ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿಯಲ್ಲಿ ಗ್ರೇಸ್ ಅಂಕಗಳಿರುವುದಿಲ್ಲ: ಪಿಯು ಇಲಾಖೆ

ಪಿಯುಸಿ ಪರೀಕ್ಷೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕದಿಂದ ಹೊರಗಿನ ಪ್ರಶ್ನೆಗಳು ಮತ್ತು ತಪ್ಪು ಪ್ರಶ್ನೆಗಳ ಉತ್ತರಕ್ಕೆ ...
ಪದವಿಪೂರ್ವ ಶಿಕ್ಷಣ ಇಲಾಖೆ
ಪದವಿಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು: ಪಿಯುಸಿ ಪರೀಕ್ಷೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕದಿಂದ ಹೊರಗಿನ ಪ್ರಶ್ನೆಗಳು ಮತ್ತು ತಪ್ಪು ಪ್ರಶ್ನೆಗಳ ಉತ್ತರಕ್ಕೆ ಗ್ರೇಸ್ ಅಂಕಗಳನ್ನು ನೀಡುವ ಪದ್ಧತಿ ಇರುವುದಿಲ್ಲ. ಈ ವರ್ಷ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಗಣಿತ ವಿಷಯಕ್ಕೆ ಗ್ರೇಸ್ ಅಂಕಗಳನ್ನು ನೀಡಿ ಉಂಟಾದ ಸಮಸ್ಯೆ ಪುನರಾವರ್ತನೆಯಾಗದಿರಲು ಇತ್ತೀಚೆಗೆ ನಡೆದ ಪದವಿಪೂರ್ವ ಶಿಕ್ಷಣ ಇಲಾಖೆಯ ಸಭೆಯಲ್ಲಿ ತೀರ್ಮಾನಿಸಲಾಯಿತು.
 ಈ ಬಗ್ಗೆ  ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಪಿಯು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು,'' ಔಟ್ ಆಫ್ ಸಿಲೆಬಸ್ ಮತ್ತು ತಪ್ಪು ಪ್ರಶ್ನೆಗಳಿಗೆ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಇರುವುದಿಲ್ಲ. ಇದನ್ನು ನಾವು ನೀತಿ ಎಂದು ಮಾಡಿದಾಗ ಯಾರೂ ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಪರೀಕ್ಷೆಯಲ್ಲಿ ಔಟ್ ಆಫ್ ಸಿಲೆಬಸ್ ಪ್ರಶ್ನೆ ಬಂದರೆ ಆ ಪ್ರಶ್ನೆಗಳನ್ನು ತಯಾರಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಪಠ್ಯದಿಂದ ಹೊರಗಿನ ಪ್ರಶ್ನೆಗಳು ಮತ್ತು ತಪ್ಪು ಪ್ರಶ್ನೆಗಳಿಗೆ ಉತ್ತರಿಸದಂತೆ ವಿದ್ಯಾರ್ಥಿಗಳಿಗೆ ನಾವು ಸಲಹೆ ನೀಡುತ್ತೇವೆ. ಗ್ರೇಸ್ ಮಾರ್ಕ್ಸ್ ಸಿಗುತ್ತದೆ ಎಂದು ಇಂತಹ ಪ್ರಶ್ನೆಗಳಿಗೆ ಉತ್ತರಿಸುವವರು ಇರುತ್ತಾರೆ. ಆದರೆ ಮುಂದಿನ ವರ್ಷದಿಂದ ಅಂತಹ ಪ್ರಶ್ನೆಗಳ ಉತ್ತರಕ್ಕೆ ಅಂಕ ನೀಡುವುದಿಲ್ಲ ಎಂದಿದ್ದಾರೆ.
ಇಲಾಖೆ ಮಾಡರೇಶನ್ ಗೆ ಕೂಡ ಅವಕಾಶ ನೀಡಲು ನಿರ್ಧಾರ ತೆಗೆದುಕೊಂಡಿದೆ. ತೇರ್ಗಡೆ ಹೊಂದಲು ಶೇಕಡಾವಾರು ಅಂಕಗಳನ್ನು ಆಂತರಿಕವಾಗಿ ಮತ್ತು ರಹಸ್ಯವಾಗಿ ಗ್ರೇಸ್ ಅಂಕಗಳನ್ನು ಸಾಮೂಹಿಕವಾಗಿ ನೀಡುವುದಕ್ಕೆ ಮಾಡರೇಶನ್ ಮಾದರಿ ಎಂದು ಕರೆಯುತ್ತಾರೆ. ಉದಾಹರಣೆಗೆ ಸುಮಾರು 3 ಸಾವಿರ ವಿದ್ಯಾರ್ಥಿಗಳು ಗಣಿತ ಪರೀಕ್ಷೆಯಲ್ಲಿ ಪಾಸಾಗಲು ಮೂರು ಅಂಕಗಳು ಬೇಕೆಂದಿಟ್ಟುಕೊಳ್ಳಿ. ಎಲ್ಲಾ ವಿದ್ಯಾರ್ಥಿಗಳಿಗೆ ಮೂರು ಅಂಕ ನೀಡಿ ಅವರನ್ನು ತೇರ್ಗಡೆ ಮಾಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಅಂಕಗಳ ಗೊಂದಲ: ಗ್ರೇಸ್ ಅಂಕಗಳನ್ನು ನೀಡುವುದನ್ನು 2015ರವರೆಗೆ ಗೌಪ್ಯವಾಗಿಡಲಾಗಿತ್ತು. ಯಾವಾಗ ಅದನ್ನು ಬಹಿರಂಗಗೊಳಿಸಲಾಯಿತೋ ವಿದ್ಯಾರ್ಥಿಗಳು ಮತ್ತು ಪೋಷಕರು ಬೇಡಿಕೆ ಮುಂದಿಡಲು ಆರಂಭಿಸಿದರು. ಈ ವರ್ಷದ ಗಣಿತ ಪರೀಕ್ಷೆಯಲ್ಲಿ 21 ಔಟ್ ಆಫ್ ಸಿಲೆಬಸ್ ಪ್ರಶ್ನೆಗಳಿದ್ದವು. ಹಾಗಾಗಿ ಗ್ರೇಸ್ ಮಾರ್ಕ್ಸ್ ನೀಡಬೇಕೆಂದು ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟಿದ್ದರು. ಈ ಬಗ್ಗೆ ಇಲಾಖೆ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಅದು ತನ್ನ ವರದಿಯನ್ನು ಮಂಡಿಸಿ ಗ್ರೇಸ್ ಅಂಕಗಳ ಅಗತ್ಯವಿಲ್ಲ ಎಂದು ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com