ಶ್ರೀರಾಮಮೂರ್ತಿ (37) ಥಳಿತಕ್ಕೊಳಗಾದ ಸಾಫ್ಟ್ ವೇರ್ ಇಂಜಿನಿಯರ್. ಬಸವೇಶ್ವರನಗರ ಸಮೀಪದ ಪಶ್ಚಿಮ ಕಾರ್ಡ್ ರಸ್ತೆ ಬಳಿ ಬೆಳಿಗ್ಗೆ ಸುಮಾರು 9.30ರ ವೇಳೆಗೆ ಗಾರ್ಮೆಂಟ್ ಉದ್ಯೋಗಿ ಗಾಯನಾ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆಕೆಯನ್ನು ಶ್ರೀರಾಮಮೂರ್ತಿ ಹಿಂಬಾಲಿಸಿಕೊಂಡು ಬಂದು, ಮಾರ್ಗ ಮಧ್ಯ ತಡೆದು ಅಸಭ್ಯವಾಗಿ ವರ್ತಿಸಿದ್ದಾನೆ.