ಸಾಂಕೇತಿಕ ಚಿತ್ರ
ರಾಜ್ಯ
ಬೆಂಗಳೂರು: ನವ ವಿವಾಹಿತೆ ಆತ್ಮಹತ್ಯೆ
20 ವರ್ಷದ ನವ ವಿವಾಹಿತೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ...
ಬೆಂಗಳೂರು: 20 ವರ್ಷದ ನವ ವಿವಾಹಿತೆ ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಕುಟುಂಬ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಮೃತಪಟ್ಟ ಮಹಿಳೆಯನ್ನು ಕಾವ್ಯಾ ಎಂದು ಗುರುತಿಸಲಾಗಿದ್ದು, ಕೋಲಾರದ ಸಮತ್ ಕುಮಾರ್ ಎಂಬುವವರನ್ನು ಮದುವೆಯಾಗಿದ್ದಳು.
ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ನವೆಂಬರ್ 30ರಂದು ಕಾವ್ಯಾ ತನ್ನ ತಾಯಿ ಮನೆಗೆ ಬಂದಿದ್ದಳು. ತನ್ನ ಪೋಷಕರ ಬಳಿ ಗಂಡನ ಜತೆ ನಡೆಯುತ್ತಿರುವ ಜಗಳದ ಬಗ್ಗೆ ವಿವರಿಸಿದ್ದಳು. ಕೋಲಾರಕ್ಕೆ ಮತ್ತೆ ಹೋಗುವುದಿಲ್ಲ ಎಂದು ಹೇಳಿದ್ದಳು. ಈ ಘಟನೆಯಿಂದ ಬೇಸತ್ತು ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನೇಣು ಬಿಗಿದ ಸ್ಥಿತಿಯಲ್ಲಿದ್ದುದನ್ನು ಕಂಡ ಪೋಷಕರು ಪೊಲೀಸರಿಗೆ ತಿಳಿಸಿದರು. ಪೋಷಕರ ದೂರಿಗೆ ಮೇರೆಗೆ ಪೊಲೀಸರು ಕಾವ್ಯಾಳ ಪತಿ ಮತ್ತು ಮನೆಯವರನ್ನು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ