ಬೆಂಗಳೂರು: HIV ಸೋಂಕು ಪೀಡಿತ ರಕ್ತ ಪೂರೈಕೆ, ಎಂ.ಎಸ್ ರಾಮಯ್ಯ ಆಸ್ಪತ್ರೆ ವಿರುದ್ಧ ದೂರು ದಾಖಲು

ಪ್ರತಿತಿಷ್ಠಿತ ಎಂ.ಎಸ್.ರಾಮಯ್ಯ HIV ಸೋಂಕು ಪೀಡಿತ ರಕ್ತಪೂರೈಕೆ ಮಾಡಿದೆ ಎಂಬ ಗುರುತರ ಆರೋಪ ಕೇಳಿ ಬಂದಿದೆ.ಎಂ.ಎಸ್.ರಾಮಯ್ಯ ಆಸ್ಪತ್ರೆಯ..
ಎಂ.ಎಸ್ ರಾಮಯ್ಯ ಆಸ್ಪತ್ರೆ
ಎಂ.ಎಸ್ ರಾಮಯ್ಯ ಆಸ್ಪತ್ರೆ

ಬೆಂಗಳೂರು: ಪ್ರತಿತಿಷ್ಠಿತ ಎಂ.ಎಸ್.ರಾಮಯ್ಯ HIV ಸೋಂಕು ಪೀಡಿತ ರಕ್ತಪೂರೈಕೆ ಮಾಡಿದೆ ಎಂಬ ಗುರುತರ ಆರೋಪ ಕೇಳಿ ಬಂದಿದೆ.ಎಂ.ಎಸ್.ರಾಮಯ್ಯ ಆಸ್ಪತ್ರೆಯ ಅಡಳಿತಾಧಿಕಾರಿ ಸೇರಿ 14 ಜನರ ವಿರುದ್ಧ  ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂತೆತನದಿಂದ ಬಳಲುತ್ತಿದ್ದ ಮಹಿಳೆ ಅಕ್ಟೋಬರ್  5 ರಂದು 2013 ರಲ್ಲಿ ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ತೆರಳಿದ್ದರು. ನಂತರ ಪರಿಕ್ಷೆ ನಡೆಸಿದ ನಂತರ ಆಕೆ ಶಸ್ತ್ರಚಿಕಿತ್ಸೆಗೆ ವೈದ್ಯರು ಸೂಚಿಸಿದರು. 2014 ರ ಫೆಬ್ರವರಿ 15 ರಂದು ಆಕೆಯ ಪತಿ ಜೊತೆ ಬಂದು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಬಂದು ದಾಖಲಾದರು. ಈ ವೇಳೆ ಅವರಿಗೆ ರಕ್ತ ನೀಡಲಾಯಿತು. ನಂತರ ಫೆಬ್ರವರಿ 15 ರಂದು ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ನಂತರ ಫೆಬ್ರವರಿ 19 ರಂದು ಶಸ್ತ್ರ ಚಿಕಿತ್ಸೆಗಾಗಿ ಆಕೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು.ಫೆಬ್ರವರಿ 20 ರಂದು ಬಂದ ವರದಿಯಲ್ಲಿ ಆಕೆಗೆ ಎಚ್.ಐ ವಿ ಸೋಂಕು ಇರುವುದು ತಿಳಿದು ಬಂದಿದೆ. ಈ ಸಂಬಂಧ ಸಂತ್ರಸ್ತೆ ಸೋದರ ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಸದ್ಯ ಸದಾಶಿವನಗರ ಠಾಣೆ ಪೊಲೀಸರು ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಸೆಕ್ಷನ್ 120(B), 320, 324, 336, 338ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ವೈದ್ಯಕೀಯ ತಜ್ಞರ ಸಹಾಯ ಪಡೆದು ಮುಂದಿನ ತನಿಖೆ ನಡೆಸಲಾಗುವುದು ಕೇಂದ್ರ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದಿದ್ದಾರೆ.

ನಮ್ಮ ಆಸ್ಪತ್ರೆಯಿಂದ ಯಾವುದೇ ರೀತಿಯ ತಪ್ಪು ನಡೆದಿಲ್ಲ, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆಗಳು ಹೊರ ಬರುತ್ತಿಲೆ ಎಂದು ಎಂ.ಎಸ್ ರಾಮಯ್ಯ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಡಾ. ನರೇಂದ್ರ ನಾಥ್ ಸ್ಪಷ್ಟನೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com