ಗೊಲ್ಲರ ಸಮುದಾಯದಲ್ಲಿ ಸಾಮಾಜಿಕ ಬಹಿಷ್ಕಾರ ಪದ್ಧತಿ ಇನ್ನೂ ಜೀವಂತ; ನಿಯಮ ಮುರಿದವರಿಗೆ ಶಿಕ್ಷೆ ಘೋರ

ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ, ಜನಜಾಗೃತಿ ಮೂಡಿಸಿದರೂ ಸಹ ಬೆಳಗಾವಿಯ ಬೈಲಹೊಂಗಲ ಪಟ್ಟಣದ ಗೊಲ್ಲರಹಟ್ಟಿ ...
ಕಬ್ಬಿಣದ ಸಲಾಕೆಯಿಂದ ಏಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ಲಕ್ಷ್ಮಣ್ ಗೊಲ್ಲರ್
ಕಬ್ಬಿಣದ ಸಲಾಕೆಯಿಂದ ಏಟು ತಿಂದು ಆಸ್ಪತ್ರೆಗೆ ದಾಖಲಾಗಿರುವ ಲಕ್ಷ್ಮಣ್ ಗೊಲ್ಲರ್
Updated on: 
ಬೆಳಗಾವಿ: ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ, ಜನಜಾಗೃತಿ ಮೂಡಿಸಿದರೂ ಸಹ ಬೆಳಗಾವಿಯ ಬೈಲಹೊಂಗಲ ಪಟ್ಟಣದ ಗೊಲ್ಲರಹಟ್ಟಿ ಸುತ್ತಮುತ್ತ ಇನ್ನೂ ಕೂಡ ಸಾಮಾಜಿಕ ಬಹಿಷ್ಕಾರ ಜೀವಂತವಾಗಿದೆ.
ಗ್ರಾಮದಲ್ಲಿರುವ ಗೊಲ್ಲರ ಸಮುದಾಯದ ಐದು ಜನ ಪಂಚರು(ಯಾವುದೇ ವಿಷಯಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಹಿರಿಯರು) ಇಡೀ ಪ್ರದೇಶದ ಜನರನ್ನು ಸರ್ವಾಧಿಕಾರಿಗಳಂತೆ ನಿಯಂತ್ರಿಸುತ್ತಿದ್ದು, ಸುಮಾರು 30 ಕುಟುಂಬಗಳನ್ನು ಹೊರಹಾಕಿದ್ದಾರೆ.
ಇವರು ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದಾರೆ. ಅದು ಅವರ ಇಷ್ಟದಂತೆ ನಡೆದುಕೊಂಡು ಹೋಗುತ್ತಿದೆ. ಅವರು ಮಾಡಿದ್ದೇ ನಿಯಮ ಎನ್ನುವ ರೀತಿಯಲ್ಲಿದೆ. ಆ ಕಾನೂನನ್ನು ಮುರಿದವರಿಗೆ ಸಿಗುವ ಶಿಕ್ಷೆ ಮಾತ್ರ ಘೋರ.
ಇವರ ಶಿಕ್ಷೆಯ ಪರಿಣಾಮವಾಗಿ ಗ್ರಾಮದ ಸುಮಾರು 100 ಮಂದಿ ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಗೊಲ್ಲರ ಸಮುದಾಯದವರು ಹಂದಿ ಸಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಪಂಚರಿಂದ ಪಡೆದ ಸಾಲವನ್ನು ಹಿಂತಿರುಗಿಸಲಾಗದಿದ್ದರೆ ಅವರ ಮನೆಯಿಂದ ಹೊರಹಾಕಲಾಗುತ್ತದೆ. ಕಿರುಕುಳ ತಾಳಲಾರದೆ ಪ್ರದೇಶ ಬಿಟ್ಟ ಜನರು ಬೈಲಹೊಂಗಲ ಪಟ್ಟಣದ ಅನೇಕ ಕಡೆ ಆಶ್ರಯ ಪಡೆದಿದ್ದಾರೆ.
ಪಂಚರ ಈ ದುಷ್ಕೃತ್ಯ ಆರು ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ತೊಂದರೆ ನೀಡದಂತೆ ಸೂಚಿಸಿದ್ದರು. ಸಾಲ ಪಡೆದುಕೊಂಡ ಒಬ್ಬಾತ ಅದನ್ನು ತೀರಿಸಲಾಗದೆ ಸವದತ್ತಿ ಪಟ್ಟಣದಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಆತನಿಗೆ ಈ ಪಂಚರು ಕೋಲು ಮತ್ತು ಕಬ್ಬಿಣದ ಸಲಾಕೆಯಿಂದ ಜುಲೈ 12ರಂದು ಬಾಸುಂಡೆ ಬರುವಂತೆ ಹೊಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com