ಜಾರಿ ಬಿದ್ದ ಜಾಣರು: ಮಕಾಡೆ ಮಲಗಿದ ಬೊಮ್ಮಾಯಿ ಸಂಪುಟದ ಘಟಾನುಘಟಿ ಸಚಿವರು!
ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು ,ಸ್ಪಷ್ಟ ಬಹುಮತ ಪಡೆದು ಮುನ್ನುಗ್ಗುತ್ತಿದೆ.
Published: 13th May 2023 02:11 PM | Last Updated: 13th May 2023 07:25 PM | A+A A-

ಸೋತ ಪ್ರಮುಖ ಸಚಿವರು
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ನಡೆದಿದ್ದು, ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು ,ಸ್ಪಷ್ಟ ಬಹುಮತ ಪಡೆದು ಮುನ್ನುಗ್ಗುತ್ತಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಕಂಡಿದ್ದಾರೆ. ಬಿಜೆಪಿಯ ನೇತೃತ್ವದಲ್ಲಿದ್ದ ಸರ್ಕಾರದ ವಿರುದ್ಧ ಜನರಿಗೆ ಅಸಮಾಧಾನ ಇದ್ದದ್ದು ಈ ರೀತಿ ಬಯಲಾಗಿದೆ.
ಸಚಿವರಾಗಿ ಅವರ ಕಾರ್ಯವೈಖರಿ ಬಗ್ಗೆ ಕೂಡ ಅಸಮಾಧಾನ ಇದ್ದಂತೆ ಈ ಫಲಿತಾಂಶವನ್ನು ವ್ಯಾಖ್ಯಾನಿಸಬಹುದು. 2018ರ ವಿಧಾನಭಾ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ಸೋತಿದ್ದರು. ಇದೀಗ ಬೊಮ್ಮಾಯಿ ಸಂಪುಟದ ಸಚಿವರಿಗೂ ಇದೇ ಪರಿಸ್ಥಿತಿ ಬಂದಿದೆ. ಆಡಳಿತ ವಿರೋದಿಅಲೆ ಇಲ್ಲಿ ಪ್ರಮುಖವಾಗಿ ಕೆಲಸ ಮಾಡಿದೆ.
ಸೋತ ಪ್ರಮುಖ ಸಚಿವರು
ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆರೋಗ್ಯ ಸಚಿವ ಡಾ. ಕೆ ಸುಧಾರಕ್ ಕಾಂಗ್ರೆಸ್ ನ ಪ್ರದೀಪ್ ಈಶ್ವರ್ ವಿರುದ್ಧ ಸೋಲನುಭವಿಸಿದ್ದಾರೆ.
ಬಳ್ಳಾರಿ ಗ್ರಾಮಾಂತರದಿಂದ ಸ್ಪರ್ಧಿಸಿದ್ದ ಸಾರಿಗೆ ಸಚಿವ ಶ್ರೀರಾಮುಲು ಕೂಡ ಪರಾಭವಗೊಂಡಿದ್ದಾರೆ.
ಕೆಆರ್ ಪೇಟೆ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಕ್ರೀಡಾ ಸಚಿವ ನಾರಾಯಣಗೌಡ ಕೂಡ ಸೋತಿದ್ದಾರೆ, ಗೋವಿಂದ್ ಕಾರಜೋಳ- ಮುಧೋಳ್ ವಿ. ಸೋಮಣ್ಣ- ಚಾಮರಾಜನಗರ, ವರುಣಾ, ಮುರುಗೇಶ್ ನಿರಾಣಿ- ಬೀಳಗಿ, ಜೆಸಿ ಮಾಧುಸ್ವಾಮಿ-ಚಿಕ್ಕನಾಯಕನಹಳ್ಳಿ, ಕನಕಪುರದಿಂದ ಡಿ.ಕೆ ಶಿವಕುಮಾರ್ ವಿರುದ್ಧ ಸ್ಪರ್ಧಿಸಿದ್ದ ಕಂದಾಯ ಸಚಿವ ಆರ್. ಅಶೋಕ್ ಸೋಲನುಭವಿಸಿದ್ದಾರೆ. ಇದರ ಜೊತೆಗೆ ಹಾಲಿ ಸಚಿವ ಎಂಟಿಬಿ ನಾಗರಾಜ್ ಕೂಡ ಹೊಸಪೇಟೆಯಲ್ಲಿ ಸೋಲನುಭವಿಸಿದರು.