ಸಚಿವ ಸ್ಥಾನಕ್ಕೆ ನಾನ್ಯಾಕೆ ರಾಜಿನಾಮೆ ನೀಡಲಿ?: ಶರಣ ಪ್ರಕಾಶ ಪಾಟೀಲ

ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ರಾಜಿನಾಮೆ...
ಶರಣ ಪ್ರಕಾಶ ಪಾಟೀಲ
ಶರಣ ಪ್ರಕಾಶ ಪಾಟೀಲ
ಬೆಂಗಳೂರು: ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ರಾಜಿನಾಮೆ ನೀಡಬೇಕು ಎಂಬ ವಿರೋಧ ಪಕ್ಷಗಳ ಒತ್ತಾಯವನ್ನು ತಿರಸ್ಕರಿಸಿದ ಶರಣ ಪ್ರಕಾಶ ಪಾಟೀಲ, ನಾನು ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. 
ಪಿಯುಸಿ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ಪೊಲೀಸರು ಸೋಮವಾರ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ವಿಶೇಷ ಅಧಿಕಾರಿ ಓಬಳರಾಜು ಅವರನ್ನು ಬಂಧಿಸಿದ್ದರು. ಈ ಹಿನ್ನಲೆಯಲ್ಲಿ ವಿರೋಧ ಪಕ್ಷಗಳು ಸಚಿವ ಶರಣ ಪ್ರಕಾಸ ಪಾಟೀಲ ರಾಜಿನಾಮೆಗೆ ಒತ್ತಾಯಿಸಿದ್ದಾರೆ. 
ಇದಕ್ಕೆ ಪ್ರತಿಕ್ರಯಿಸಿರುವ ಶರಣ ಪ್ರಕಾಶ ಪಾಟೀಲ, ನಾನು ಏಕೆ ರಾಜಿನಾಮೆ ನೀಡಬೇಕು? ಈ ಹಗರಣದಲ್ಲಿ ನನ್ನ ಪಾತ್ರವಿಲ್ಲ, ಹಾಗಾಗಿ, ನಾನ್ಯಾಕೆ ರಾಜಿನಾಮೆ ನೀಡಲಿ? ಎಂದ ಅವರು, ನಾನು ಸಿಐಡಿ ತನಿಖೆ ಸಹಕರಿಸುವೆ. ನಾನು ತಪ್ಪಿತಸ್ಥರಿಗೆ ಸಹಾಯ ಮಾಡುವ ವ್ಯಕ್ತಿಯಲ್ಲ. ನನ್ನ ಕಚೇರಿಯಲ್ಲಿ ತುಂಬಾ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಲ್ಲಿ ಯಾರ್ಯಾದರೂ ತಪ್ಪು ಮಾಡಿದರೆ ಅದಕ್ಕೆ ನಾನ್ಯಾಕೆ ಹೊಣೆಯಾಗಬೇಕು. ಅದು ಅವರ ವೈಯಕ್ತಿಕ ಜೀವನವಾಗಿರುತ್ತದೆ ಎಂದು ಅವರು ಸಮರ್ಥನೆ ನೀಡಿದ್ದಾರೆ. 
ಮಾಜಿ ಸಚಿವ ಸಿಎಂ ಉದಾಸಿ ಅವರ ಶಿಫಾರಸು ಆಧರಿಸಿ ಮೈಸೂರಿನ ಓಬಳರಾಜು ಬೇರೆ ಇಲಾಖೆಯಿಂದ ನನ್ನ ಕಚೇರಿಗೆ ಸೇರಿಕೊಂಡರು. ಓಬಳರಾಜು ನನ್ನ ಕಚೇರಿಯಲ್ಲಿ ಶಾಸನಸಭೆಯ ಕೆಲಸಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎಂದ ಅವರು, ಮಾಧ್ಯಮಗಳ ಮುಖಾಂತರ ಓಬಳ ರಾಜು ಬಂಧನವಾಗಿರುವ ವಿಷಯ ತಿಳಿದಿದೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com