ತುಮಕೂರು ಚರ್ಚ್ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಪ್ರತಿಭಟನೆಗೆ ಕ್ರಿಶ್ಚಿಯನ್ನರು ಚಿಂತನೆ

ತುಮಕೂರಿನ ಚರ್ಚ್ ಮೇಲೆ ದುಷ್ಕರ್ಮಿಯೊಬ್ಬ ಗುರುವಾರ ಬೆಳಗಿನ ಜಾವ ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ...
ಘಟನಾ ಸ್ಥಳ ಪರಿಶೀಲನೆ ನಡೆಸುತ್ತಿರುವ ಐಡಿಪಿ ಸೀಮಂತ್ ಕುಮಾರ್ ಸಿಂಗ್
ಘಟನಾ ಸ್ಥಳ ಪರಿಶೀಲನೆ ನಡೆಸುತ್ತಿರುವ ಐಡಿಪಿ ಸೀಮಂತ್ ಕುಮಾರ್ ಸಿಂಗ್

ತುಮಕೂರು: ತುಮಕೂರಿನ ಚರ್ಚ್ ಮೇಲೆ ದುಷ್ಕರ್ಮಿಯೊಬ್ಬ ಗುರುವಾರ ಬೆಳಗಿನ ಜಾವ ಪೆಟ್ರೋಲ್ ಬಾಂಬ್ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ.
 
ನಗರದ ಶಿರಾಗೇಟ್ ಹತ್ತಿರ ಇರುವ ಯೂನಿಯನ್ ಕ್ರಿಶ್ಚಿಯನ್ ಕಾಲೇಜು ಆವರಣದಲ್ಲಿರುವ ಟಾಮ್ಲಿನ್ಸನ್ ಚರ್ಚ್ ಮೇಲೆ ದುಷ್ಕರ್ಮಿ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾನೆ.

ದಾಳಿಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುಷ್ಕರ್ಮಿಯೊಬ್ಬ ಮೊದಲು ಚರ್ಚ್ ನ ಮುಖ್ಯದ್ವಾರದ ಬಳಿ ಬಂದಿದ್ದಾನೆ. ಈ ವೇಳೆ ಗೇಟ್ ತೆಗೆಯಲು ಯತ್ನಿಸಿದ್ದಾನೆ. ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಡಭಾಗದಲ್ಲಿರುವ ಇನ್ನೊಂದು ಸಣ್ಣ ಗೇಟ್ ಹತ್ತಿರ ಹೋಗಿದ್ದಾನೆ. ಈ ಗೇಟ್ ಗೂ ಬೀಗ ಹಾಕಿದ್ದ ಹಿನ್ನೆಲೆಯಲ್ಲಿ ಮತ್ತೆ ಮುಖ್ಯದ್ವಾರದ ಬಳಿ ಬಂದಿರುವ ದುಷ್ಕರ್ಮಿ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾನೆ.

ಚರ್ಚ್ ಸಮೀಪವೇ ಕೆಲಸಗಾರ ಅನೋಕಾ ಅವರ ಮನೆಯಿದ್ದು, ಬಿಯರ್ ಬಾಟಲಿ ಎಸೆದ ಶಬ್ಧ ಕೇಳಿ ಚರ್ಚ್ ಬಳಿ ಬಂದಿದ್ದಾರೆ. ಈ ವೇಳೆ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.  

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ತುಮಕೂರು ಜಿಲ್ಲೆ ಉಪ ಆಯುಕ್ತ ಕೆ.ಪಿ. ಮೋಹನ್ ರಾಜ್ ಅವರು, ಘಟನೆ ದುರಾದೃಷ್ಟಕರ. ಚರ್ಚ್ ಗಳಿಗೆ ರಕ್ಷಣೆ ನೀಡುವುದಾಗಿ ಹೇಳಿದ್ದಾರೆ.

ಪೋಲೀಸರು 48 ಗಂಟೆಗಳೊಗಾಗಿ ಆರೋಪಿಯನ್ನು ಹುಡುಕಿ ಬಂಧನಕ್ಕೊಳಪಡಿಸಿಲಿದ್ದಾರೆ. ತನಿಖೆ ನಡೆಸಲು ಈಗಾಗಲೇ 5 ತಂಡಗಳನ್ನು ನೇಮಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಹೇಳಿದ್ದಾರೆ.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಅವರು ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಪಡೆದುಕೊಂಡಿದ್ದಾರೆ.

ಇನ್ನು ಘಟನೆಗೆ ಕ್ರಿಶ್ಚಿಯನ್ ಸಮುದಾಯದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com