ಏರುತ್ತಿರುವ ತಾಪಮಾನದಿಂದ ಬಿರುಸುಗೊಂಡ ವ್ಯಾಪಾರ

ಬಿಸಿಲ ಬೇಗೆಯಿಂದ ಜನರು ಹಣ್ಣು, ಜ್ಯೂಸ್, ಕೋಲ್ಡ್ ಡ್ರಿಂಕ್ಸ್ , ಎಳನೀರಿನ ಮೊರೆ ಹೋಗಿರುವುದರಿಂದ ಮಾರಾಟಗಾರರಿಗೆ ಸಖತ್ ವ್ಯಾಪಾರ ಆಗುತ್ತಿದೆ.
ಬಿಸಿಲ ತಾಪದಿಂದಾಗಿ ಕಬ್ಬಿನ ಜ್ಯೂಸ್ ಮೊರೆ ಹೋಗಿರುವ ಹುಬ್ಬಳ್ಳಿ ಜನ
ಬಿಸಿಲ ತಾಪದಿಂದಾಗಿ ಕಬ್ಬಿನ ಜ್ಯೂಸ್ ಮೊರೆ ಹೋಗಿರುವ ಹುಬ್ಬಳ್ಳಿ ಜನ

ಹುಬ್ಬಳ್ಳಿ: ಈ ಬಾರಿಯ ಬೇಸಿಗೆ ಜನತೆಯನ್ನು ಇನ್ನಿಲ್ಲದಂತೆ ಕಾಡುತ್ತಿದೆ, ಏರುತ್ತಿರುವ ಬಿಸಿಲ ಬೇಗೆಗೆ ಎಲ್ಲರು ಬೇಸಿಗೆಯನ್ನು ಶಪಿಸುತ್ತಿದ್ದಾರೆ. ಬಿಸಿಲ ಧಗೆ ಜನ ಸಾಮಾನ್ಯರ ಮುಖದಲ್ಲಿ ಬೆವರಿಳಿಸುತ್ತಿದ್ದರೇ, ಎಳನೀರು ಮಾರಾಟ ಗಾರರು ಜ್ಯೂಸ್ ಅಂಗಡಿಯವರು ಮುಖದಲ್ಲಿ ಮಂದಹಾಸ ಮೂಡಿಸಿದೆ.

ಬಿಸಿಲ ಬೇಗೆಯಿಂದ  ಕಂಗೆಟ್ಟ ಜನರು ಹಣ್ಣು, ಜ್ಯೂಸ್, ಕೋಲ್ಡ್ ಡ್ರಿಂಕ್ಸ್ , ಎಳನೀರಿನ ಮೊರೆ ಹೋಗಿರುವುದರಿಂದ ಮಾರಾಟಗಾರರಿಗೆ ಸಖತ್ ವ್ಯಾಪಾರ ಆಗುತ್ತಿದೆ.

ಕಳೆದ ವರ್ಷ ಬೇಸಿಗೆಯಲ್ಲಿ ಒಂದು ಎಳನೀರಿನ ಬೆಲೆ 15-20 ರು. ಇತ್ತು, ಆದರೆ ಈ ವರ್ಷ 25 ರು. ಇದೆ. ದಿನವೊಂದಕ್ಕೆ ಸುಮಾರು 300 ಎಳನೀರು ಮಾರಾಟ ಮಾಡುತ್ತೇನೆ. 1ಸಾವಿರ ಎಳನೀರಿಗೆ ನಾನು 22 ಸಾವಿರ ರು, ನೀಡಿ ಖರೀದಿಸುತ್ತೇನೆ ಎಂದು ಹುಬ್ಬಳ್ಳಿಯ ಕೇಶ್ವಾಪುರದ ಎಳನೀರು ವ್ಯಾಪಾರಿ ಮುಖೇರ್ ಯಲಿಗಾರ್ ಹೇಳುತ್ತಾರೆ.

ಕಳೆದ 15 ದಿನಗಳಿಂದ ವ್ಯಾಪಾರದಲ್ಲಿ ಬಾರಿ ಏರಿಕೆ ಕಂಡು ಬಂದಿದೆ. ಕಬ್ಬಿನ ಹಾಲಿನ ಜೊತೆಗೆ, ಮಾವಿನಹಣ್ಣು, ಸ್ಟ್ರಾಬೆರಿ ವೆನಿಲಾ ಮುಂತಾದ ಜ್ಯೂಸ್ ಗಳನ್ನು ಮಾರಾಟಮಾಡುತ್ತೇನೆ, ಇದರಿಂದ ಪ್ರತಿದಿನ 4.ಸಾವಿರ ರು ಸಂಪಾದನೆ ಮಾಡುವುದಾಗಿ ಮತ್ತೊಬ್ಬ ವ್ಯಾಪಾರಿ ಹೇಳುತ್ತಾನೆ.

ಇನ್ನು ಕಲ್ಲಂಗಡಿ ಹಣ್ಣಿಗಂತು ಎಲ್ಲಿಲ್ಲದ ಬೇಡಿಕೆಯಿದೆ. ಕೆಜಿ 15 ರೂಪಾಯಿ ಇದ್ದ ಕಲ್ಲಂಗಡಿ ಹಣ್ಣಿನ ಬೆಲೆ ಈಗ 25 -30 ರು. ಆಗಿದೆ. ಹಾಟ್ ಕೇಕ್ ನಂತೆ ಕಲ್ಲಂಗಡಿ ಹಣ್ಣು ಮಾರಾಟವಾಗುತ್ತಿದ್ದು, ಅಗತ್ಯವಾದ ಪ್ರಮಾಣದಲ್ಲಿ ನಮ್ಮಲ್ಲಿ ಸ್ಟಾಕ್ ಇಲ್ಲ ಎಂದು ಮತ್ತೊಬ್ಬ ಹಣ್ಣಿನ ವ್ಯಾಪಾರಿ ಹೇಳುತ್ತಾನೆ.

ಒಟ್ಟಿನಲ್ಲಿ ಈ ಬಾರಿಯ ಬೇಸಿಗೆ ಹಣ್ಣು, ಜ್ಯೂಸ್ ವ್ಯಾಪಾರಿಗಳಿಗೆ ತುಂಬಾನೆ ಲಾಭ ತಂದು ಕೊಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com