ನಮಗೆ 15 ನಿಮಿಷ ಹೆಚ್ಚು ಸಮಯ ಕೊಡಿ, ಹುಷಾರಾಗಿ ಗಾಡಿ ಓಡಿಸುತ್ತೇವೆ: ಬಿಎಂಟಿಸಿ ಚಾಲಕರ ಮನವಿ

ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸುವುದು, ಟ್ರಾಫಿಕ್ ದಟ್ಟಣೆಯಿಂದ ಅಪಘಾತವಾಗುವುದನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸುವುದು, ಟ್ರಾಫಿಕ್ ದಟ್ಟಣೆಯಿಂದ ಅಪಘಾತವಾಗುವುದನ್ನು ತಪ್ಪಿಸಲು ಜನಸಂದಣಿಯ ಮಾರ್ಗಗಳಲ್ಲಿ ಬಸ್ಸು ಚಲಾಯಿಸುವ ಬಿಎಂಟಿಸಿ ಬಸ್ ಚಾಲಕರು 15ರಿಂದ 20 ನಿಮಿಷ ತಡವಾಗಿ ಬಸ್ ಡಿಪೊಗೆ ತಲುಪಲು ಅವಕಾಶ ಮಾಡಿಕೊಡಬೇಕೆಂದು ಚಾಲಕರು ಅಧಿಕಾರಿಗಳನ್ನು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಅಕ್ಟೋಬರ್ 31ರವರೆಗೆ ನಗರದಲ್ಲಿ 36,567 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳು ಬಿಎಂಟಿಸಿ ಚಾಲಕರ ವಿರುದ್ಧ ವರದಿಯಾಗಿದೆ.
ಈ ಬಗ್ಗೆ ಬಸ್ ಚಾಲಕರನ್ನು ವಿಚಾರಿಸಿದಾಗ, ತಮಗೆ ಬಸ್ ಸಮಯದ ಚಾರ್ಟ್ ತೊಂದರೆಯಾಗುತ್ತಿದೆ. ನಿಗದಿತ ಅವಧಿಗೆ ಬಸ್ ಡಿಪೊಗೆ ತಲುಪಬೇಕಾಗುತ್ತದೆ. ಆಗ ಒತ್ತಡದಲ್ಲಿ ಕೆಲವೊಮ್ಮೆ ಟ್ರಾಫಿಕ್ ಉಲ್ಲಂಘನೆಯಾಗುತ್ತದೆ ಎನ್ನುತ್ತಾರೆ. ಇದಕ್ಕೆ ಟ್ರಾಫಿಕ್ ದಟ್ಟಣೆಯೇ ಮುಖ್ಯ ಕಾರಣ ಎನ್ನುತ್ತಾರೆ ಶಾಂತಿನಗರದ ಬಿಎಂಟಿಸಿ ಚಾಲಕರೊಬ್ಬರು.
ಬನಶಂಕರಿಯಿಂದ ಐಟಿಪಿಎಲ್, ಕೆಂಪೇಗೌಡ ಬಸ್ ನಿಲ್ದಾಣದಿಂದ ಎಲೆಕ್ಟ್ರಾನಿಕ್ ಸಿಟಿ, ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ ಮತ್ತು ಬನಶಂಕರಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಸ್ಸುಗಳ 15ರಿಂದ 30 ನಿಮಿಷ ತಡವಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com