ಹಳೇ ನೋಟಿಗೆ ನಿರಾಕರಣೆ: ಟೋಲ್ ಪ್ಲಾಜಾ ಸಿಬ್ಬಂದಿ ಮೇಲೆ ಹಲ್ಲೆ, ನಾಲ್ವರಿಗೆ ಗಾಯ

ಹಳೇ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದ ಕಾರಣಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕಚೇರಿಯನ್ನು ಧ್ವಂಸಗೊಳಿಸಿರುವ ಘಟನೆಯೊಂದು ಶುಕ್ರವಾರ ಬೆಳಗಿನ...
ಲಾರಿ ಚಾಲಕರ ಗುಂಪು ಟೋಲ್ ಪ್ಲಾಜಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು (ಸಿಸಿಟಿವಿ ದೃಶ್ಯ)
ಲಾರಿ ಚಾಲಕರ ಗುಂಪು ಟೋಲ್ ಪ್ಲಾಜಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು (ಸಿಸಿಟಿವಿ ದೃಶ್ಯ)

ಬಾಗೇಪಲ್ಲಿ: ಹಳೇ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಿದ್ದ ಕಾರಣಕ್ಕೆ ಟೋಲ್ ಪ್ಲಾಜಾ ಸಿಬ್ಬಂದಿಗಳ ಮೇಲೆ ಗುಂಪೊಂದು ಹಲ್ಲೆ ನಡೆಸಿ ಕಚೇರಿಯನ್ನು ಧ್ವಂಸಗೊಳಿಸಿರುವ ಘಟನೆಯೊಂದು ಶುಕ್ರವಾರ ಬೆಳಗಿನ ಜಾವ ಬಾಗೇಪಲ್ಲಿಯಲ್ಲಿ ನಡೆದಿದೆ.

ನಿನ್ನೆ ಬೆಳಿಗಿನ ಜಾವ ಟೋಲ್ ಪ್ಲಾಜಾ ಬಳಿ ಬಂದಿರುವ ಲಾರಿ ಚಾಲಕನೊಬ್ಬ ರು.500 ನೋಟನ್ನು ನೀಡಿದ್ದಾನೆ. ಈ ವೇಳೆ ಸಿಬ್ಬಂದಿಗಳು ಹಳೇ ನೋಟು ತೆಗೆದುಕೊಳ್ಳುವ ದಿನಾಂಕ ಡಿ. 15ಕ್ಕೆ ಮುಗಿದು ಹೋಗಿದೆ ಎಂದು ಹೇಳದ್ದಾರೆ. ಈ ವೇಳೆ ಸಿಬ್ಬಂದಿಗಳು ಹಾಗೂ ಲಾರಿ ಚಾಲಕನ ನಡುವೆ ಮಾತಿನ ಚಕಮಕಿ ನಡೆದಿದೆ. ಲಾರಿ ಚಾಲಕನನ್ನು ಗಂಗಿ ರೆಡ್ಡಿ ಎಂದು ತಿಳಿದುಬಂದಿದೆ. ಜಗಳದ ಬಳಿಕ ಲಾರಿ ಚಾಲಕ ರು.2,000 ನೋಟನ್ನು ನೀಡಿದ್ದಾನೆ. ಈ ನೋಟನ್ನು ನಿರಾಕರಿಸಿದ ಸಿಬ್ಬಂದಿಗಳು ನಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳಿದ್ದಾರೆ. ಮತ್ತೆ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ನಂತರ ಸ್ಥಳದಿಂದ ಗಂಗು ರೆಡ್ಡಿ ಹೊರಟು ಹೋಗಿದ್ದಾನೆ.

ಮತ್ತೆ ಕೆಲ ಗಂಟೆಗಳ ಬಳಿಕ ಕೆಲ ಲಾರಿ ಚಾಲಕರೊಂದಿಗೆ ಬಂದಿರುವ ಗಂಗಿ ರೆಡ್ಡಿ, ಟೋಲ್ ಪ್ಲಾಜಾ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಟೋಲ್ ಪ್ಲಾಜಾವನ್ನು ಗುಂಪು ಧ್ವಂಸ ಗೊಳಿಸಿದ್ದಾರೆ. ದಾಳಿ ವೇಳೆ ನಾಲ್ವರು ಗಾಯಗೊಂಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬಾಗೇಪಲ್ಲಿ ಪೊಲೀಸರು ಇದೀಗ 11 ಮಂದಿಯನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಲಲ್ಲಿ ಬಹುತೇಕರು ಲಾರಿ ಚಾಲಕರಾಗಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com