
ಬೆಂಗಳೂರು: ನೀರಾವರಿ ಉದ್ದೇಶಕ್ಕಾಗಿ ಜುಲೈ 28 ರಂದು ಮಂಡ್ಯ ಜಿಲ್ಲೆಗೆ ಕೃಷ್ಣರಾಜ ಸಾಗರ ಅಣೆಕಟ್ಟಿನಿಂದ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಖಾರೀಫ್ ಬೆಳೆಗಳಾದ ರಾಗಿ ಮತ್ತು ಭತ್ತಗಳನ್ನು ಬೆಳೆಯಲು ನೀರು ಬಿಡುವಂತೆ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಮನವಿ ಸಲ್ಲಿಸಿದರು. ಈ ವೇಳೆ ವಿವಿಧ ಸಂಘಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದ ಶಿವಕುಮಾರ್ ಕೆಆರ್ ಎಸ್ ನಲ್ಲಿ ಸದ್ಯ 11.7 ಟಿಎಂಸಿ ಅಡಿ ನೀರು ಇದೆ. ಮುಂದಿನ 8ರಿಂದ 10 ದಿನಗಳಲ್ಲಿ 7 ಟಿಎಂಸಿ ಅಡಿ ನೀರು ಜಲಾಶಯ ಸೇರುವ ಸಾಧ್ಯತೆ ಇದೆ. ಹೀಗಾಗಿ ನೀರಿನ ಮಟ್ಟ ಆಧರಿಸಿ ನೀರು ಬಿಡುಗಡೆ ಮಾಡಲು ಆರಂಭಿಸುವುದಾಗಿ ಅವರು ತಿಳಿಸಿದರು.
ಮುಂದಿನ 20 ದಿನಗಳಲ್ಲಿ ನೀರು ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ರಾಗಿ ಮತ್ತು ಭತ್ತ ಬೆಳೆಯಲು ಮಾತ್ರ ಈ ನೀರನ್ನು ಬಳಸಿಕೊಳ್ಳುವಂತೆ ಶಿವಕುಮಾರ್ ರೈತರಿಗೆ ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ರೈತ ಸಂಘದ ಕೆ.ಎಸ್ ಪುಟ್ಟಣ್ಣಯ್ಯ, ಮಂಡ್ಯ ಜಿಲ್ಲೆ ಶಾಸಕರುಗಳಾದ ಚೆಲುವರಾಯ ಸ್ವಾಮಿ, ಡಿ.ಸಿ ತಮ್ಮಣ್ಣ, ರಮೇಶ್ ಬಂಡಿ ಸಿದ್ದೇಗೌಡ, ಸಂಸದ ಸಿಎಸ್ ಪುಟ್ಟರಾಜ ಸಭೆಯಲ್ಲಿ ಉಪಸ್ಥಿತರಿದ್ದರು.
Advertisement