ರಾಜ್ಯದ ಕೋ- ಆಪರೇಟಿವ್ ಬ್ಯಾಂಕ್ ಗಳ ವಹಿವಾಟಿನ ಮೇಲೆ ಐಟಿ ಇಲಾಖೆ ಕಣ್ಣು

ರಾಜ್ಯ ಸಹಕಾರಿ ಬ್ಯಾಂಕ್ ಗಳ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಕೋ- ಆಪರೇಟಿವ್ ಬ್ಯಾಂಕ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯ ಸಹಕಾರಿ ಬ್ಯಾಂಕ್ ಗಳ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ  ಕೋ- ಆಪರೇಟಿವ್ ಬ್ಯಾಂಕ್ ಗಳಲ್ಲಿ ಸುಮಾರು 7,636 ಕೋಟಿ ಹಣ ಜಮೆಯಾಗಿದೆ.

ಐಟಿ ಅಧಿಕಾರಿಗಳು ಇದುವರೆಗೂ 14 ಕಡೆ ಪರಿಶೀಲನೆ ನಡೆಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೋ ಆಪರೇಟಿವ್ ಬ್ಯಾಂಕ್ ಗಳಲ್ಲಿ 59,373 ಕೋಟಿ ರೂ ವಹಿವಾಟು ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ  ನಿರ್ದೇಶಕ ರವಿಚಂದ್ರನ್ ರಾಮಸ್ವಾಮಿ ಹೇಳಿದ್ದಾರೆ.

ಇನ್ನೂ  ಕೋ- ಆಪರೇಟಿವ್ ಬ್ಯಾಂಕ್ ಗಳಲ್ಲಿ ಜಮೆಯಾಗಿರುವ 7,363 ಕೋಟಿ ಹಣದ ಬಗ್ಗೆ ಬ್ಯಾಂಕ್ ಗಳು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿಲ್ಲ. ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸದೇ ಬ್ಯಾಂಕ್ ಗಳು ತೆರಿಗೆ ವಂಚಿಸುವವರಿಗೆ ಸಹಾಯ ಮಾಡಿವೆಯೇ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಡೆಪಾಸಿಟ್ ಮಾಡಿರುವವರ ಖಾತೆ ಹಾಗೂ ಹೆಸರನ್ನು ಬಹಿರಂಗ ಗೊಳಿಸದ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಈಗಾಗಲೇ 14 ಬ್ಯಾಂಕ್ ಗಳ ವಿರುದ್ಧ ಕ್ರಮ ಜರುಗಿಸಿವೆ. ಅನಾಣ್ಯೀಕರಣ ನಂತರ ಎರಡು ಕೋ- ಆಪರೇಟಿವ್ ಬ್ಯಾಂಕ್ ಗಳ ಮೇಲೆ ಪರಿಶೀಲನೆ ನಡೆಸಿದಾಗ 2.000 ಕೋಟಿ ರು ಪತ್ತೆಯಾಗಿದೆ. ಇದರಲ್ಲಿ 1,600 ಕೋಟಿ ರು ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿಲ್ಲ,ಹೀಗಾಗಿ ಹಣ ಜಮೆ ಮಾಡಿದವರ ಹೆಸರು ಮತ್ತು ಖಾತೆ ವಿವರಗಳನ್ನು ಬಹಿರಂಗ ಪಡಿಸುವಂತೆ ಕೋ-ಆಪರೇಟಿವ್ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ.

ರಾಜ್ಯದಲ್ಲಿರುವ 285 ಕೋ- ಆಪರೇಟಿವ್ ಬ್ಯಾಂಕ್ ಗಳ ಪೈಕಿ 80 ಬ್ಯಾಂಕುಗಳು ಮಾತ್ರ ವಾರ್ಷಿಕ ಆದಾಯದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ನಾವು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾಗೆ ಮಾಹಿತಿ ನೀಡಿದ್ದು, ಈ ಕೋ- ಆಪರೇಟಿವ್ ಬ್ಯಾಂಕ್ ಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ. ಕರ್ನಾಟಕ ಕೋ- ಆಪರೇಟಿವ್ ಸೊಸೈಟಿ ರಿಜಿಸ್ಟ್ರಾರ್ ಅವರಿಗೆ ಪತ್ರ ಬರೆದಿದ್ದು, ಕ್ರಮ ಜರುಗಿಸುವಂತೆ ತಿಳಿಸಿದ್ದೇವೆ. ಮಾಹಿತಿ ನೀಡದ ಬ್ಯಾಂಕ್ ಗಳಿಗೆ ಪ್ರತಿದಿನ 500 ರು ದಂಡ ವಿಧಿಸುವಂತೆ ಸೂಚಿಸಲಾಗಿದೆ ಎಂದು ರಾಮಸ್ವಾಮಿ ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಖಲೆಯಂತೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ 116,44 ಕೋಟಿ ರು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಕಳೆದ ವರ್ಷ ಇದರ ಪ್ರಮಾಣ 27,55 ಕೋಟಿ ರು ಇತ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com