ತಂದೆಯಿಂದಲೇ ಯೋಧನ ಬರ್ಬರ ಹತ್ಯೆ!

ಯೋಧನೊಬ್ಬನನ್ನು ಆತನ ತಂದೆಯೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ಬೈಲಹೊಂಗಲದ ನಯಾ ನಗರದಲ್ಲಿ ನಡೆದಿದೆ...
ಹತ್ಯೆಯಾದ ಯೋಧ ಈರಣ್ಣ ಇಂಡಿ
ಹತ್ಯೆಯಾದ ಯೋಧ ಈರಣ್ಣ ಇಂಡಿ

ಬೆಳಗಾವಿ: ಯೋಧನೊಬ್ಬನನ್ನು ಆತನ ತಂದೆಯೇ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ಮಂಗಳವಾರ ಬೈಲಹೊಂಗಲದ ನಯಾ ನಗರದಲ್ಲಿ ನಡೆದಿದೆ.

ಈರಣ್ಣ ಇಂಡಿ (21) ಹತ್ಯೆಯಾದ ಯೋಧ. ಗುಂಡಿನ ದಾಳಿ ವೇಳೆ ಈರಣ್ಣ ಅವರ ತಾಯಿ ಅನುಸೂಯಾ ಹಾಗೂ ಮಗಳು ಪ್ರೀತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಠಲ ಇಂಡಿ (68)  ಗುಂಡು ಹಾರಿಸಿ ಹತ್ಯೆ ಮಾಡಿದ ತಂದೆಯಾಗಿದ್ದಾರೆ. ಹತ್ಯೆಯಾದ ದಿನದಂದು ಈರಣ್ಣ ಇಂಡಿ ಹಾಗೂ ವಿಠಲ ಇಂಡಿ ನಡುವೆ ಹಣದ ವಿಚಾರಕ್ಕೆ ಜಗಳವಾಗಿದೆ. ಇಬ್ಬರ ನಡುವೆ ತೀವ್ರ ವಾಗ್ವಾದಗಳು ನಡೆದಿವೆ. ಈ ವೇಳೆ ಕೆಂಡಾಮಂಡಲವಾದ ವಿಠಲ ಇಂಡಿಯವರು ರಿವಾಲ್ವರ್ ನಿಂದ ಐದು ಗುಂಡುಗಳನ್ನು ಈರಣ್ಣ ಇಂಡಿ ಅವರ ಮೇಲೆ ಹಾರಿಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋಗಿದ್ದ ತಾಯಿ ಹಾಗೂ ಮಗಳಿಗೂ ಗಾಯವಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆ ಬಳಿಕ ವಿಠಲ ಇಂಡಿಯವರು ತಲೆ ಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಘಟನೆ ಕುರಿತಂತೆ ಹೇಳಿಕೆ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು,  ವಿಠಲ ಇಂಡಿಯವರು ಇರುವ ಸ್ಥಳವನ್ನು ಈಗಾಗಲೇ ಕಂಡು ಹಿಡಿಯಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com