ಬೆಂಗಳೂರು-ಮೈಸೂರು ನಡುವೆ ಹೊಸ ಬಸ್ ಸೇವೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು-ಬೆಂಗಳೂರು ನಡುವೆ ನಾನ್ ಸ್ಟಾಪ್ ಬಸ್ ಸಂಚಾರಕ್ಕೆ ಹೊಸ ಬಸ್ ಗಳ ಸೇವೆ ಆರಂಭಿಸಲಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು-ಬೆಂಗಳೂರು ನಡುವೆ ನಾನ್ ಸ್ಟಾಪ್ ಬಸ್ ಸಂಚಾರಕ್ಕೆ ಹೊಸ ಬಸ್ ಗಳ ಸೇವೆ ಆರಂಭಿಸಲಿದೆ.

ಅಡ್ವಾನ್ಸ್ ಡ್ ಮಲ್ಟಿ ಆ್ಯಕ್ಸೆಲ್ ಸ್ಕಾನಿಯಾ ನಾನ್ ಸ್ಟಾಪ್ ಬಸ್ ಗಳ ಸಂಚಾರ ಆರಂಭವಾಗಲಿದೆ. ಮೈಸೂರು ವಿಭಾಗದಲ್ಲಿದ್ದ 16 ವೋಲ್ವೋ ಬಸ್ ಗಳ ಪೈಕಿ ಆರು ವೋಲ್ವೋ ಬಸ್ ಗಳನ್ನು ಮೇಲ್ದರ್ಜೆಗೇರಿಸಲಾಗಿದೆ.

 ಮೈಸೂರಿನಿಂದ ಬೆಂಗಳೂರಿಗೆ ಈ ಬಸ್ 2 ಗಂಟೆ 40 ನಿಮಿಷದಲ್ಲಿ ತಲುಪಲಿದ್ದು, ಮಲ್ಟಿ ಆ್ಯಕ್ಸೆಲ್ ಬಸ್ ಹೆಚ್ಚು ಕಂಫರ್ಟ್ ಆಗಿದೆ ಎಂದಪ ಕೆಎಸ್ ಆರ್ ಟಿಸಿ ಮೈಸೂರು  ಗ್ರಾಮೀಣ ವಿಭಾಗದ ನಿಯಂತ್ರಕ ಮಹೇಶ್ ತಿಳಿಸಿದ್ದಾರೆ, ಬಸ್ ದರ 310 ರು ಆಗಿದೆ.

ಕಳೆದ 7 ವರ್ಷಗಳಿಂದ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಸೇವೆ ಇದ್ದು, ಶೀಘ್ರದಲ್ಲೇ ಹಳೇ ಬಸ್ ಗಳ ಬದಲಿಗೆ ಹೊಸ ಬಸ್ ಸಂಚರಿಸಲಿವೆ. ಪ್ರಸಕ್ತವಾಗಿ ಮೈಸೂರು ವಿಭಾಗ 10 ವೋಲ್ವೋ ಬಸ್ ಗಳನ್ನು ಸಂಚಾರಕ್ಕೆ ಬಿಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com