ಪೋಷಕರೇ ಗಮನಿಸಿ: ಮೆಟ್ರೋ ರೈಲಿನೊಳಗೆ ಮಕ್ಕಳು ಬಲೂನ್, ಬಾಲ್ ಕೊಂಡೊಯ್ಯುವಂತಿಲ್ಲ

ಏಪ್ರಿಲ್ 30 ರಂದು ಮೆಟ್ರೋ ಉದ್ಘಾಟನೆ ವೇಳೆ ಕಲರ್ಫುಲ್ ಲುಕ್ ನೀಡಿದ್ದ ಬಣ್ಣ ಬಣ್ಣದ ಬಲೂನ್ ಗಳಿಗೆ ಮೆಟ್ರೋ ನಿಷೇಧ ಹೇರಿದೆ....
ಮೆಟ್ರೋ ನಿಲ್ದಾಣದಲ್ಲಿ ಬಲೂನ್ ಹಿಡಿದ ಪ್ರಯಾಣಿಕರು
ಮೆಟ್ರೋ ನಿಲ್ದಾಣದಲ್ಲಿ ಬಲೂನ್ ಹಿಡಿದ ಪ್ರಯಾಣಿಕರು

ಬೆಂಗಳೂರು; ಏಪ್ರಿಲ್ 30 ರಂದು ಮೆಟ್ರೋ ಉದ್ಘಾಟನೆ ವೇಳೆ ಕಲರ್ಫುಲ್ ಲುಕ್ ನೀಡಿದ್ದ ಬಣ್ಣ ಬಣ್ಣದ  ಬಲೂನ್ ಗಳಿಗೆ ಮೆಟ್ರೋ ನಿಷೇಧ ಹೇರಿದೆ.

ಮೆಟ್ರೋ ರೈಲಿನಲ್ಲಿ ಯಾವ್ಯಾವ ವಸ್ತುಗಳನ್ನು ಕೊಂಡೊಯ್ಯಬಾರದು ಎಂಬ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ತಿಳಿಸಲಾಗಿದೆ. ಜೊತೆಗೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕರಪತ್ರ ಕೂಡ ಹಂಚಲಾಗುತ್ತಿದೆ.

ಬಲೂನ್ ಯಾವ ಸಂದರ್ಭದಲ್ಲಾದರೂ ಒಡೆಯಬಹುದಾಗಿದೆ.  ಭಯೋತ್ಪಾದಕರ ದಾಳಿ ಬಗ್ಗೆ ಎಲ್ಲೆಡೆ ಗಾಳಿ ಸುದ್ದಿ ಹರಡುತ್ತಿದ್ದು, ಬಲೂನ್ ಒಡೆಯುವ ಶಬ್ದ ಪ್ರಯಾಣಿಕರಲ್ಲಿ ಆತಂಕ ತರುತ್ತದೆ. ಬಾಂಬ್ ಸ್ಫೋಟ ಆಗಿರಬಹುದೆಂದು ಪ್ರಯಾಣಿಕರು ಭಯ ಬಿಳುತ್ತಾರೆ. ಹೀಗಾಗಿ ಮೆಟ್ರೋ ರೈಲಿನ ಒಳಗೆ ಬಲೂನ್ ಕೊಂಡೊಯ್ಯಲು ಅವಕಾಶ ಇಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅನಿರೀಕ್ಷಿತವಾಗಿ ಕೇಳಿಸುವ ಶಬ್ದ ಹಿರಿಯ ನಾಗರಿಕರಲ್ಲಿ ಹೃದಯಾಘಾತ ಉಂಟು ಮಾಡಬಹುದು ಎಂದು ಕರ್ನಾಟಕ ಕೈಗಾರಿಕಾ ರಾಜ್ಯ ಭದ್ರತಾ ಪಡೆ ಸಿಬ್ಬಂದಿ ತಿಳಿಸಿದ್ದಾರೆ.

ಹಾಗೆಯೇ ಬಾಲ್ ಗಳನ್ನ ಸಹ ಮೆಟ್ರೋ ರೈಲಿನಲ್ಲಿ ಕೊಂಡೊಯ್ಯುವಂತಿಲ್ಲ. ಒಂದು ವೇಳೆ ಬಾಲ್ ಕೈ ಜಾರಿ ಕೆಳಗೆ ಬಿದ್ದರೇ ಅದನ್ನ ಹಿಡಿದುಕೊಳ್ಳಲು ಮಕ್ಕಳು ಅದಪ ಹಿಂದೆ ಓಡುತ್ತಾರೆ. ಒಂದು ವೇಳೆ ರೈಲು ಬರುವ ವೇಳೆ ಟ್ರ್ಯಾಕ್ ಮೇಲೆ ಬಿದ್ದರೇ ಅಪಾಯ ಎಂಬ ದೃಷ್ಟಿಯಿಂದ ಚೆಂಡುಗಳನ್ನು ತರುವುದನ್ನು ಸಹ ನಿಷೇಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com