ಕಾಂಗ್ರೆಸ್‌ನ '40 ಪರ್ಸೆಂಟ್ ಸರ್ಕಾರ' ಘೋಷಣೆಯನ್ನು ಜನರು ಒಪ್ಪಿಕೊಂಡಿದ್ದಾರೆ: ಸಚಿನ್ ಪೈಲಟ್
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಎಲ್ಲೆಡೆ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್, ಸರಳ ಬಹುಮತದತ್ತ ಸಾಗುತ್ತಿದೆ.
Published: 13th May 2023 11:36 AM | Last Updated: 13th May 2023 11:36 AM | A+A A-

ಸಚಿನ್ ಪೈಲಟ್
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಎಲ್ಲೆಡೆ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್, ಸರಳ ಬಹುಮತದತ್ತ ಸಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, 'ಕಾಂಗ್ರೆಸ್‌ಗೆ ಬಹುಮತವಿದೆ, ನಾವು ಭರ್ಜರಿ ಗೆಲುವು ಸಾಧಿಸುತ್ತೇವೆ. ನಾವು ನೀಡಿದ '40% ಕಮಿಷನ್ ಸರ್ಕಾರ' ಎಂಬ ಘೋಷಣೆಯನ್ನು ಸಾರ್ವಜನಿಕರು ಒಪ್ಪಿಕೊಂಡಿದ್ದಾರೆ' ಎಂದು ಹೇಳಿದರು.
#WATCH | #KarnatakaElectionResults | Congress leader Sachin Pilot says, "Congress has the majority. We will have a thumping victory. The slogan of "40% commission government" given by us, was accepted by the public. It was a major issue raised by us to defeat BJP. People accepted… pic.twitter.com/qg8gfkSSWD
— ANI (@ANI) May 13, 2023
ಇದು ಬಿಜೆಪಿಯನ್ನು ಸೋಲಿಸಲು ನಾವು ಎತ್ತಿದ ಪ್ರಮುಖ ವಿಷಯವಾಗಿದೆ. ಜನರು ಅದನ್ನು ಒಪ್ಪಿಕೊಂಡು ಕಾಂಗ್ರೆಸ್‌ಗೆ ಬಹುಮತ ನೀಡಿದ್ದಾರೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.
#KaranatakaElectionResults | Trends of all the 224 Assembly constituencies declared; Congress surges ahead in 119 seats, BJP in 72 seats and JDS in 25 seats. pic.twitter.com/AJ7K6b2IIF
— ANI (@ANI) May 13, 2023
ರಾಜ್ಯದಲ್ಲಿ ಸದ್ಯದ ಟ್ರೆಂಡ್ ಪ್ರಕಾರ, 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 119 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 72 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಜೆಡಿಎಸ್ 25 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
#WATCH | It is certain that Congress will form the government in Karnataka. BJP will attempt to strike a deal with MLAs of other parties and independent candidates: Congress leader & former MP CM Kamal Nath pic.twitter.com/AH4BmGCWEB
— ANI (@ANI) May 13, 2023
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತ. ಆದರೆ, ಬಿಜೆಪಿ ಇತರ ಪಕ್ಷಗಳ ಶಾಸಕರು ಮತ್ತು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದ ಸಿಎಂ ಕಮಲ್ ನಾಥ್ ಹೇಳಿದ್ದಾರೆ.