ಮೋದಿ ಬಂದು ಪ್ರಚಾರ ಮಾಡಿದರೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ: ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಸಮೀಕ್ಷೆ, ಮತದಾನವಾದ ನಂತರ ಮತಗಟ್ಟೆ ಸಮೀಕ್ಷೆಗಳು ಒಂದೆಡೆಯಾದರೆ ಜ್ಯೋತಿಷಿಗಳು ಮಾಧ್ಯಮಗಳಲ್ಲಿ ರಾಜಕೀಯ ನಾಯಕರ, ಪಕ್ಷಗಳ ಭವಿಷ್ಯ ಹೇಳುವುದು ಇತ್ತೀಚಿನ ವರ್ಷಗಳಲ್ಲಿ ಯಥೇಚ್ಛವಾಗಿದೆ.
Published: 13th May 2023 05:04 PM | Last Updated: 13th May 2023 07:18 PM | A+A A-

ಪಿಎಂ ನರೇಂದ್ರ ಮೋದಿ
ಬಳ್ಳಾರಿ/ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಸಮೀಕ್ಷೆ, ಮತದಾನವಾದ ನಂತರ ಮತಗಟ್ಟೆ ಸಮೀಕ್ಷೆಗಳು ಒಂದೆಡೆಯಾದರೆ ಜ್ಯೋತಿಷಿಗಳು ಮಾಧ್ಯಮಗಳಲ್ಲಿ ರಾಜಕೀಯ ನಾಯಕರ, ಪಕ್ಷಗಳ ಭವಿಷ್ಯ ಹೇಳುವುದು ಇತ್ತೀಚಿನ ವರ್ಷಗಳಲ್ಲಿ ಯಥೇಚ್ಛವಾಗಿದೆ.
ಯಾವ ಪಕ್ಷ ಅಧಿಕಾರಕ್ಕೆ ಬರುತ್ತಾರೆ, ಯಾರು ಮುಖ್ಯಮಂತ್ರಿಗಳಾಗುತ್ತಾರೆ, ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಇತ್ಯಾದಿಗಳನ್ನು ಜ್ಯೋತಿಷಿಗಳ ಬಳಿ ಕೇಳಿ ಆ ಬಗ್ಗೆ ಚರ್ಚೆ, ವಿಮರ್ಶೆಗಳು ಫಲಿತಾಂಶ ಪ್ರಕಟವಾಗುವವರೆಗೆ ನಡೆಯುತ್ತಲೇ ಇರುತ್ತವೆ.
ಈ ಬಾರಿ ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದು ರೋಡ್ ಶೋ ಮಾಡಿದರೆ, ಪ್ರಚಾರ ನಡೆಸಿದರೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದು ಜ್ಯೋತಿಷಿಯೊಬ್ಬರು ಹೇಳಿರುವುದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಅವರು ಏನು ಹೇಳಿದ್ದಾರೆ ಕೇಳಿ:
#KarnatakaElectionResults Astrologer gets trolled on social media after #Karnataka election results goes against his predictions #WATCH pic.twitter.com/qvZmZxxeMZ
— Amit Upadhye (@Amitsen_TNIE) May 13, 2023