ಎಚ್ ಡಿ ಕೋಟೆ: ಅಕ್ರಮ ಮದ್ಯ ಸೇವಿಸಿ ಇಬ್ಬರು ಆದಿವಾಸಿಗಳು ಮೃತಪಟ್ಟಿರುವ ಘಟನೆ ಎಚ್ ಡಿ ಕೋಟೆ ತಾಲ್ಲೂಕಿನಲ್ಲಿ ಬುಧವಾರ ನಡೆದಿದೆ.
ಎಚ್ ಡಿ ಕೋಟೆ ತಾಲ್ಲೂಕಿನ ಮಾಸ್ತಿ(50) ಮತ್ತು ಕೆಂಚ(55) ಮೃತಪಟ್ಟ ಆದಿವಾಸಿಗಳು. ಇತ್ತೀಚೆಗೆ ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಮದ್ಯ ಸೇವಿಸಿ ಅನೇಕರು ಮೃಪಪಡುತ್ತಿದ್ದಾರೆ ಎಂದು ಅಲ್ಲಿನ ಆದಿವಾಸಿಗಳು ಆರೋಪಿಸಿದ್ದಾರೆ.
ಕೆಂಚ ಮತ್ತು ಮಾಸ್ತಿ ಇಬ್ಬರು ಪ್ರತಿನಿತ್ಯ ಹೆಚ್ಚಾಗಿ ಮದ್ಯ ಸೇವಿಸುತ್ತಿದ್ದರು. ವಿಪರೀತವಾಗಿ ಮದ್ಯ ಸೇವಿಸಿದ ಹಿನ್ನಲೆಯಲ್ಲಿ ಇಬ್ಬರು ಬುಧವಾರ ಮೃತಪಟ್ಟಿದ್ದಾರೆ ಎಂದು ಸ್ಥಳಿಯರು ಹೇಳಿದ್ದಾರೆ.
ಬುಡಕಟ್ಟು ಜನಾಂಗ ನೆಲೆಸುವ ಈ ಸ್ಥಳದಲ್ಲಿ ಅನೇಕರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಾರೆ. ಸಣ್ಣ ಪುಟ್ಟ ಅಂಗಡಿಗಳಲ್ಲಿ ಮತ್ತು ಮನೆಗಳಲ್ಲಿ ಮದ್ಯಗಳ ಮಾರಾಟ ಮಾಡಲಾಗುತ್ತದೆ ಎಂದು ಬುಡಕಟ್ಟು ಜನಾಂಗದ ಅಧಿಕಾರಿ ರಮೇಶ್ ತಿಳಿಸಿದ್ದಾರೆ.