗ್ರವಾಗಿ' ಮತ ಚಲಾಯಿಸಿದ್ದಾರೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ
Updated on

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಉತ್ತಮ ಪ್ರದರ್ಶನವನ್ನು 'ಜನತಾ ಜನಾರ್ಧನ'ನ ಗೆಲುವು ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯದಲ್ಲಿ ಬಿಜೆಪಿಯ 'ಕೆಟ್ಟ ಆಡಳಿತ'ದ ವಿರುದ್ಧ ಜನರು 'ಉಗ್ರವಾಗಿ' ಮತ ಚಲಾಯಿಸಿದ್ದಾರೆ ಎಂದು ಹೇಳಿದರು.

ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ಕಾಂಗ್ರೆಸ್ ಶಾಸಕರು ಇಂದು ಸಂಜೆಯೊಳಗೆ ಬೆಂಗಳೂರಿಗೆ ಆಗಮಿಸುವಂತೆ ತಿಳಿಸಲಾಗಿದ್ದು, ಸರ್ಕಾರ ರಚನೆಯ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂದರು.

'ನಾವು ಎಲ್ಲರಿಗೂ (ಹೊಸದಾಗಿ ಆಯ್ಕೆಯಾದ ವ್ಯಕ್ತಿಗಳು) ಇಂದು ಸಂಜೆಯೊಳಗೆ ಬನ್ನಿ ಎಂದು ಸಂದೇಶವನ್ನು ಕಳುಹಿಸಿದ್ದೇವೆ. ಅವರೆಲ್ಲರೂ ಇಂದು ಸಂಜೆಯೊಳಗೆ ಇಲ್ಲಿಗೆ ಬರುತ್ತಾರೆ ಮತ್ತು ಅವರು ಬಂದ ನಂತರ ಅವರಿಗೆ ಸರಿಯಾದ ಸಮಯದಲ್ಲಿ ಸೂಚನೆ ನೀಡಲಾಗುವುದು. ಅದರ ನಂತರ, ಹೈಕಮಾಂಡ್ ವೀಕ್ಷಕರನ್ನು ಕಳುಹಿಸುತ್ತದೆ. ನಂತರ ಸರ್ಕಾರ ರಚನೆಗೆ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್‌ನ ಉತ್ತಮ ಪ್ರದರ್ಶನವು 'ಜನತಾ ಜನಾರ್ಧನ' ವಿಜಯವಾಗಿದೆ. ಜನರೇ ಎದ್ದು ನಿಂತು ನಮ್ಮನ್ನು ಬೆಂಬಲಿಸಿದ್ದಾರೆ, ಕೆಟ್ಟ ಆಡಳಿತದ ವಿರುದ್ಧ ಉಗ್ರವಾಗಿ ಮತ ಹಾಕಿದ್ದಾರೆ. ಇದು ಕರ್ನಾಟಕದ ಮತದಾರರು ಎಚ್ಚೆತ್ತಿರುವುದನ್ನು ತೋರಿಸುತ್ತದೆ ಎಂದರು.

ರಾಜ್ಯದಲ್ಲಿ ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯ ಮತ ಎಣಿಕೆಯನ್ನು ಶನಿವಾರ ಕೈಗೆತ್ತಿಕೊಳ್ಳಲಾಯಿತು.

ಪ್ರಧಾನಿ (ನರೇಂದ್ರ ಮೋದಿ), ಗೃಹ ಸಚಿವರು (ಅಮಿತ್ ಶಾ), ಹತ್ತಾರು ಸಚಿವರು, ಇತರ ರಾಜ್ಯಗಳ ಮುಖ್ಯಮಂತ್ರಿಗಳು ಇಲ್ಲಿ ಮೊಕ್ಕಾಂ ಹೂಡಿದ್ದರೂ, ಜನಬಲ, ಹಣ ಮತ್ತು ತೋಳ್ಬಲದ ಬಳಕೆಯ ಹೊರತಾಗಿಯೂ, ಜನರು ಒಗ್ಗಟ್ಟಿನಿಂದ ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಅವರು ಹೇಳಿದರು.

ಗೆದ್ದವರನ್ನು ಅಭಿನಂದಿಸಿದ ಎಐಸಿಸಿ ಅಧ್ಯಕ್ಷರು, ಒಳ್ಳೆಯ ಕೆಲಸಕ್ಕೆ ಜನ ಬೆಂಬಲ ನೀಡುತ್ತಾರೆ; ಗೆದ್ದರೂ ಸೋತರೂ ಅವರ ಮಧ್ಯೆಯೇ ಇದ್ದು ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡಬೇಕು. ಕಾಂಗ್ರೆಸ್‌ನ ಸಂಪೂರ್ಣ ರಾಜ್ಯ ನಾಯಕತ್ವ ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಶ್ಲಾಘಿಸಿದ ಅವರು, 'ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರಿಂದ ನಮಗೆ ಈ ಫಲಿತಾಂಶ ಬಂದಿದೆ. ಜನರು ಸಹ ಇದಕ್ಕೆ ಸ್ಪಂದಿಸಿದ್ದಾರೆ, ಬಡವರು ಮತ್ತು ದೀನದಲಿತರು ನಮಗಾಗಿ ಮತ ಚಲಾಯಿಸಿದ್ದರಿಂದ ನಮ್ಮ ಭರವಸೆಗಳು ಕೆಲಸ ಮಾಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com