ತೀವ್ರ ಬರಗಾಲದಿಂದ ನರಳುತ್ತಿದ್ದ ಗ್ರಾಮ ಇದೀಗ ಇಡೀ ದೇಶಕ್ಕೆ ಮಾದರಿ!

ಬರಕ್ಕೆ ತುತ್ತಾಗಿ ಸಾಕಷ್ಟು ಸಮಸ್ಯೆ ಎದುರಿಸಿ, ಹನಿ ನೀರಿನ ಮೌಲ್ಯವರಿತ ಗ್ರಾಮವೊಂದು ಇದೀಗ ದೇಶಕ್ಕೆ ಮಾದರಿ ಗ್ರಾಮವಾಗಿ ನಿರ್ಮಾಣವಾಗಿದೆ...
ತೀವ್ರ ಬರಗಾಲದಿಂದ ನರಳುತ್ತಿದ್ದ ಗ್ರಾಮ ಇದೀಗ ಇಡೀ ದೇಶಕ್ಕೆ ಮಾದರಿ!
ತೀವ್ರ ಬರಗಾಲದಿಂದ ನರಳುತ್ತಿದ್ದ ಗ್ರಾಮ ಇದೀಗ ಇಡೀ ದೇಶಕ್ಕೆ ಮಾದರಿ!

ಮಂಗಳೂರು: ಬರಕ್ಕೆ ತುತ್ತಾಗಿ ಸಾಕಷ್ಟು ಸಮಸ್ಯೆ ಎದುರಿಸಿ, ಹನಿ ನೀರಿನ ಮೌಲ್ಯವರಿತ ಗ್ರಾಮವೊಂದು ಇದೀಗ ದೇಶಕ್ಕೆ ಮಾದರಿ ಗ್ರಾಮವಾಗಿ ನಿರ್ಮಾಣವಾಗಿದೆ.

ಮಂಗಳೂರಿನ ಬಂಟ್ವಾಳ ತಾಲೂಕಿನ ಇಡ್ಕಿಡು ಗ್ರಾಮ ಬದಲಾವಣೆ ಕಂಡು ಇದೇ ಜೂನ್ ತಿಂಗಳಿಗೆ 15 ವರ್ಷಗಳಾಗಿವೆ. 2001ರಲ್ಲಿ ತೀವ್ರ ಬರ ಸಮಸ್ಯೆಯೆದುರಿಸುತ್ತಿದ್ದ ಈ ಗ್ರಾಮದ ನೀರಿನ ಮೌಲ್ಯವನ್ನು ಅರಿತಿತ್ತು.

ಪಶು ವೈದ್ಯರಾಗಿದ್ದ ಡಾ.ಕೃಷ್ಣ ಭರ್ ಕಂಕೋಡಿ ಅವರು ಬರಕ್ಕೆ ತುತ್ತಾಗಿದ್ದ ಗ್ರಾಮವನ್ನು ಬದಲಾವಣೆ ಮಾಡಲು ಮುಂದಾಗಿದ್ದರು, ಸರ್ಕಾರದ ನೆರವಿಗೆ ಕಾಯದೆಯೇ ಗ್ರಾಮದ ಹಿರಿಯರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದರು.

ನೀರು ಸಂರಕ್ಷಣಾ ತಜ್ಞರಾದ ಶ್ರೀ ಪಾದ್ರೆ ಅವರನ್ನು ಇಡ್ಕಿಡು ಗ್ರಾಮಕ್ಕೆ ಕರೆತಂದ ಅವರು ಸಮಸ್ಯೆಗೆ ಪರಿಹಾರ ಕಂಡುಕೊಂಡರು. ಇದರಂತೆ ಭೂಮಿಯ ಅಂತರ್ಜಲ ಕಾಪಾಡುವತ್ತ ಗಮನ ಹರಿಸಿದರು. ಅಲ್ಲದೆ, ತಜ್ಞರ ಸಲಹೆಯಂತೆ ಪ್ರತೀ ಮನೆಯಲ್ಲಿಯೂ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಮಾಡಲು ಅರಿವು ಮೂಡಿಸಲಾಗಿತ್ತು. ಇದರಂತೆ ಕೃಷ್ಣ ಭಟ್ ಅವರು ಪ್ರತೀ ದಿನ ಭಜನೆಯೊಂದನ್ನು ಏರ್ಪಡಿಸುತ್ತಿದ್ದು, ಜನರಿಗೆ ನೀರಿನ ಮೌಲ್ಯವನ್ನು ಬೋಧನೆ ಮಾಡುತ್ತಿದ್ದಾರೆ.

ನೀರಿನ ಸಮಸ್ಯೆ ಕುರಿತಂತೆ ವೈದ್ಯ ಭಟ್ ಅವರು ಯುವಕರ ಗುಂಪೊಂದನ್ನು ನೇಮಿಸಿಕೊಂಡು ಗ್ರಾಮದಲ್ಲಿ ಸಮೀಕ್ಷೆಯೊಂದನ್ನು ನಡೆಸಿದ್ದಾರೆ. 1,700 ಮನೆಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆ ವೇಳೆ 228 ರೈತರು ನೀರಿನ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಈ ಎಲ್ಲಾ ಮನೆಗಳು ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು ಗ್ರಾಮದಲ್ಲಿ ಹೆಚ್ಚಿನ ಬದಲಾವಣೆಯನ್ನು ತಂದಂತಾಗಿದೆ.  

ಸಾಕಷ್ಟು ವರ್ಷಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದ ಗ್ರಾಮ ಇದೀಗ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಿಕೊಂಡಿದೆ. ಈ ಮೂಲಕ ಧನಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಇಡ್ಕಿಡು ಗ್ರಾಮ ಮಾದರಿ ಗ್ರಾಮವಾಗಿ ಬದಲಾಗಿದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಇದೀಗ ಗ್ರಾಮಕ್ಕೆ ಭೇಟಿ ನೀಡುವವರ ಗಮನ ಸೆಳೆಯುತ್ತಿದೆ ಎಂದು ವೈದ್ಯ ಕೃಷ್ಣ ಭಟ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com