ಟರ್ಕಿಯಲ್ಲಿ ಸೇನಾ ದಂಗೆ: ದಾವಣಗೆರೆ ಕುಸ್ತಿಪಟು ಅರ್ಜುನ್ ಸುರಕ್ಷಿತ

ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಮಧ್ಯೆಯೇ ರಾಜ್ಯದ ಕುಸ್ತಿಪಟುವೊಬ್ಬರು ಟರ್ಕಿಯಲ್ಲಿ ಸಂಕಷ್ಟಕ್ಕೆ...
ಕುಸ್ತಿಪಟು ಅರ್ಜುನ್
ಕುಸ್ತಿಪಟು ಅರ್ಜುನ್

ದಾವಣಗೆರೆ: ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಈಗಾಗಲೇ ಸಾಕಷ್ಟು ಮಂದಿಯನ್ನು ಬಲಿತೆಗೆದುಕೊಂಡಿದೆ. ಈ ಮಧ್ಯೆಯೇ ರಾಜ್ಯದ ಕುಸ್ತಿಪಟುವೊಬ್ಬರು ಟರ್ಕಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಲಾಗುತ್ತಿದ್ದು, ಇದೀಗ ಕುಸ್ತಿಪಟು ಸುರಕ್ಷಿತರಾಗಿರುವುದಾಗಿ ತಿಳಿದುಬಂದಿದೆ.

ಟರ್ಕಿಯಲ್ಲಿ ನಡೆಯದ ಅಥ್ಲೆಟಿಕ್ಸ್ ಕ್ರೀಡೂಕೂಟದ ಅಂಡರ್ 19 ಜ್ಯೂಡೋ ಕುಸ್ತಿ ಸ್ಪರ್ಧೆಯಲ್ಲಿ ಭಾರತದಿಂದ 55 ಕ್ರೀಡಾಪಟುಗಳು ಭಾಗವಹಿಸಿದ್ದರು. ಕರ್ನಾಟಕದ ದಾವಣಗೆರೆ ಮೂಲದ ಕುಸ್ತಿಪಟು ಅರ್ಜುನ್ ಮತ್ತು ಬೆಳಗಾವಿಯಿಂದ ಗೀತಾ ಎಂಬ ಇಬ್ಬರು ಕ್ರೀಡಾಪಟುಗಳು ಟರ್ಕಿಗೆ ತೆರಳಿದ್ದರು.

ಕುಸ್ತಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಅರ್ಜುನ್ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಪಂದ್ಯಾವಳಿಯಲ್ಲಿ ಜಾರ್ಜಿಯಾದ ಕುಸ್ತಿಪಟು ವಿರುದ್ಧ ಸೆಣಸಾಡಿದ್ದ ಅರ್ಜುನ್ ಹಲುಕುರ್ಕಿ ಅವರು 8-4 ಪಾಯಿಂಟ್ ಗಳಿಸಿ ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

ಬೆಳಗಾವಿಯ ಗೀತಾ ಕೂಡ ಕ್ರೀಡಾಕೂಟದಲ್ಲಿ ಭಾಗಿಯಾಗಿ ತಾಯ್ನಾಡಿಗೆ ವಾಪಸ್ಸಾಗುವ ಖುಷಿಯಲ್ಲಿದ್ದರು. ಆದರೆ, ಟರ್ಕಿಯಲ್ಲಿ ಉಂಟಾಗಿರುವ ಸೇನಾ ದಂಗೆ ಕ್ರೀಡಾಪಟುಗಳು ಸಂಕಷ್ಟಕ್ಕೆ ಸಿಲುವಂತೆ ಮಾಡಿತ್ತು. ಇದರಂತೆ ಕೆಲ ದಿನಗಳ ಹಿಂದೆ ಕ್ರೀಡಾ ನಿಲಯದ ಕುಸ್ತಿ ತರಬೇತುದಾರನಿಗೆ ಕರೆ ಮಾಡಿರುವ ಅರ್ಜುನ್ ಅವರು, ನಾವು ಸುರಕ್ಷಿತರಾಗಿದ್ದೇವೆ. ಅಧಿಕಾರಿಗಳು ನಮಗೆ ರಕ್ಷಣೆ ನೀಡುತ್ತಿದ್ದಾರೆ. ಪ್ರಸ್ತುತ ನಾವು ಟರ್ಕಿಯ ಟ್ರಬ್ಜಾನ್ ವಿಮಾನ ನಿಲ್ದಾಣದ ಬಳಿಯಲ್ಲಿದ್ದೇವೆಂದು ಹೇಳಿಕೊಂಡಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com