ಆಟೋದಲ್ಲಿ ಕಳ್ಳ ಕ್ಯಾಮೆರಾ, ಮಾಡೆಲ್‌ಗೆ ಲೈಂಗಿಕ ಕಿರುಕುಳ ನೀಡಿದ ಚಾಲಕನ ಬಂಧನ

ಸಿಲಿಕಾನ್ ಸಿಟಿಯ ಆಟೋವೊಂದರಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ಮಹಿಳೆಯರ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಸಿಲಿಕಾನ್ ಸಿಟಿಯ ಆಟೋವೊಂದರಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿಕೊಂಡು ಮಹಿಳೆಯರ ಚಿತ್ರಗಳನ್ನು ಸೆರೆ ಹಿಡಿಯುತ್ತಿದ್ದ ಆಟೋ ಚಾಲಕನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.
ಮಾಡೆಲ್‌ ಒಬ್ಬಳು ಕಳೆದ ಭಾನುವಾರ ರಿಚ್‌ಮಂಡ್‌ ಟೌನ್‌ ಪ್ರದೇಶದಲ್ಲಿ ಆಟೋ ಹತ್ತಿದ್ದಾಗ ಈ ಘಟನೆ ನಡೆದಿದ್ದು. ಪ್ರಯಾಣದ ವೇಳೆ ರಸ್ತೆ ಗುಂಡಿ ತಪ್ಪಿಸುವಾಗ  ಆಟೋ ಟಾಪ್‌ನಿಂದ ಉದುರಿಬಿದ್ದ ಕ್ಯಾಮರಾ ಆನ್‌ ಆಗಿದ್ದ ಮೊಬೈಲ್‌ ಕಂಡು ಮಾಡೆಲ್‌ ದಿಗಿಲಾಗಿದ್ದಾಳೆ. ಈ ವೇಳೆ ಚಾಲಕ ನನ್ನು ಪ್ರಶ್ನಿಸಿದ್ದಾಳೆ. ಉತ್ತರ ನೀಡಲು ಹೆದರಿದ ಚಾಲಕ ತಡಬಡಾಯಿಸಿದ್ದಾನೆ, ಅಲ್ಲದೆ ಪದೇ ಪದೇ ಕ್ಷಮೆ ಕೇಳಿದ್ದಾನೆ. 
ಸ್ಥಳಕ್ಕೆ ತಲುಪಿದ ಬಳಿಕ ಮಾಡೆಲ್‌ ಕೈಯಿಂದ ಮೊಬೈಲ್‌ ಕಸಿದುಕೊಳ್ಳಲು ಯತ್ನಿಸಿದ. ಈ ವೇಳೆ ಆಕೆ ನಾಲ್ಕೇಟು ಬಾರಿಸಿದ್ದಾಳೆ. 
ಈ ಎಲ್ಲಾ ವಿಚಾರವನ್ನು ಕಿರುಕುಳಕ್ಕೊಳಗಾದ ಮಾಡೆಲ್‌ 'ಹಲೋ ಮಹಿಳೆಯರೆ  ದಯವಿಟ್ಟು ಓದಿ.ನಿರ್ಲಕ್ಷಿಸಬೇಡಿ ...' ಎಂದು ಬೆಂಗಳೂರು ಪೊಲೀಸರನ್ನು ಟ್ಯಾಗ್‌ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್‌ ಮಾಡಿದ್ದಳು. 
ಇಷ್ಟೇಲ್ಲಾ ನಡೆದರೂ ಕೆಲ ಸಾರ್ವಜನಿಕರು ನೋಡುತ್ತಾ ನಿಂತಿದ್ದರೆ ಹೊರತು ಯಾರು ನನ್ನ ನೆರವಿಗೆ ಬಂದಿಲ್ಲ  ಎಂದು ಮಾಡೆಲ್‌ ಅಳಲು ತೋಡಿಕೊಂಡಿದ್ದಾಳೆ. 
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಬ್ಬನ್‌ ಪಾರ್ಕ್‌ ಪೊಲೀಸರು, ಘಟನೆ ಬಳಿಕ ನಾಪತ್ತೆಯಾಗಿದ್ದ ಚಾಲಕ ರಂಜಿತ್‌ ಎಂಬಾತನನ್ನು ಇಂದು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com