ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸುವ ಧೈರ್ಯ ಮೋದಿಗಿರಲಿಲ್ಲ; ಕಾಂಗ್ರೆಸ್

ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸುವ ಧೈರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿರಲಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ...
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು: ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸುವ ಧೈರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿರಲಿಲ್ಲ ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.

ತಮ್ಮ ಅಪ್ರಾಮಾಣಿಕತೆಯನ್ನು ಸಮರ್ಥಿಸಿಕೊಳ್ಳುತ್ತಿರುವ ವಿರೋಧಪಕ್ಷಗಳು ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡದೆ, ಚರ್ಚೆಯಿಂದ ಓಡಿಹೋಗುತ್ತಿದ್ದಾರೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರೋಪವನ್ನು ನಿರಾಕರಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು, ಆರೋಪ ಶುದ್ಧ ಸುಳ್ಳು. ಸಂಸತ್ತಿನ ಚರ್ಚೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿಯವರೇ ಸಿದ್ಧರಿರಲಿಲ್ಲ. ಮೋದಿಯವರು ಸಂಸತ್ತಿನ ಹೊರಗೆ ನಿಂತು ಮಾತನಾಡುತ್ತಿದ್ದರೇ, ಹೊರತು ಸಂಸತ್ತಿನ ಒಳಗೆ ಬಂದು ಚರ್ಚೆಯಲ್ಲಿ ಪಾಲ್ಗೊಂಡಿರಲಿಲ್ಲ. ಚರ್ಚೆ ನಡೆಸುವ ಧೈರ್ಯ ಅವರಿಗಿರಲಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಮೋದಿಯವರು ಸಂಸತ್ತಿಗೆ ಬಂದು ಚರ್ಚೆ ನಡೆಸಲು ಸಿದ್ಧರಿದ್ದಿದ್ದರೆ, ತೆರಿಗೆ ಕಾಯ್ದೆ, ಅಂಗವಿಕಲತೆ ಕಾಯ್ದೆ ಹಾಗೂ ಇನ್ನಿತರೆ ಬೇಡಿಕೆಗಳು ಅನುಮೋದನೆಗೊಳ್ಳಬೇಕಿತ್ತು. ಇದಾವುದೂ ಏಕೆ ಆಗಿಲ್ಲ? ಈ ಬಗ್ಗೆ ಮೋದಿಯವರೇಕೆ ಹೇಳಿಕೆ ನೀಡುತ್ತಿಲ್ಲ? ಪ್ರಧಾನಿ ಮೋದಿಯವರಿಗೆ ಸಂಸತ್ತಿಗೆ ಹಾಜರಾಗಿ ಚರ್ಚೆ ನಡೆಸುವ ಧೈರ್ಯವಿರಲಿಲ್ಲ ಎಂದು ತಿಳಿಸಿದ್ದಾರೆ.

ನವೆಂಬರ್ 8 ರಂದು ನೋಟಿನ ಮೇಲೆ ನಿಷೇಧ ಹೇರಿದ ಬಳಿದ ಮೋದಿಯವರು ನವೆಂಬರ್ 16 ರಂದು ಸಂಸತ್ತಿಗೆ ಬಂದು ಹೇಳಿಕೆ ನೀಡಬೇಕಿತ್ತು. ಆದರೆ, ಅವರು ಹೇಳಿಕೆ ನೀಡಲಿಲ್ಲ. ಟಿವಿ, ರೇಡಿಯೋ ಹಾಗೂ ಪತ್ರಿಕೆಗಳು, ಹೊರಗಿನ ಸಭೆಗಳಲ್ಲಿ ಹೇಳಿಕೆ ನೀಡುತ್ತಿದ್ದ ಮೋದಿಯವರು ಸಂಸತ್ತಿಗೆ ಬಂದು ಏಕೆ ಹೇಳಿಕೆ ನೀಡಲಿಲ್ಲ?. ಸಂಸತ್ತಿಗೆ ಬಂದರೂ ನಮ್ಮ ಯಾವ ಪ್ರಶ್ನೆಗಳಿಗೂ ಯಾವುದೇ ಉತ್ತರವನ್ನು ನೀಡಲಿಲ್ದ.

56 ನಿಯಮದಂತೆ ಚರ್ಚೆ ನಡೆಸುವಂತೆ ಆಗ್ರಹಿಸಿದ್ದವು. ಇದಕ್ಕೆ ಸರ್ಕಾರ ನಿರಾಕರಿಸಿತ್ತು. ನಂತರ ಅವರ ನಿರ್ಧಾರದಂತೆಯೇ 184ರ ನಿಯಮದಂತೆ ಚರ್ಚೆ ನಡೆಸಲು ಒಪ್ಪಿದೆವು. ಆದರೂ, ಕೇಂದ್ರ ಚರ್ಚೆಗೆ ಸಿದ್ಧವಿರಲಿಲ್ಲ. ಕೊನೆಗೆ ಯಾವುದೇ ನಿಯಮದ ಪ್ರಕಾರವಾದರೂ ನಾವು ಚರ್ಚೆ ನಡೆಸಲು ಸಿದ್ಧರಿದ್ದೇವೆಂದು ಹೇಳಿದ್ದೆವು. ಇದಕ್ಕೂ ಸರ್ಕಾರ ಚರ್ಚೆ ನಡೆಸಲು ಸಿದ್ಧವಿರಲಿಲ್ಲ.

ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೋದಿಯವರು ಮಾತನಾಡುತ್ತಿದ್ದು, ಸಂಸತ್ತಿನ ಹೊರಗೆ ಏನು ಬೇಕಾದರೂ ಮಾತನಾಡಬಹುದು ಎಂದು ಮೋದಿ ತಿಳಿಸಿದ್ದಾರೆ. ಅಧಿಕಾರಕ್ಕೆ ಬರುವಾಗ ಮೋದಿಯವರು ಮೋದಿಯವರು ವಿದೇಶದಲ್ಲಿರುವ ಕಪ್ಪುಹಣವನ್ನು ಭಾರತಕ್ಕೆ ಮರಳಿ ತಂದು ಪ್ರತೀಯೊಬ್ಬ ಭಾರತೀಯನ ಖಾತೆಗೂ ರು.15 ಲಕ್ಷ ಹಣವನ್ನು ನೀಡುತ್ತೇನೆಂದು ಹೇಳಿದ್ದರು. ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಅದೆಲ್ಲ ಚುನಾವಣಾ ತಂತ್ರವಷ್ಟೇ ಎಂದಿದ್ದರು. ನೋಟು ನಿಷೇಧದ ಮೂಲಕ ಮೋದಿಯವರು ಉತ್ತರ ಪ್ರದೇಶ, ಪಂಜಾಬ್, ಗೋವಾ ಮತ್ತು ಇನ್ನಿತರೆ ರಾಜ್ಯಗಳ ಚುನಾವಣೆಗೆ ತಂತ್ರ ಹೂಡುತ್ತಿದ್ದಾರೆಯೇ?...ಹೀಗಾಗಿಯೇ ಸಂಸತ್ತಿನ ಚರ್ಚೆಯನ್ನು ಪರೋಕ್ಷವಾಗಿ ತಿರಸ್ಕರಿಸಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com