ಸಾಹಿತ್ಯ ಸಮ್ಮೇಳನ: ಪುಸ್ತಕ ಮಾರಾಟಕ್ಕೂ ತಟ್ಟಿದ ನೋಟು ನಿಷೇಧದ ಬಿಸಿ

ರು.500 ಹಾಗೂ 1,000 ದುಬಾರಿ ನೋಟಿ ಮೇಲಿನ ನಿಷೇಧದ ಬಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬಿದ್ದಿದ್ದು, ಪುಸ್ತಕ ಕೊಳ್ಳಲು ಬರುವ ಗ್ರಾಹಕರಿಗೆ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗದೆ, ಪುಸ್ತಕ ಮಳಿಗೆಗಳು ಸಮಸ್ಯೆಗಳನ್ನು...
82ನೇ ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆಗಳ ಮೇಲೂ ತಟ್ಟಿದ ನೋಟು ನಿಷೇಧ ಬಿಸಿ
82ನೇ ಸಾಹಿತ್ಯ ಸಮ್ಮೇಳನ: ಪುಸ್ತಕ ಮಳಿಗೆಗಳ ಮೇಲೂ ತಟ್ಟಿದ ನೋಟು ನಿಷೇಧ ಬಿಸಿ
Updated on

ರಾಯಚೂರು: ರು.500 ಹಾಗೂ 1,000 ದುಬಾರಿ ನೋಟಿ ಮೇಲಿನ ನಿಷೇಧದ ಬಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬಿದ್ದಿದ್ದು, ಪುಸ್ತಕ ಕೊಳ್ಳಲು ಬರುವ ಗ್ರಾಹಕರಿಗೆ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗದೆ, ಪುಸ್ತಕ ಮಳಿಗೆಗಳು ಸಮಸ್ಯೆಗಳನ್ನು ಎದುರಿಸಿದ್ದಾರೆ.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 400ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಪುಸ್ತಕ ಮಳಿಗೆಗಳಿಗೆ ಬರುವ ಗ್ರಾಹಕರು ತಮಗಿಷ್ಟವಾದ ಲೇಖಕರು ಬರೆದಿರುವ ಪುಸ್ಕಕಗಳನ್ನು ಆಯ್ಕೆ ಮಾಡಿಕೊಂಡು ಪುಸ್ತಕ ಖರೀದಿಸಲು ಮುಂದಾಗುತ್ತಿದ್ದಾರೆ. ಆದರೆ, ಪುಸ್ತಕ ಖರೀದಿ ಮಾಡಲು ಗ್ರಾಹಕರು ಹಾಗೂ ಮಾರಾಟಗಾರರ ಮಧ್ಯೆ ಚಿಲ್ಲರೆಗಳ ಸಮಸ್ಯೆಗಳು ಎದುರಾಗಿದೆ.

ಮಳಿಗೆಗಳಿಗೆ ಬರುವ ಬಹುತೇಕ ಗ್ರಾಹಕರು ರು.2000 ಹಾಗೂ 500 ನೋಟುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿದೆ.

ಮಳಿಗೆಗಳಿಗೆ ಬರುವ ಸಾಕಷ್ಟು ಗ್ರಾಹಕರು ರು.200 ಪುಸ್ತಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ರು.2,000 ನೋಟನ್ನು ಕೈಗೆ ಕೊಡುತ್ತಾರೆ. ಇದರಿಂದ ಚಿಲ್ಲರೆ ಸಮಸ್ಯೆಯುಂಟಾಗುತ್ತಿದೆ ಎಂದು ಪುಸ್ತಕ ಮಳಿಗೆಯ ಮಾಲೀಕ ಆರ್. ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಚಿಲ್ಲರೆಯ ಕೊರತೆಯಿರುವುದರಿಂದ ಹೊಸ ನೋಟನ್ನು ತೆಗೆದುಕೊಳ್ಳುವುದರಲ್ಲಿ ಸಮಸ್ಯೆಗಳನ್ನು ಎದುರಾಗುತ್ತಿದೆ. ಅಲ್ಪ ಮೊತ್ತದ ನೋಟುಗಳ ಸರಬರಾಜು ಇಲ್ಲದಿದ್ದರೆ, ಎಷ್ಟು ಜನರಿಗೆಂದು ಚಿಲ್ಲರೆ ನೀಡಲು ಸಾಧ್ಯ? ಕೆಲವು ಗ್ರಾಹಕರಿಗೆ ನಮ್ಮ ಸಮಸ್ಯೆಗಳು ಅರ್ಥವಾಗುತ್ತಿದೆ. ಇನ್ನು ಕೆಲವರಿಗೆ ಅರ್ಥವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಕ್ರೆಡಿಟ್ ಹಾಗೂ ಡಿಬಿಟ್ ಕಾರ್ಡ್ ಗಳ ಯಂತ್ರಗಳನ್ನು ಇಟ್ಟುಕೊಂಡಿದ್ದರೂ, ನೆಟ್ ವರ್ಕ್ ಸಮಸ್ಯೆ ಎದುರಾಗುತ್ತಿರುವುದರಿಂದ ಯಂತ್ರಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮತ್ತೊಬ್ಬ ಮಳಿಗೆಯ ಮಾಲೀಕ ಹೇಳಿದ್ದಾರೆ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ಜನರು ಪುಸ್ತಕ ಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದಾರೆಂದು ಮತ್ತೊಂದು ಮಳಿಯೆ ಮಾಲೀಕ ಕೃಷ್ಣ ಚೆಂಗ್ಲಿ ಎಂಬುವವರು ಹೇಳಿದ್ದಾರೆ.

ಮಳಿಗೆಗೆ ಬರುವ ಗ್ರಾಹಕ ಖರೀದಿಸಲು ಪುಸ್ತಕವೊಂದನ್ನು ಆಯ್ಕೆ ಮಾಡುತ್ತಾನೆ. ಕೊಳ್ಳುವ ವೇಳೆ ನಮ್ಮ ಬಳಿ ಚಿಲ್ಲರೆ ಎಂದರೆ ಗ್ರಾಹಕರ ಬೇಸರ ವ್ಯಕ್ತಪಡಿಸುತ್ತಾರೆ. ಚಿಲ್ಲರೆ ಇಲ್ಲ ಎಂದಾಗ ಸಾಕಷ್ಟು ಗ್ರಾಹಕರು ಪುಸ್ತಕ ಖರೀದಿಸುವುದನ್ನು ಬಿಟ್ಟು ಮಳಿಗೆಯನ್ನು ತೊರೆಯುತ್ತಾರೆ. ಇನ್ನು ಕೆಲವರು ಚಿಲ್ಲರೆಯನ್ನು ತಂದುಕೊಟ್ಟು ಪುಸ್ತಕವನ್ನು ಖರೀದಿಸುತ್ತಾರೆ. ಇದು ಪುಸ್ತಕಗಳ ಮೇಲೆ ಅವರಿಗಿರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com