ಹುಬ್ಳಳ್ಳಿ: ಖಾಸಗಿ ಬಸ್ ಗೆ ಬೆಂಕಿ, ಮೂವರ ಸಜೀವ ದಹನ

ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಪ್ರಯಾಣಿಕರು ಸಜೀವವಾಗಿ ದಹನವಾದ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಬೆಂಕಿಗಾಹುತಿಯಾದ ಬಸ್ (ಸಾಂದರ್ಭಿಕ ಚಿತ್ರ)
ಬೆಂಕಿಗಾಹುತಿಯಾದ ಬಸ್ (ಸಾಂದರ್ಭಿಕ ಚಿತ್ರ)

ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಪ್ರಯಾಣಿಕರು ಸಜೀವವಾಗಿ ದಹನವಾದ ಭೀಕರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿ ಹೊರವಲಯದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯ ಸಮೀಪದ ವರೂರು ಸಮೀಪ ಈ ಭೀಕರ ದುರ್ಘಟನೆ ಸಂಭವಿಸಿದ್ದು, ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ  ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅವಘಡಕ್ಕೀಡಾದ ಖಾಸಗಿ ಬಸ್ ದುರ್ಗಾಂಬಾ ಟ್ರಾವೆಲ್ಸ್ ಎಂಬ ಸಂಸ್ಥೆಗೆ ಸೇರಿದ್ದು ಎಂದು ತಿಳಿದುಬಂದಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿ,  8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಮತ್ತು ಕೆಎಲ್ ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಏನಿದು ಘಟನೆ?
ದುರ್ಗಾಂಬಾ ಟ್ರಾವೆಲ್ಸ್ ಗೆ ಸೇರಿದ್ದ ಖಾಸಗಿ ಸ್ಲೀಪರ್ ಬಸ್ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ 15 ಮಂದಿ ಪ್ರಯಾಣಿಕರನ್ನು ಹೊತ್ತು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿತು. ಬೆಳಗ್ಗೆ 6  ಗಂಟೆ ಹೊತ್ತಿಗೆ ಬಸ್ ಹುಬ್ಳಳ್ಳಿ ಬಸ್ ನಿಲ್ದಾಣ ತಲುಪಬೇಕಿತ್ತು. ನಿಲ್ದಾಣ ತಲುಪಲು ಇನ್ನು ಕೇವಲ 20 ನಿಮಿಷಗಳಿರುವಾಗ ವರೂರು ಸಮೀಪ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ  ನೋಡುತ್ತಿದ್ದಂತೆಯೇ ಬೆಂಕಿ ಕೆನ್ನಾಲಿಗೆ ಹೆಚ್ಚಾಗಿದೆ. ಚಾಲಕ ಬಸ್ ನಿಲ್ಲಿಸುವ ಹೊತ್ತಿಗೆ ಬಸ್ ಹಿಂಬದಿಯಲ್ಲಿದ್ದ ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. ಅಲ್ಲದೆ ಇತರೆ 8 ಮಂದಿ  ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಸಂಪೂರ್ಣ ಬಸ್ಮವಾಗಿದ್ದು, ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಶತ ಪ್ರಯತ್ನ  ನಡೆಸಿದರು. ಆದರೆ ಬಸ್ ನಲ್ಲಿದ್ದ ರಾಸಾಯನಿಕಗಳಿಂದಾಗಿ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿ ಬಸ್ ಸಂಪೂರ್ಣ ಭಸ್ಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com