2017ರೊಳಗಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಸೈಕಲ್ ಭಾಗ್ಯ

ರಾಜ್ಯ ಎಲ್ಲಾ ಸರ್ಕಾರಿ ಶಾಲೆಗಳ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2017ರ ಜನವರಿ ತಿಂಗಳೊಳಗಾಗಿ ಉಚಿತವಾಗಿ ಸೈಕಲ್ ಗಳನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಎಲ್ಲಾ ಸರ್ಕಾರಿ ಶಾಲೆಗಳ ಹಾಗೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ 2017ರ ಜನವರಿ ತಿಂಗಳೊಳಗಾಗಿ ಉಚಿತವಾಗಿ ಸೈಕಲ್ ಗಳನ್ನು ಕೊಡುವುದಾಗಿ ಬುಧವಾರ ಸರ್ಕಾರ ಹೇಳಿದೆ.

ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ನೀಡುವ ಕುರಿತಂತೆ ಈ ಹಿಂದೆ ಕಂಪನಿಗಳನ್ನು ಕರೆದು ಸರ್ಕಾರ ಹರಾಜು ಪ್ರಕ್ರಿಯೆಯನ್ನು ನಡೆಸಿತ್ತು. ಹರಾಜು ಪ್ರಕ್ರಿಯೆಯಲ್ಲಿ ಎಸ್ ಕೆ. ಬೈಕ್ಸ್ ಪ್ರೈವೇಟ್ ಲಿಮಿಟೆಡ್, ಲುಧಿಯಾನಾ ಮತ್ತು ಹಿರೋ ಇಕೋಟೆಕ್ ಲಿಮಿಟೆಡ್ ಕಂಪನಿ ಗೆದ್ದಿತ್ತು. ಇದರಂತೆ ರು. 3,600 ರಂತೆ ಹೆಣ್ಣುಮಕ್ಕಳಿಗೆ ಹಾಗೂ ರು. 3,350ರಂತೆ ಗಂಡುಮಕ್ಕಳಿಗೆ ಸಾರಿಗೆ ವೆಚ್ಚ, ತೆರಿಗೆ ಹಾಗೂ ಇನ್ನಿತರೆ ವೆಚ್ಚಗಳನ್ನು ಸೇರಿ ಸೈಕಲ್ ಗಳನ್ನು ನೀಡುವುದಾಗಿ ಒಪ್ಪಂದ ಮಾಡಿಕೊಂಡಿತ್ತು.

ಒಪ್ಪಂದದಂತೆ ಕಂಪನಿಯು ಬೇಸಿಗೆ ರಜೆಯಾಗುತ್ತಿದ್ದಂತೆ ಮಕ್ಕಳಿಗೆ ಜೂನ್ ತಿಂಗಳೊಳಗಾಗಿ ಮಕ್ಕಳಿಗೆ ಸೈಕಲ್ ಗಳನ್ನು ವಿತರಣೆ ಮಾಡಬೇಕಿತ್ತು ಆದರೆ, ಮಕ್ಕಳಿಗೆ ಈ ವರೆಗೂ ಸರಿಯಾದ ರೀತಿಯಲ್ಲಿ ಸೈಕಲ್ ಗಳನ್ನು ವಿತರಣೆ ಮಾಡಲಾಗಿಲ್ಲ. ಟೆಂಡರ್ ಗೂ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ.

ಸೈಕಲ್ ವಿತರಣೆ ಕುರಿತಂತೆ ಕಂಪನಿಗೆ 120 ದಿನಗಳ ಕಾಲ ಗಡಿಯನ್ನು ನೀಡಲಾಗಿತ್ತು. ಆದರೆ, ಈ ವರೆಗೂ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸೈಕಲ್ ಗಳನ್ನು ವಿತರಣೆ ಮಾಡದ ಹಿನ್ನೆಲೆಯಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸಿರುವ ಸರ್ಕಾರ ಕಂಪನಿಗಳಿಗೆ ಅಧಿಕೃತ ಸೂಚನಾ ಪತ್ರವೊಂದನ್ನು ರವಾನಿಸಿದೆ. ಸೂಚನೆಯಲ್ಲಿ ಒಪ್ಪಂದಂತೆ ಅಂತಿಮ ದಿನದೊಳಗಾಗಿ ಸೈಕಲ್ ಗಳನ್ನು ವಿತರಣೆ ಮಾಡದಿದ್ದಲ್ಲಿ ಒಂದೊಂದು ಸೈಕಲ್ ನ ಬೆಲೆಯಲ್ಲೂ 100ಯನ್ನು ಕಡಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com