ಮಾನ್ಯತೆ ಇಲ್ಲದ ಶಾಲೆಗಳನ್ನು ಮುಚ್ಚಿ: ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಅರ್ಜಿ

ಮಾನ್ಯತೆ ಪಡೆಯದ ಶಾಲೆಯಲ್ಲಿ ಓದುತ್ತಿದ್ದ 52 ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆಯಿಂದ ವಂಚಿತರಾದ ಪ್ರಕರಣದ ಬಗ್ಗೆ ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗ ವಿಚಾರಣೆ ನಡೆಸಿದೆ.
ಮಾನ್ಯತೆ ಇಲ್ಲದ ಶಾಲೆಗಳನ್ನು ಮುಚ್ಚಿ: ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಅರ್ಜಿ
ಮಾನ್ಯತೆ ಇಲ್ಲದ ಶಾಲೆಗಳನ್ನು ಮುಚ್ಚಿ: ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ಅರ್ಜಿ

ಬೆಂಗಳೂರು: ಮಾನ್ಯತೆ ಪಡೆಯದ ಶಾಲೆಯಲ್ಲಿ ಓದುತ್ತಿದ್ದ 52 ವಿದ್ಯಾರ್ಥಿಗಳು 10 ನೇ ತರಗತಿ (ಎಸ್ಎಸ್ ಎಲ್ ಸಿ) ಪರೀಕ್ಷೆಯಿಂದ ವಂಚಿತರಾದ ಪ್ರಕರಣದ ಬಗ್ಗೆ ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗ ವಿಚಾರಣೆ ನಡೆಸಿದೆ.
ಬೆಂಗಳೂರಿನ ಸಾರಾಯಿ ಪಾಳ್ಯದಲ್ಲಿರುವ ಮಾನ್ಯತೆ ಪಡೆಯದ ಸ್ವಾಮಿ ವಿವೇಕಾನಂದ ಶಾಲೆಯ 30 ವಿದ್ಯಾರ್ಥಿಗಳು ಹಾಗೂ ಹಾವೇರಿಯ ಖಾಸಗಿ ಶಾಲೆಯ 22 ವಿದ್ಯಾರ್ಥಿಗಳು ಎಸ್ ಎಸ್ಎಲ್ ಸಿ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗಕ್ಕೆ ನಾರಾಯಣ ಸ್ವಾಮಿ ಎಂಬುವವರು ಅರ್ಜಿ ಸಲ್ಲಿಸಿ ಪ್ರತಿ ವಿದ್ಯಾರ್ಥಿಗೆ 2 ಲಕ್ಷ ಪರಿಹಾರ ನೀಡಬೇಕು ಹಾಗೂ ಮಾನ್ಯತೆ ಇಲ್ಲದ ಶಾಲೆಗಳನ್ನು ಮುಚ್ಚಲು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ಆಯೋಗ, ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕ ಮತ್ತು ಬ್ಲಾಕ್ ಶಿಕ್ಷಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ. ಆದರೆ ಪರಿಹಾರ ನೀಡುವುದರ ಬಗ್ಗೆ ಯಾವುದೇ ಆದೇಶ ಹೊರಡಿಸಿಲ್ಲ. ವಿದ್ಯಾರ್ಥಿಗಳು ಓದುತ್ತಿದ್ದ ಶಾಲೆಗಳು ಸರ್ಕಾರದಿಂದ ಮಾನ್ಯತೆ ಪಡೆಯದೇ ಇದ್ದ ಪರಿಣಾಮ ಒಟ್ಟು 52 ವಿದ್ಯಾರ್ಥಿಗಳು 10 ನೇ ತರಗತಿ ಪರೀಕ್ಷೆ ಬರೆಯುವುದರಿಂದ ವಂಚಿತರಾಗಿದ್ದರು. ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ಅವಕಾಶ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com