ಹೈದರಾಬಾದ್-ಕರ್ನಾಟಕ ಭಾಗದ ಯುವಕರಿಗೆ 12 ಸಾವಿರ ಉದ್ಯೋಗಾವಕಾಶ ಕರ್ನಾಟಕದ ಇ-ಫಾರ್ಮ್ ದೇಶಕ್ಕೆ ಮಾದರಿ: ವಜುಬಾಯಿ ವಾಲಾ

ಹಿಂದುಳಿದ ಹೈದರಾಬಾದ್ -ಕರ್ನಾಟಕ ಭಾಗದ ಯುವಕರಿಗೆ ಈ ವರ್ಷ ನ್ಯಾಯಸಮ್ಮತವಾಗಿ ಸರ್ಕಾರಿ ಉದ್ಯೋಗ ದೊರಕಲಿದೆ. ಸಂವಿಧಾವ ಪರಿಚ್ಛೇದ 371(ಜೆ) ಪ್ರಕಾರ ಹೈದರಾಬಾದ್...
ಹೈದರಾಬಾದ್-ಕರ್ನಾಟಕ ಭಾಗದ ಯುವಕರಿಗೆ 12 ಸಾವಿರ ಉದ್ಯೋಗಾವಕಾಶ ಕರ್ನಾಟಕದ ಇ-ಫಾರ್ಮ್ ದೇಶಕ್ಕೆ ಮಾದರಿ: ವಜುಬಾಯಿ ವಾಲಾ

ಬೆಂಗಳೂರು: ಹಿಂದುಳಿದ ಹೈದರಾಬಾದ್ -ಕರ್ನಾಟಕ ಭಾಗದ ಯುವಕರಿಗೆ ಈ ವರ್ಷ ನ್ಯಾಯಸಮ್ಮತವಾಗಿ ಸರ್ಕಾರಿ ಉದ್ಯೋಗ ದೊರಕಲಿದೆ.

ಸಂವಿಧಾವ ಪರಿಚ್ಛೇದ 371(ಜೆ) ಪ್ರಕಾರ ಹೈದರಾಬಾದ್ ಕರ್ನಾಟಕ ಭಾಗದಲ್ಲಿ 12 ಸಾವಿರ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತುಂಬಲು ಸರ್ಕಾರ ಮುಂದಾಗಿದೆ. ಖಾಲಿ ಇರುವ 30 ಸಾವಿರ ಹುದ್ದೆಗಳಲ್ಲಿ 9 ಸಾವಿರದ 450 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಈ ಎಲ್ಲಾ ಅಂಕಿಅಂಶಗಳನ್ನು ನಿನ್ನೆ ರಾಜ್ಯಪಾಲ ವಜುಭಾಯಿ ವಾಲಾ ವಿಧಾನಮಂಡಲದ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ರಾಜ್ಯಪಾಲರ ಭಾಷಣ ಸಿದ್ಧರಾಮಯ್ಯ ಸರ್ಕಾರದ ವರದಿ ಕಾರ್ಡು ರೀತಿಯಲ್ಲಿ ಇದ್ದಿತ್ತು.

ರಾಜ್ಯದ 157 ಎಪಿಎಂಸಿ ಮಾರುಕಟ್ಟೆಗಳ ಮೂಲಕ ಕೃಷಿ ಉತ್ಪನ್ನಗಳನ್ನು ಆನ್ ಲೈನ್ ಮೂಲಕ ಮಾರಾಟ ಮಾಡುವ ವ್ಯವಸ್ಥೆಗೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ಸಿಕ್ಕಿದ್ದು, ಕರ್ನಾಟಕದ ಮಾದರಿಯನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ ಎಂದು ರಾಜ್ಯಪಾಲರು ತಿಳಿಸಿದರು. 31 ಪುಟಗಳ ರಾಜ್ಯಪಾಲರ ಭಾಷಣ ಸುಮಾರು ಎಲ್ಲಾ ವಲಯಗಳ ಬಗ್ಗೆಯೂ ಬೆಳಕು ಚೆಲ್ಲಿತ್ತು. ಇಂಧನ ವಲಯದಲ್ಲಿ, 800 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಯೆರಮರೂಸ್ ಥರ್ಮಲ್ ವಿದ್ಯುತ್ ಘಟಕದ ಮೊದಲ ಘಟಕ ಮತ್ತು 700 ಮೆಗಾವ್ಯಾಟ್ ಸಾಮರ್ಥ್ಯದ ಬಳ್ಳಾರಿ ಥರ್ಮಲ್ ವಿದ್ಯುತ್ ಘಟಕದ ಮೂರನೇ ಘಟಕ ಸದ್ಯದಲ್ಲಿಯೇ ಆರಂಭವಾಗಲಿದೆ.

ಕೈಗಾರಿಕಾ ವಲಯದಲ್ಲಿ, ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಬೀದರ್ ನ ಕೊಲ್ಹಾರ್ ಕೈಗಾರಿಕಾ ವಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮತ್ತು ದೇವನಹಳ್ಳಿಯ ಅಂತರಿಕ್ಷಯಾನ ಪಾರ್ಕ್ ನಲ್ಲಿ ಅಂತರಿಕ್ಷಯಾನ ಹಾರಾಟ ಸೌಲಭ್ಯ ಸ್ಥಾಪನೆ ಒಳಗೊಂಡಿದೆ. ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಇ-ಕಾರ್ಮಿಕ ಪೋರ್ಟಲ್ ನ್ನು ತರಲಾಗಿದೆ.

ಇತರ ಅನುಮೋದನೆಗಳು:
- ಕಲಬುರ್ಗಿಯ ವೈದ್ಯಕೀಯ ಕಾಲೇಜು ಆವರಣದಲ್ಲಿ ಜಯದೇವ ಹೃದ್ರೋಗ ಘಟಕ ಸ್ಥಾಪನೆಗೆ ಅನುಮೋದನೆ.
- ರಾಜ್ಯದಲ್ಲಿ 145 ಹೊಸ ಕೋರ್ಟ್ ಗಳ ಸ್ಥಾಪನೆ.
-2015-16ರಲ್ಲಿ ಮಾಹಿತಿ ತಂತ್ರಜ್ಞಾನದ ರಫ್ತು 2 ಲಕ್ಷದ 20 ಕೋಟಿಗೆ ಏರಿಕೆ
-ಉದ್ಯಮಿಗಳನ್ನು ಪ್ರೋತ್ಸಾಹಿಸಲು ರಾಜ್ಯಾದ್ಯಂತ ಇರುವ ಎಂಜಿನಿಯರಿಂಗ್ ಕಾಲೇಜುಗಳಲ್ಲಿ 9 ಇನ್ಕ್ಯುಬೇಶನ್ ಕೇಂದ್ರಗಳ ಸ್ಥಾಪನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com