ಡಿಸೆಂಬರ್ 29ರಂದು ಕುವೆಂಪು ಜಯಂತಿ ಆಚರಣೆಗೆ ಸರ್ಕಾರ ನಿರ್ಧಾರ

ಈ ವರ್ಷದಿಂದ ಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಸರ್ಕಾರ ಆಚರಿಸಲಿದ್ದು ಡಿಸೆಂಬರ್ 29ರಂದು...
ಈ ಹಿಂದೆ ಕುವೆಂಪು ಜಯಂತಿ ಆಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಮತ್ತು ಇತರರು
ಈ ಹಿಂದೆ ಕುವೆಂಪು ಜಯಂತಿ ಆಚರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಉಮಾಶ್ರೀ ಮತ್ತು ಇತರರು
Updated on
ಮೈಸೂರು: ಈ ವರ್ಷದಿಂದ ಕವಿ ಕುವೆಂಪು ಅವರ ಜನ್ಮ ದಿನಾಚರಣೆಯನ್ನು ಸರ್ಕಾರ ಆಚರಿಸಲಿದ್ದು ಡಿಸೆಂಬರ್ 29ರಂದು ವಿಶ್ವಮಾನವ ದಿನವನ್ನಾಗಿ ಆಚರಿಸಲಿದೆ.
ಎಲ್ಲಾ ಸಾಹಿತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು ಎಂದು ಮೈಸೂರು ಜಿಲ್ಲೆ ಸಹಾಯಕ ಆಯುಕ್ತ ಸಿಎಲ್ ಆನಂದ್ ತಿಳಿಸಿದ್ದಾರೆ.
ಇದೇ 29ರಂದು ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಕುವೆಂಪುರವರ ವಿಶ್ವ ಮಾನವ ಸಂದೇಶದ ಬಗ್ಗೆ ಮಾತನಾಡಲು ಪ್ರಮುಖ ಸಾಹಿತಿಯೊಬ್ಬರನ್ನು ಆಹ್ವಾನಿಸಲಾಗುವುದು. ಉಳಿದ ಎಲ್ಲಾ ಜಯಂತಿಗಳಂತೆ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಕೂಡ ಎಲ್ಲಾ ಸರ್ಕಾರಿ ನೌಕರರು ಭಾಗವಹಿಸಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com