ಕರ್ನಾಟಕ: ಹತ್ತು ವರ್ಷದಲ್ಲಿ 122 ಪೊಲೀಸರ ಆತ್ಮಹತ್ಯೆ

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ 2003 ರಿಂದ 2013ರ ವರೆಗೆ ಸುಮಾರು 10 ವರ್ಷಗಳಲ್ಲಿ 122 ಪೊಲೀಸರು ಕರ್ನಾಟಕದಲ್ಲಿ ಸಾವಿಗೆ ಶರಣಾಗಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಒಂದೇ ವಾರದಲ್ಲಿ ರಾಜ್ಯದ ಇಬ್ಬರು ಡಿವೈಎಸ್ ಪಿ ಗಳು ಆತ್ಮಹತ್ಯೆಗೆ ಶರಣಾಗಿರುವುದು ಪೊಲೀಸರ ಆತ್ಮ ಸ್ಥೈರ್ಯದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಪ್ರಕಾರ 2003 ರಿಂದ 2013ರ ವರೆಗೆ ಸುಮಾರು 10 ವರ್ಷಗಳಲ್ಲಿ 122 ಪೊಲೀಸರು ಕರ್ನಾಟಕದಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಿದೆ.

ಪ್ರತಿ ವರ್ಷ ಸುಮಾರು 12 ಪೊಲೀಸರು ಆತ್ಮಹತ್ಯೆ  ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ 2015ರ ಅಂಕಿ ಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ, 2014 ನೇ ವರ್ಷದಲ್ಲಿ ಎಷ್ಟು ಪೊಲೀಸರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದರ ರಾಜ್ಯವಾರು ಮಾಹಿತಿ ಸಿಕ್ಕಿಲ್ಲ.

2007 ರಲ್ಲಿ 27 ಪೊಲೀಸರು ಸಾವಿಗೆ ಶರಣಾಗಿದ್ದಾರೆ. ಇದು ದಶಕದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರು ಆತ್ಮಹತ್ಯೆಗೆ ಶರಣಾಗಿರುವ ವರ್ಷವಾಗಿದೆ.

ಇತ್ತೀಚೆಗೆ ನಡೆದ ಇಬ್ಬರು ಡಿವೈಎಸ್ ಪಿ ಗಳ ಆತ್ಮಹತ್ಯೆ ಪ್ರಕರಣದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ಅಧಿಕಾರವಧಿಯಲ್ಲಿ ಅಂದರೆ 2012 ರಲ್ಲಿ ಸುಮಾರು 17 ಅಧಿಕಾರಿಗಳು ಆತ್ಮಹತ್ಯೆಗೆ ಶಕಮಾಗಿದ್ದು ದುರಂತ.

ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಗಳ ಪ್ರಕಾರ ಸುಮಾರು 35 ರಿಂದ 45 ವರ್ಷದ ವಯೋಮಾನದ ಅಧಿಕಾರಿಗಳು ಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ಈ ವಯೋಮಾನದ 42 ಅಧಿಕಾರಿಗಳು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿಸಿದೆ,

ರಾಜಕೀಯ ಒತ್ತಡ, ದೀರ್ಘಾವಧಿ ಕೆಲಸ, ವಿಐಪಿಗಳ ಡ್ಯೂಟಿ, ಕಡಿಮೆ ವೇತನ ಹಾಗೂ ಹತಾಶೆಯಿಂದ ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸರು ಅತಿ ಹೆಚ್ಚು ಸಾಮರ್ಥ್ಯವುಳ್ಳವರು, ಶಕ್ತಿ ವಂತರು ಎಂದು ಜನ ಸಾಮಾನ್ಯರ ನಂಬಿಕೆಯಾಗಿದೆ.ಆದರೆ ಪೊಲೀಸರು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜನತೆಗೆ ಪೊಲೀಸರ ಬಗ್ಗೆ ಋಣಾತ್ಮಕ ಅಭಿಪ್ರಾಯ ಮೂಡುತ್ತದೆ. ಕೆಲಸಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ಪೊಲೀಸರ ಸಮಸ್ಯೆಗಳನ್ನು ಸರ್ಕಾರ ಯಾಂತ್ರೀಕತ ಒಳ್ಳೆಯ ರೀತಿಯಲ್ಲಿ ಪರಿಹರಿಸಬೇಕು ಎಂದು ನಿಮ್ಹಾನ್ಸ್ ನಿರ್ದೇಶಕ ಎನ್ ಗಂಗಾಧರ್ ಅಭಿಪ್ರಾಯ ಪಟ್ಟಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯಲ್ಲಿ 25 ಸಾವಿರ ಪೊಲೀಸರ ಸಿಬ್ಬಂದಿ ಕೊರತೆಯಿದೆ. ಮಾನವ ಹಕ್ಕುಗಳ ನಿಯಮ ಉಲ್ಲಂಘಿಸಿ, ಪೊಲೀಸರು ಸುಮಾರು 12 ರಿಂದ 14 ಗಂಟೆ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ತಮ್ಮ ಕುಟುಂಬದವರ ಜೊತೆ ಸಮಯ ಕಳೆಯಲು ಆಗುತ್ತಿಲ್ಲ, ಹಾಗಾಗಿ ಪೊಲೀಸ್ ಇಲಾಖೆಯಲ್ಲಿ ವಿಚ್ಛೇದಮ ಪ್ರಮಾಣ ಕೂಡ ಹೆಚ್ಚಾಗುತ್ತಿದೆ ಎಂದು ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ.

ಹಲವು ಪೊಲೀಸರಿಗೆ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ರಾಜಕಾರಣಿಗಳು ತೇಜೋವಧೆ ಮಾಡುತ್ತಾರೆ. ಒಳ್ಳೆಯ ಕೆಲಸಗಳಿಗೆ ಮೆಚ್ಚುಗೆ ಸಿಗುವುದಿಲ್ಲ, ಒಂದು ವೇಳೆ ಹಿರಿಯ ಅಧಿಕಾರಿಗಳ ಆದೇಶವನ್ನ ಅನುಸರಿಸದಿದ್ದರೇ ವರ್ಗಾವಣೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com