3/1 ರಷ್ಟು ಬಾಲ್ಯವಿವಾಹ ಮುರಿದು ಬೀಳುತ್ತವೆ: ಸಮೀಕ್ಷೆ

ಬಲವಂತವಾಗಿ ಮಾಡುವ ಬಾಲ್ಯ ವಿವಾಹಗಳಲ್ಲಿ ಮೂರು ಮಹಿಳೆಯರಲ್ಲಿ ಒಬ್ಬರ ಬಾಲ್ಯವಿವಾಹ ಮುರಿದು ಬೀಳುತ್ತದೆ ಎಂದು ಮಕ್ಕಳ ಹಕ್ಕುಗಳು ಮತ್ತು ನೀವು ಎಂಬ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಲವಂತವಾಗಿ ಮಾಡುವ ಬಾಲ್ಯ ವಿವಾಹಗಳಲ್ಲಿ ಮೂರು ಮಹಿಳೆಯರಲ್ಲಿ ಒಬ್ಬರ ಬಾಲ್ಯವಿವಾಹ ಮುರಿದು ಬೀಳುತ್ತದೆ ಎಂದು ಮಕ್ಕಳ ಹಕ್ಕುಗಳು ಮತ್ತು ನೀವು ಎಂಬ ಎನ್ ಜಿಒ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಶೇ. 47 ರಷ್ಟು ಬಾಲ್ಯ ವಿವಾಹಗಳು 14 ನೇ ವಯಸ್ಸಿನಲ್ಲೇ ನಡೆಯುತ್ತವೆ.  ಹೀಗಾಗಿ ಬಾಲ್ಯ ವಿವಾಹಗಳು ಮುರಿದು ಬೀಳುತ್ತವೆ, ಬಾಲ್ಯ ವಿವಾಹವಾಗುವ ಗಂಡಂದಿರಲ್ಲಿ ಶೇ 29 ರಷ್ಟು ಅನಕ್ಷರಸ್ಥರು.

ಬಾಲ್ಯ ವಿವಾಹ ಕುರಿತು ಸಾಮಾಜಿಕ ಪರಿವರ್ತನಾ ಜನಾಂದೋಲನ ಹಾಗೂ ‘ಮಕ್ಕಳ ಹಕ್ಕುಗಳು ಮತ್ತು ನೀವು’ ಸಂಘಟನೆ (ಕ್ರೈ) ಜತೆಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದಿವೆ.


ಉತ್ತರ ಕರ್ನಾಟಕದಲ್ಲಿ  ಬಾಲ್ಯ ವಿವಾಹ ಹೆಚ್ಚಾಗಿ ಕಂಡು ಬಂದಿದೆ. ರಾಯಚೂರು, ಕಲಬುರ್ಗಿ, ಬೆಳಗಾವಿ, ಹಾವೇರಿ, ದಾವಣಗೆರೆ ಹಾಗೂ ಬೆಂಗಳೂರು ನಗರ ಜಿಲ್ಲೆಗಳ 93 ಗ್ರಾಮಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಬಾಲ್ಯ ವಿವಾಹಗಳಲ್ಲಿ ಶೇ 75ರಷ್ಟು ಪ್ರಮಾಣ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗದಲ್ಲೇ ನಡೆದಿವೆ. ವಿವಾಹದ ಬಂಧನಕ್ಕೆ ಒಳಗಾದ ಶೇ 82ರಷ್ಟು ಬಾಲಕಿಯರು ಹತ್ತನೇ ತರಗತಿವರೆಗೂ ಓದಿಲ್ಲ!

11ರಿಂದ 13ರ ವಯೋಮಾನದಲ್ಲಿ ಮದುವೆ ಆಗಿರುವ ಬಾಲಕಿಯರಲ್ಲಿ ಬಾಲ್ಯದಲ್ಲೇ ವಿಚ್ಛೇದನ ಪಡೆದ ಇಲ್ಲವೆ ವಿಧವೆಯಾದ ಪ್ರಮಾಣ ಶೇ 39ರಷ್ಟಿದೆ. ಈ ವಿದ್ಯಮಾನ ಮಾನವ ಸಾಗಾಣಿಕೆಗೂ ದಾರಿ ಮಾಡಿಕೊಟ್ಟಿದೆ ಎನ್ನುತ್ತದೆ ಸಮೀಕ್ಷಾ ವರದಿ.

ಅನಕ್ಷರತೆ, ಬಡತನ, ಸಾಂಪ್ರದಾಯಿಕ ಕಟ್ಟುಪಾಡುಗಳು ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣಗಳಾಗಿವೆ. ಎಲ್ಲ ಜಾತಿಗಳಲ್ಲಿ  ಈ ಪಿಡುಗು ಜಾರಿಯಲ್ಲಿದೆ.  ಶೇ 80ರಷ್ಟು ವಿವಾಹಗಳನ್ನು ಧಾರ್ಮಿಕ ಪಾತ್ರಧಾರಿಗಳಿಂದ ಶಾಸ್ತ್ರೋಕ್ತ ರೀತಿಯಲ್ಲಿ ನಡೆಸಲಾಗುತ್ತಿದೆ ಎಂದು ವರದಿ ಬೆಳಕು ಚೆಲ್ಲಿದೆ.

ಮದುವೆಗೆ ಬಡತನ ಕಾರಣ ಎಂದು ಶೇ 67ರಷ್ಟು ಜನರು ಹೇಳಿಕೊಂಡಿದ್ದಾರೆ. ಪೋಷಕರ ಶಿಕ್ಷಣಕ್ಕೂ ಹೆಣ್ಣುಮಕ್ಕಳ ಮದುವೆಯ ವಯಸ್ಸಿಗೂ ನೇರ ಸಂಬಂಧ ಇದೆ.

ಚಿಕ್ಕ ವಯಸ್ಸಿನಲ್ಲೇ ತಾಯಿಯಾಗುವ ಈ ಹೆಣ್ಣು ಮಕ್ಕಳು ಮುಂದೆ ಹೆಚ್ಚಿನ ತೊಂದರೆ ಅನುಭವಿಸುತ್ತಾರೆ. ಶಾಲೆಯೊಂದೇ ಹೆಣ್ಣು ಮಗುವಿಗೆ ಸರಿಯಾದ ರಕ್ಷಣಾ ಕೇಂದ್ರವಾಗಿದೆ. ಉತ್ತಮ ಶಿಕ್ಷಣದಿಂದ ಇಂಥ ಬಾಲ್ಯವಿವಾಹ ತಪ್ಪಿಸಬಹುದಾಗಿದೆ ಎಂದು ಎನ್ ಜಿ ಒ ನಿರ್ದೇಶಕಿ ಸುಮಾ ರವಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com