ಬೆಳಗಾವಿ: ಬರಪೀಡಿತ ಗ್ರಾಮಗಳಿಗೆ ನೀರು ಪೂರೈಕೆಯಿಂದ ಒಳ್ಳೆಯ ಆದಾಯ

ಜಿಲ್ಲೆಯ ಕೆಲವು ಬರಗಾಲಪೀಡಿತ ಗ್ರಾಮಗಳಲ್ಲಿ 'ಕುಡಿಯುವ ನೀರು ಪ್ಯಾಕೆಜ್' ಜಾರಿಗೆ ತಂದಿರುವುದು ನೀರು ಪೂರೈಕೆ ಮಾಡುತ್ತಿರುವ...
ಬೆಳಗಾವಿ ತಾಲ್ಲೂಕಿನ ತರಿಹಾಲ್ ಗ್ರಾಮದಲ್ಲಿ ಟ್ಯಾಂಕರ್ ನೀರಿಗಾಗಿ ಸರದಿಯಲ್ಲಿ ನಿಂತಿರುವ ಜನತೆ
ಬೆಳಗಾವಿ ತಾಲ್ಲೂಕಿನ ತರಿಹಾಲ್ ಗ್ರಾಮದಲ್ಲಿ ಟ್ಯಾಂಕರ್ ನೀರಿಗಾಗಿ ಸರದಿಯಲ್ಲಿ ನಿಂತಿರುವ ಜನತೆ
Updated on

ಬೆಳಗಾವಿ: ಜಿಲ್ಲೆಯ ಕೆಲವು ಬರಗಾಲಪೀಡಿತ ಗ್ರಾಮಗಳಲ್ಲಿ 'ಕುಡಿಯುವ ನೀರು ಪ್ಯಾಕೆಜ್' ಜಾರಿಗೆ ತಂದಿರುವುದು ನೀರು ಪೂರೈಕೆ ಮಾಡುತ್ತಿರುವ ವ್ಯಕ್ತಿಗಳಿಗೆ ಉತ್ತಮ ಆದಾಯ ತರುತ್ತಿದೆ.

ಜಿಲ್ಲೆಯ ಕೆಲವು ಗ್ರಾಮಗಳಲ್ಲಂತೂ ಕುಡಿಯುವ ನೀರಿಗೂ ಬರಗಾಲ ಉಂಟಾಗಿರುವುದು ಜನರನ್ನು ಚಿಂತೆಗೀಡು ಮಾಡಿದೆ. ದಿನನಿತ್ಯ ಆಧಾರದಲ್ಲಿ ನೀರನ್ನು ಖರೀದಿಸಲು ಗ್ರಾಮಸ್ಥರು ನೆರೆಹೊರೆಯವರನ್ನು ಅವಲಂಬಿಸಿದ್ದಾರೆ. ನೀರು ಪೂರೈಕೆದಾರರನ್ನು ಪ್ರತಿನಿತ್ಯ ಗ್ರಾಮಸ್ಥರು ಅವಲಂಬಿಸಿರುವುದರಿಂದ ನೀರಿನ ವ್ಯಾಪಾರಿಗಳು ತಿಂಗಳ ಪ್ಯಾಕೇಜ್ ನ್ನು ಜಾರಿಗೆ ತಂದಿದ್ದಾರೆ.

ಇಲ್ಲಿನ ಪ್ರಭಾನಗರದ ಯಲ್ಲಪ್ಪ(ಹೆಸರು ಬದಲಾಯಿಸಲಾಗಿದೆ) ಎಂಬ ವ್ಯಾಪಾರಿ ಹೇಳುವ ಪ್ರಕಾರ, ನೀರಿನ ಪ್ಯಾಕೇಜ್ ಅಗ್ಗವಾಗಿದ್ದು, ಬೋರ್ ವೆಲ್, ಪಂಪ್ ಮತ್ತು ವಿದ್ಯುತ್ ಪೂರೈಕೆಯ ನಿರ್ವಹಣಾ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತದೆ. ಪ್ರತಿದಿನ 15 ಮಡಕೆ ನೀರು ಪೂರೈಸಲು ತಾವು ತಿಂಗಳಿಗೆ 150 ರೂಪಾಯಿ ನಿಗದಿಪಡಿಸುವುದಾಗಿ ಅವರು ಹೇಳಿದ್ದಾರೆ. ಜನರಿಗೆ ನೀರಿನ ಅವಶ್ಯಕತೆ ಹೆಚ್ಚು ಬೇಕಾದಲ್ಲಿ ದರ ಕೂಡ ಹೆಚ್ಚಾಗುತ್ತದೆ ಎಂದರು.

ಹಾವಲ್  ನಗರದ ನಿವಾಸಿ ರೇಣುಕಾ ಮದಲಿ, ತಾವು ಪಕ್ಕದವರಿಂದ ತಿಂಗಳಿಗೆ 150 ರೂಪಾಯಿ ಕೊಟ್ಟು ನೀರು ಖರೀದಿಸುತ್ತೇನೆ. ತಾವು ಬಡಕುಟುಂಬದವರಾಗಿದ್ದು, ಟ್ಯಾಂಕರ್ ನೀರನ್ನು ಹಣ ಕೊಟ್ಟು ಖರೀದಿಸುವಷ್ಟು ಹಣವಿಲ್ಲ. ಸರ್ಕಾರ ಟ್ಯಾಂಕರ್ ಮೂಲಕ ಪೂರೈಕೆ ಮಾಡುವ ನೀರು ಸಾಕಾಗುವುದಿಲ್ಲ ಎನ್ನುತ್ತಾರೆ.

ಭಾಗ್ಯಲಕ್ಷ್ಮಿ ಸೊಸೈಟಿ ಖಾನಾಪುರದಲ್ಲಿ ಶುದ್ಧೀಕರಿಸಿದ ನೀರನ್ನು ಮಾರಾಟ ಮಾಡುವ ಕೌಂಟರ್ ನ್ನು ತೆರೆದಿದೆ. ಇಲ್ಲಿ ಶುದ್ಧೀಕರಿಸಿದ 20 ಲೀಟರ್ ನ ನೀರನ್ನು 10 ರೂಪಾಯಿಗೆ ಒದಗಿಸುತ್ತಾರೆ. ಸುತ್ತಮುತ್ತಲಿನ ಬಹುಪಾಲು ಜನರು ಇದೇ ನೀರನ್ನು ಆಶ್ರಯಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com