ಮೈಸೂರು: ಒಂದು ಲಕ್ಷ ರೂ ಗೆ ನವಜಾತ ಶಿಶು ಮಾರಾಟ

ಮಕ್ಕಳ ಮಾರಾಟ ಜಾಲವನ್ನು ಬೇಧಿಸಿರುವ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಡ ಹಾಗೂ ದುರ್ಬಲ ವರ್ಗದ ಜನರನ್ನು ದುರುಪಯೋಗ ಪಡಿಸಿಕೊಂಡಿರುವ....
ಮೈಸೂರು ಎಸ್ಪಿ ರವಿ.ಡಿ ಚನ್ನಣ್ಣನವರ್
ಮೈಸೂರು ಎಸ್ಪಿ ರವಿ.ಡಿ ಚನ್ನಣ್ಣನವರ್

ಮೈಸೂರು: ಮಕ್ಕಳ ಮಾರಾಟ ಜಾಲವನ್ನು ಬೇಧಿಸಿರುವ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಬಡ ಹಾಗೂ ದುರ್ಬಲ ವರ್ಗದ ಜನರನ್ನು ದುರುಪಯೋಗ ಪಡಿಸಿಕೊಂಡಿರುವ ಈ ಗ್ಯಾಂಗ್ ಅವರಿಗೆ ಹಣದ ಆಮೀಷ ತೋರಿಸಿ ಮಕ್ಕಳನ್ನು ಮಾರಾಟ ಮಾಡಿದ್ದಾರೆ.

ಸುಮಾರು ಒಂದರಿಂದ 4 ಲಕ್ಷ ರುಪಾಯಿವರೆಗೆ ಮಕ್ಕಳನ್ನು ಮಾರಾಟ ಮಾಡಲಾಗಿದೆ. ಮಕ್ಕಳು ನೋಡಲು ಹೇಗಿವೆ ಎಂಬುದರ ಮೇಲೆ ಅವರಿಗೆ ಬೆಲೆ ನಿರ್ಧರಿತವಾಗುತ್ತಿತ್ತು.

ಕಳೆದ ಆರು ವರ್ಷಗಳಿಂದ ಈ ಜಾಲ ನಡೆಯುತ್ತಿತ್ತು, ನಂಜನಗೂಡಿನಲ್ಲಿ 9 ತಿಂಗಳ ಮಗು  ಕಿಡ್ನಾಪ್ ನಂತರ ಈ ಜಾಲ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ,

9 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 16 ಮಕ್ಕಳನ್ನು ರಕ್ಷಿಸಲಾಗಿದೆ. ಎಲ್ಲಾ 16 ಮಕ್ಕಳು 25 ದಿನದ ಮಕ್ಕಳಿಂದ ಆರು ವರ್ಷದ ವರೆಗಿನ ಮಕ್ಕಳಾಗಿವೆ.

ಎಲ್ಲಾ ಮಕ್ಕಳನ್ನು ಕಾನೂನು ಬಾಹಿರವಾಗಿ ದತ್ತು ತೆಗೆದುಕೊಳ್ಳಲಾಗಿದೆ. ನಾಸಿಮ್ ಮತ್ತು ಅರವಿಂದ್ ಆಸ್ಪತ್ರೆ ಗಳು ಮೊದಲು ನವಜಾತ ಶಿಶು ಸತ್ತಿದೆ ಎಂದು ತಾಯಿ ಹಾಗೂ ಕುಟುಂಬಸ್ಥರಿಗೆ ನಂಬಿಸಿ, ನಂತರ ಮಕ್ಕಳನ್ನು ಮಾರಾಟ ಮಾಡಲಾಗುತ್ತಿತ್ತು. ಮೊದಲು ಮಗುವನ್ನು ಕಾನೂನು ಬಾಹಿರವಾಗಿ ದತ್ತು ತೆಗೆದುಕೊಂಡ ಮದನ್ ಲಾಲ್ ಎಂಬಾತ ನಂತರ ತಾನೇ ಏಜೆಂಟ್ ಆಗಿ ಕೆಲಸ ನಿರ್ವಹಿಸತೊಡಗಿದ.

ಒಂದು ಮಗುವನ್ನು ಅಮೆರಿಕಾಗೆ ಮಾರಾಟ ಮಾಡಲಾಗಿದೆ. ಮತ್ತೊಂದು ಮಗುವನ್ನು ಕೇರಳದಿಂದ ಕೀನ್ಯಾಗೆ ಕಳುಹಿಸಲಾಗಿದೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ. ಐಷಾರಾಮಿ ಜೀವನಕ್ಕಾಗಿ ಆರೋಪಿಗಳು ಮಕ್ಕಳನ್ನು ಕದ್ದು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು ಎಂದು ಎಸ್ ಪಿ ರವಿ.ಡಿ ಚನ್ನಣ್ಣನವರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com