ಧರ್ಮಸ್ಥಳ ದೇವಾಲಯದಿಂದ ಬರಪೀಡಿತ ಪ್ರದೇಶಗಳಿಗೆ 1 ಕೋಟಿ ನೆರವು

ಉಷ್ಣಾಂಶ ಏರಿಕೆಯಿಂದ ಇಡೀ ಕರ್ನಾಟಕ ತತ್ತರಿಸಿ ಹೋಗಿದ್ದು, ಬರಪೀಡಿತ ಪ್ರದೇಶಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯ ವತಿಯಿಂದ 1 ಕೋಟಿ ರುಪಾಯಿ ನೆರವು...
ಧರ್ಮಸ್ಥಳ
ಧರ್ಮಸ್ಥಳ

ಧರ್ಮಸ್ಥಳ: ಉಷ್ಣಾಂಶ ಏರಿಕೆಯಿಂದ ಇಡೀ ಕರ್ನಾಟಕ ತತ್ತರಿಸಿ ಹೋಗಿದ್ದು, ಬರಪೀಡಿತ ಪ್ರದೇಶಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳ ದೇವಾಲಯ ವತಿಯಿಂದ 1 ಕೋಟಿ ರುಪಾಯಿ ನೆರವು ಘೋಷಿಸಲಾಗಿದೆ.

ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಅವರು ಬರಪೀಡಿತ ಪ್ರದೇಶಗಳಿಗೆ 1 ಕೋಟಿ ನೆರವು ಘೋಷಿಸಿದ್ದು, ಬರಪೀಡಿತ ಪ್ರದೇಶಗಳಲ್ಲಿ ನೀರು ಪೂರೈಕೆಗೆ 50 ಲಕ್ಷ ಹಾಗೂ ಜಾನುವಾರುಗಳ ಮೇವಿಗೆ 50 ಲಕ್ಷ ರುಪಾಯಿ ಆರ್ಥಿಕ ನೆರವನ್ನು ಘೋಷಿಸಿದ್ದಾರೆ.

ಇದೇ ಮೊದಲ ಬಾರಿಗೆ ರಾಜ್ಯ ಬಿಸಿಲ ಬೇಗೆಗೆ ಅಕ್ಷರಷ ತತ್ತರಿಸಿ ಹೋಗಿದೆ. ಕೆರೆ ಕಾಲುವೆಗಳು ಬತ್ತಿ ಹೋಗಿದ್ದು, ಜನ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ಮಳೆಯಾಗದ ಹಿನ್ನೆಲೆಯಲ್ಲಿ ಕುಡಿಯಲು ನೀರು, ಮೇವು ಸಿಗದೆ ಜಾನುವಾರುಗಳು ಸಾಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com