ಬೆತ್ತಲೆಗೊಂಡು ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು
ಬೆತ್ತಲೆಗೊಂಡು ಅಯ್ಯಪ್ಪ ಸ್ವಾಮಿಗೆ ಪೂಜೆ ಸಲ್ಲಿಸುತ್ತಿರುವ ಭಕ್ತರು

ಅಯ್ಯಪ್ಪ ಭಕ್ತರಿಂದ ಬೆತ್ತಲೆ ವ್ರತ: ಗ್ರಾಮಸ್ಥರ ಆಕ್ರೋಶದ ಬಳಿಕ ಮಾಲಾಧಾರಿಗಳು ಪರಾರಿ

ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಸಾಧುಗಳಂತೆ ಬೆತ್ತಲಾಗಿ ಪೂಜೆ ಮಾಡಿ ವಿಚಿತ್ರ ವ್ರತ ಆಚರಿಸುವ ಘಟನೆಯೊಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ...

ಕಲಘಟಗಿ: ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಸಾಧುಗಳಂತೆ ಬೆತ್ತಲಾಗಿ ಪೂಜೆ ಮಾಡಿ ವಿಚಿತ್ರ ವ್ರತ ಆಚರಿಸುವ ಘಟನೆಯೊಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

ಕಠಿಣವಾಗಿ ವ್ರತ ಮಾಡಿದರೆ ಇಷ್ಟಾರ್ಥಗಳು ಸಿದ್ಧಿಯಾಗಿ, ಹಣಕಾಸಿನ ತೊಂದರೆ, ಮನೆಯ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನಂಬಿದ್ದ ನಾಲ್ವರು ಅಯ್ಯಪ್ಪ ಭಕ್ತರು ಹಲವು ದಿನಗಳಿಂದಲೂ ಬೆತ್ತಲೆಯಿಂದ ವ್ರತಾಚರಣೆ ಮಾಡುತ್ತಿದ್ದರು.

ಕಳೆದ 15 ದಿನಗಳಿಂದಲೂ ಅಯ್ಯಪ್ಪ ಮಾಲೆ ಧರಿಸಿದ್ದ ನಾಲ್ವರು ಮಡಕಿಹೊನ್ನಳ್ಳಿ ಗ್ರಾಮದ ಹೊಲವೊಂದರಲ್ಲಿ ತೆಂಗಿನ ಗರಿಗಳಿಂದ ಚಪ್ಪರ ನಿರ್ಮಿಸಿಕೊಂಡು, ಬೆತ್ತಲೆಯಾಗಿ ನಿತ್ಯ ಪ್ರಾರ್ಥನೆ ಹಾಗೂ ಜಪ ಮಾಡುತ್ತಿದ್ದರು. ಇದು ಗ್ರಾಮಸ್ಥರಿಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತ್ತು. ಹೀಗಾಗಿ ಗ್ರಾಮಸ್ಥರು ಬೆತ್ತಲೆ ವ್ರತಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಗ್ರಾಮಸ್ಥರ ವಿರೋಧದ ಬಳಿಕ ಮಾಲಾಧಾರಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಇನ್ನು ಬೆತ್ತಲೆ ವ್ರತವನ್ನು ಹಿರಿಯ ಅಯ್ಯಪ್ಪ ಭಕ್ತ ರಮೇಶ್ ಎಂಬುವವರು ಸಮರ್ಥಿಸಿಕೊಂಡಿದ್ದು, ಇದರಲ್ಲಿ ಅಸ್ವಾಭಾವಿಕ ಎಂಬುದು ಯಾವುದೂ ಇಲ್ಲ. 41 ದಿನದ ಮಂಡಲ ವ್ರತದಲ್ಲಿ ಇದೂ ಕೂಡ ಒಂದಾಗಿದೆ. ಇದನ್ನು ಹಠ ಯೋಗ ಎಂದು ಕರೆಯಲಾಗುತ್ತದೆ. ಚಳಿ, ಗಾಳಿ, ಮಳೆ, ಬಿಸಿಲನ್ನು ಲೆಕ್ಕಿಸದೆಯೇ ಅವರು ಬೆತ್ತಲಾಗಿ ಅಯ್ಯಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ. ಹಠ ಯೋಗ ಮಾಡಿದವರ ಮನಸ್ಸಿನ ಇಚ್ಛೆ, ಕನಸುಗಳು ನನಸಾಗುತ್ತವೆ ಎಂಬ ನಂಬಿಕೆಯಿದೆ. ಬೆತ್ತಲೆ ಪೂಜೆ ಸಲ್ಲಿಸಿದ ಭಕ್ತರ ಇಚ್ಛೆಗಳು ನೆರವೇರಲಿ ಎಂದು ಆಶಿಸುತ್ತೇನೆಂದು ಹೇಳಿದ್ದಾರೆ.

ಇನ್ನು ಮತ್ತೊಂದೆಡೆ ಸಾರ್ವಜನಿಕರು ಹಾಗೂ ಇನ್ನಿತರೆ ಹಿರಿಯ ಹಿರಿಯ ಸ್ವಾಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಬೆತ್ತಲೆ ವ್ರತ ಮಾಡಿ ಅಯ್ಯಪ್ಪನಿಗೆ ಪೂಜೆ ಸಲ್ಲಿಕೆ ಮಾಡಬೇಕೆಂಬುದು ಎಲ್ಲಿಯೂ ಇಲ್ಲ. ಕಲಘಟಗಿಯಲ್ಲಿ ನಡೆಯುತ್ತಿರುವುದು ಅಸ್ಪೃಶ್ಯತೆಯಷ್ಟೇ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com